For Quick Alerts
  ALLOW NOTIFICATIONS  
  For Daily Alerts

  ಜನತಾ ಕರ್ಪ್ಯೂ ಬಗ್ಗೆ ರಜನೀಕಾಂತ್ ಹಾಕಿದ್ದ ವಿಡಿಯೋ ಡಿಲೀಟ್ ಮಾಡಿದ ಟ್ವಿಟ್ಟರ್

  |

  ಸೂಪರ್ ಸ್ಟಾರ್ ರಜನೀಕಾಂತ್ ಅವರು ಜನತಾ ಕರ್ಪ್ಯೂ ಮಾತನಾಡಿ ಅಪ್‌ಲೋಡ್ ಮಾಡಿದ್ದ ವಿಡಿಯೋವನ್ನು ಟ್ವಿಟ್ಟರ್ ಡಿಲೀಟ್ ಮಾಡಿದೆ.

  ವಿಡಿಯೋದಲ್ಲಿ ರಜನೀಕಾಂತ್ ಅವರು ಮೋದಿ ಕರೆ ನೀಡಿದ್ದ 'ಜನತಾ ಕರ್ಪ್ಯೂ' ಗೆ ಬೆಂಬಲ ಸೂಚಿಸಿದ್ದರು. ವಿಡಿಯೋವನ್ನು ಹಲವು ಮಂದಿ ಮೆಚ್ಚಿಕೊಂಡಿದ್ದರು. ಆದರೆ ಈ ವಿಡಿಯೋವನ್ನು ಕೆಲವೇ ಗಂಟೆಗಳಲ್ಲಿ ಟ್ವಿಟ್ಟರ್ ಡಿಲೀಟ್ ಮಾಡಿದೆ.

  ವಿಡಿಯೋದಲ್ಲಿ ಕೆಲವು ಸುಳ್ಳು ಸುದ್ದಿಗಳು ಅಥವಾ ಜನರನ್ನು ಹಾದಿ ತಪ್ಪಿಸುವ ಅಂಶಗಳು ಇದ್ದವು ಎಂಬ ಕಾರಣಕ್ಕೆ ವಿಡಿಯೋವನ್ನು ಟ್ವಿಟ್ಟರ್ ಡಿಲೀಟ್ ಮಾಡಿದೆ.

  ಮೂರನೇ ಹಂತಕ್ಕೆ ಹೋಗದಂತೆ ತಡೆಯಿರಿ: ರಜನೀಕಾಂತ್‌

  ಮೂರನೇ ಹಂತಕ್ಕೆ ಹೋಗದಂತೆ ತಡೆಯಿರಿ: ರಜನೀಕಾಂತ್‌

  ವಿಡಿಯೋದ ಆರಂಭದಲ್ಲಿಯೇ, ''ಕೊರೊನಾ ವೈರಸ್ ಹರಡುವಿಕೆಯು ಮೂರನೇ ಹಂತಕ್ಕೆ ಹೋಗದಂತೆ ತಡೆಯಬೇಕಿದೆ, ಹಾಗಾಗಿ ಈ ಜನತಾ ಕರ್ಪ್ಯೂ ಅಗತ್ಯವಿದೆ'' ಎಂದು ರಜನೀಕಾಂತ್ ಹೇಳಿದ್ದರು.

  ಇಟಲಿಗೆ ಉದಾಹರಣೆ ನೀಡಿದ್ದ ರಜನೀಕಾಂತ್

  ಇಟಲಿಗೆ ಉದಾಹರಣೆ ನೀಡಿದ್ದ ರಜನೀಕಾಂತ್

  ಇಟಲಿಗೆ ಇಂತಹುದ್ದೇ ಎಚ್ಚರಿಕೆಯನ್ನು ನೀಡಲಾಗಿತ್ತು, ಆದರೆ ಅವರು ನಿರ್ಲಕ್ಷ್ಯ ಮಾಡಿದರು, ಇದರ ಪರಿಣಾಮ ಅಲ್ಲಿ ಸಾವಿರಾರು ಜೀವಗಳು ಬಲಿಯಾಗಿವೆ, ಭಾರತದಲ್ಲಿ ಹಾಗೆ ಆಗುವುದು ಬೇಡ ಎಂದು ಟ್ವಿಟ್ಟರ್‌ ನಲ್ಲಿ ರಜನೀಕಾತ್ ಮನವಿ ಮಾಡಿದ್ದರು.

  14 ಗಂಟೆ ಮಾತ್ರವೇ ಬದುಕಿರುತ್ತೆ ಎಂದಿದ್ದ ರಜನೀಕಾಂತ್

  14 ಗಂಟೆ ಮಾತ್ರವೇ ಬದುಕಿರುತ್ತೆ ಎಂದಿದ್ದ ರಜನೀಕಾಂತ್

  ಹೊರಗಿನ ವಾತಾವರಣದಲ್ಲಿ ಕೊರೊನಾ ವೈರಸ್ 14 ಗಂಟೆ ಕಾಲ ಮಾತ್ರವೇ ಇರುತ್ತದೆ, ಹಾಗಾಗಿ ನಾವು ಮನೆಯಲ್ಲಿಯೇ ಉಳಿದು ಅದು ಹರಡದಂತೆ ತಡೆದು ಮೂರನೇ ಹಂತದ ಹರಡುವಿಕೆಗೆ ಹೋಗದಂತೆ ತಡೆಯಬೇಕಿದೆ ಎಂದು ರಜನೀಕಾಂತ್ ವಿಡಿಯೋದಲ್ಲಿ ಹೇಳಿದ್ದರು. ಇದೇ ಕಾರಣಕ್ಕೆ ವಿಡಿಯೋ ಡಿಲೀಟ್ ಆಗಿದೆ.

  ಕೊರೊನಾ ಎಷ್ಟು ಗಂಟೆ ಬದುಕಿರುತ್ತದೆ?

  ಕೊರೊನಾ ಎಷ್ಟು ಗಂಟೆ ಬದುಕಿರುತ್ತದೆ?

  ಹೊರಗಿನ ವಾತಾವರಣದಲ್ಲಿ ಕೊರೊನಾ ವೈರಸ್ 14 ಗಂಟೆ ಮಾತ್ರವೇ ಬದುಕಿರುತ್ತದೆ ಎಂಬುದು ಸುಳ್ಳಾಗಿದ್ದು, ಕೊರೊನಾ ವೈರಸ್ ಇಂತಿಷ್ಟೇ ಗಂಟೆಗಳು ಬದುಕಿರುತ್ತದೆ ಎಂಬುದು ನಿಖರವಾಗಿ ಗೊತ್ತಿಲ್ಲ, ಹಾಗಾಗಿ ರಜನೀಕಾಂತ್ ಅವರ ವಿಡಿಯೋವನ್ನು ಟ್ವಿಟ್ಟರ್ ಡಿಲೀಟ್ ಮಾಡಿದೆ.

  English summary
  Rajinikanth posted a video in twitter supporting Janatha curfew, But Twitter deleted the video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X