Don't Miss!
- News
ಹೆಂಡತಿಗೆ ವಿಚ್ಛೇದನ ನೀಡಿ ಮಗನತ್ತ ಕಣ್ಣೆತ್ತಿಯೂ ನೋಡದ ಪತಿ!
- Sports
U-19 Women's T20 World Cup 2023: ಭಾರತ ತಂಡವನ್ನು ಭೇಟಿ ಮಾಡಿದ 'ಚಿನ್ನದ ಹುಡುಗ' ನೀರಜ್ ಚೋಪ್ರಾ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೋಮಲ್ ವಿರುದ್ಧ ಭ್ರಷ್ಟಾಚಾರ ಆರೋಪ: ಜಗ್ಗೇಶ್ ಹಳೆಯ ಟ್ವೀಟ್ ವೈರಲ್
ಕನ್ನಡದ ಖ್ಯಾತ ನಟ ಜಗ್ಗೇಶ್ ಅವರ ಸಹೋದರ ಕೋಮಲ್ ಕುಮಾರ್ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಬಿಬಿಎಂಪಿ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳಿಗೆ ಸ್ವೆಟರ್ ಹಂಚುವ ಟೆಂಡರ್‌ನ್ನು ಕೋಮಲ್ ಪಡೆದಿದ್ದರು. ಶಾಲೆಗಳು ಆರಂಭವಿಲ್ಲದ ಈ ಸಮಯದಲ್ಲಿ ಮಕ್ಕಳಿಗೆ ಸ್ವೆಟರ್ ವಿತರಣೆಯೇ ಆಗಿಲ್ಲ. ಆದರೂ ಕೋಮಲ್ ಹೆಸರಿನಲ್ಲಿ ಒಂದು ಕೋಟಿಗೂ ಹೆಚ್ಚು ಮೊತ್ತದ ಬಿಲ್ ನೀಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಸದಸ್ಯರು ಬಿಬಿಎಂಪಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ ಮಾಡಿದರು.
ಈ ಆರೋಪದ ಬಗ್ಗೆ ಕೋಮಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ''ಆ ಪ್ರಕರಣಕ್ಕೂ ನನಗೂ ಸಂಬಂಧವೇ ಇಲ್ಲ. ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ. ನನ್ನ ಅಣ್ಣನವರ ಹೆಸರು (ಜಗ್ಗೇಶ್) ಕೆಲವು ಅಧಿಕಾರಿಗಳ ಹೆಸರನ್ನು ಎಳೆದು ತರಲಾಗುತ್ತಿದೆ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ನಾನು ಆ ಟೆಂಡರ್ ಪಡೆಯಲು ಪ್ರಯತ್ನವೇ ಮಾಡಿಲ್ಲ. ಆ ಟೆಂಡರ್ ನನಗೆ ಸಿಕ್ಕಿಯೂ ಇಲ್ಲ.'' ಎಂದು ಹೇಳಿದ್ದರು.
ಸಾವಿನ
ಮನೆ
ಬಾಗಿಲು
ತಟ್ಟಿ
ವಾಪಸ್ಸಾದ
ಕೋಮಲ್:
ರಾಯರ
ಪವಾಡ
ಎಂದ
ಜಗ್ಗೇಶ್
ಇದೇ ಆರೋಪಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ ಸಹ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದು, ''ಎಲ್ಲೋ ಮಾಡಿದ ವಿಷಯಕ್ಕೆ ನನ್ನ ಹೆಸರು ಏಕೆ ತಂದಿರಿ. ನೀವು ನ್ಯಾಯಪರ ಹೋರಾಟ ಮಾಡಿ ನನ್ನ ಬೆಂಬಲವು ಇರುತ್ತದೆ. ಆದರೆ ನನಗು ಇದಕ್ಕು ಯಾವ ಸಂಬಂಧವಿಲ್ಲಾ ಆದರು ನನ್ನ ಹೆಸರು ಏಕೆ ತಂದಿರಿ. ಯಾವ ಪುರುಷಾರ್ಥಕ್ಕೆ? ನಾನು ತಪ್ಪು ಮಾಡಲ್ಲಾ ತಲೆಯು ಬಾಗಿಸೋಲ್ಲಾ. ನನ್ನ ಕೋಟ್ಯಾಂತರ ಅಭಿಮಾನಿಗಳಿಗೆ ತಪ್ಪು ಸಂದೇಶ ರವಾನಿಸುವ ಕಾರ್ಯ ಮಾಡಿದ್ದೀರಿ ಕ್ಷಮೆಯಿಲ್ಲಾ'' ಎಂದು ತಿಳಿಸಿ ಮಾನನಷ್ಟ ಮೊಕದ್ದಮೆ ಹೂಡಿರುವ ಪ್ರತಿ ಹಂಚಿಕೊಂಡಿದ್ದಾರೆ.
ಈ ಪ್ರಕರಣ ಬೆಳಕಿಗೆ ಬರುತ್ತಿದೆ ನಟ ಜಗ್ಗೇಶ್ ಅವರ ಈ ಹಿಂದೆ ತಮ್ಮ ಸಹೋದರನ ಬಗ್ಗೆ ಮಾಡಿದ್ದ ಹಳೆಯ ಟ್ವೀಟ್ ಚರ್ಚೆಗೆ ಕಾರಣವಾಗಿದೆ. ಬಿಬಿಎಂಪಿಯಲ್ಲಿ ಯಾವುದೇ ವ್ಯವಹಾರ ಇಲ್ಲ ಎಂದು ಕೋಮಲ್ ಹೇಳ್ತಿದ್ದಾರೆ. ಆದರೆ, ಕಳೆದ ಏಪ್ರಿಲ್ ತಿಂಗಳಲ್ಲಿ ಜಗ್ಗೇಶ್ ಟ್ವೀಟ್ ಮಾಡಿ, ''ಕೋಮಲ್ ಬೆಂಗಳೂರು ಕಾರ್ಪೊರೇಷನ್‌ನಲ್ಲಿ ಹೊಸ ವ್ಯವಹಾರಕ್ಕೆ ಕೈಹಾಕಿ ಯಶಸ್ಸು ಕಂಡಿದ್ದಾನೆ'' ಎಂದು ತಿಳಿಸಿದ್ದರು. ಹಳೆಯ ಟ್ವೀಟ್‌ನಲ್ಲಿ ಏನಿದೆ? ಮುಂದೆ ಓದಿ...
ಕೋಮಲ್
ವಿರುದ್ಧ
ಭ್ರಷ್ಟಾಚಾರ
ಆರೋಪ:
ಸಂಬಂಧವೇ
ಇಲ್ಲ
ಎಂದ
ನಟ

ಏಪ್ರಿಲ್ 27 ರಂದು ಜಗ್ಗೇಶ್ ಮಾಡಿದ್ದ ಟ್ವೀಟ್
''ನಾನು ಇಷ್ಟು ದಿನ ಮುಚ್ಚಿಟ್ಟು ಪಡುತ್ತಿದ್ದ ಯಾತನೆ ರಾಯರಿಗೆ ಮಾತ್ರ ಗೊತ್ತು. ಭಕ್ತನ ಗುರುಗಳ ನಡುವೆ ನಡೆದಿತ್ತು ಭಾವನಾತ್ಮಕ ಭಕ್ತಿಯ ಬೇಡಿಕೆ. ಅದು ಒಂದೆ ರಾಯರೆ ನಾನು ಕಾಯವಾಚಮನ ಸತ್ಯವಾಗಿ ನಡೆದುಕೊಂಡಿದ್ದರೆ, ಹೃದಯದಿಂದ ಒಳ್ಳೆಯತನ ಅನುಸರಿಸಿದ್ದರೆ, ಮನುಷ್ಯ ಪಕ್ಷಿ ಪ್ರಾಣಿಯ ಆತ್ಮದಲ್ಲಿ ಸಮಾನವಾಗಿ ದೇವರಿದ್ದಾನೆ ಎಂದು ನಂಬಿದ್ದರೆ, ಯಾರಿಗು ಕೇಡುಬಯಸದೆ ಮೋಸ ವಂಚನೆ ಅನ್ಯಾಯ ಮಾರ್ಗದಲ್ಲಿ ನಡೆದು ನೊಂದವರಿಗೆ ನಂಬಿದವರಿಗು ಭುಜಕೊಟ್ಟು ಬದುಕಿದ್ದರೆ, ನನ್ನ ತಂದೆ ತಾಯಿಯನ್ನು ನೋಹಿಸದೆ ಉತ್ತಮ ಮಗನಂತೆ ಸಂತೈಸಿದ್ದರೆ, ಅನ್ನ ಕೊಟ್ಟ ಶಾರದೆ ಸೇವೆ ನಿಷ್ಟೆಯಿಂದ ಮಾಡಿದ್ದರೆ, ಕಾಯಕ ಮಾಡುವ ಎಲ್ಲಾ ಕ್ಷೇತ್ರದಲ್ಲು ಪ್ರಾಮಾಣಿಕನಾಗಿದ್ದರೆ, ರಾಯರು ನನ್ನ ಹೃದಯಲ್ಲಿದ್ದರೆ ಸಾವಿನ ಮನೆ ಕದ ತಟ್ಟುತ್ತಿರುವ ನನ್ನ ತಮ್ಮನಿಗೆ ಸಾವು ಗೆಲ್ಲುವ ಶಕ್ತಿ ನೀಡಿ ಎಂದು. ರಾಯರು ನನ್ನ ಬೇಡಿಕೆಗೆ ಬೃಂದಾವನದಿಂದ ಎದ್ದುಬಂದು ಪಕ್ಕನಿಂತು ಅವನ ಉಳಿಸಿಬಿಟ್ಟರು. komal is safe'' ಎಂದು ಏಪ್ರಿಲ್ 27 ರಂದು ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು.

ಸ್ವಂತ ವ್ಯವಹಾರ ಮಾಡಿ ಯಶಸ್ಸು ಕಂಡ
''ಚಿತ್ರರಂಗದಲ್ಲಿ ಸಂಕಷ್ಟ ಅನುಭವಿಸಿದ ಕೋಮಲ್ ಸ್ವಾಭಿಮಾನದಿಂದ ಬದುಕಲು ಸ್ವಂತ ವ್ಯವಹಾರ ಬೆಂಗಳೂರಿನ ಕಾರ್ಪೊರೇಷನ್‌ನಲ್ಲಿ ಶುರು ಮಾಡಿ ಯಶಸ್ವಿಯಾದ. ಆದರೆ ಇತ್ತೀಚೆಗೆ ತನಗೆ ಬರಬೇಕಾದ ಬಿಲ್‌ಗೆ ಅಲ್ಲಿನ ಕೆಲ ಲಂಚಬಾಕ ಅಧಿಕಾರಿಗಳು ಹಣಕ್ಕೆ ಪೀಡಿಸಿ ಅಲೆಸಿಬಿಟ್ಟರು. ಅದ ಪಡೆಯಲು ದಿನ ಓಡಾಡುತ್ತಿದ್ದ ತಮ್ಮನಿಗೆ ಕೊರೋನ ಮಾರಿ ಮೈಸೇರಿ ತುಂಬ serious ಆಗಿಬಿಟ್ಟ. ದೇವರಿಗೆ ಗೊತ್ತು ನಾನು ಎಲ್ಲರಿಂದ ಮುಚ್ಚಿಟ್ಟು ಅಣ್ಣನಾಗಿ ಅವನ ಉಳಿಸಿಕೊಂಡ ಕಷ್ಟ. ಅವನಿಗೆ ಸಹಾಯಮಾಡಿದ ಡಾ: ಮಧುಮತಿ,ನಾದನಿ ಡಾ ಲಲಿತ ನರ್ಸಗಳ ಪಾದಕ್ಕೆ ನನ್ನ ನಮನ, ರಾಯರೆ'' ಎಂದು ಪೋಸ್ಟ್ ಮಾಡಿ ಬಿಬಿಎಂಪಿಯಲ್ಲಿ ವ್ಯವಹಾರ ಮಾಡಿರುವುದನ್ನು ಹೇಳಿದ್ದರು.

ಅದಕ್ಕೂ ಇದಕ್ಕೂ ಸಂಬಂಧವಿದ್ಯಾ?
ಅಂದು ಜಗ್ಗೇಶ್ ಅವರ ಕೊಟ್ಟ ಮಾಹಿತಿಗೂ, ಇಂದು ಕೋಮಲ್ ಕುಮಾರ್ ಅವರ ಮೇಲೆ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧ ಇದ್ಯಾ ಗೊತ್ತಿಲ್ಲ. ಆದರೆ, ಕಾರ್ಪೊರೇಷನ್ ಜೊತೆ ವ್ಯವಹಾರವೊಂದನ್ನು ಮಾಡಿದ್ದರು ಎನ್ನುವುದನ್ನ ಮಾತ್ರ ಸ್ವತಃ ಜಗ್ಗೇಶ್ ಈ ಹಿಂದೆಯೇ ಹೇಳಿಕೊಂಡಿದ್ದರು. ಸದ್ಯದ ಬೆಳವಣಿಗೆಗೆ ಆ ಹಳೆಯ ಟ್ವೀಟ್ ಚರ್ಚೆಗೆ ಕಾರಣವಾಗಿದೆ.

ಮಾನನಷ್ಟ ಕೇಸ್ ದಾಖಲು
ಇನ್ನು ಈಗಿನ ಬೆಳವಣಿಗೆಯ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಜಗ್ಗೇಶ್ ''ಸಂಬಂಧವಿಲ್ಲದೆ ನನ್ನ ಹೆಸರು ಹಾಗು ಆರ್ ಅಶೋಕರವರ ಹೆಸರು ತೆಗೆದು ಡಿಎಸ್‌ಎಸ್ ರಘು ಎಂಬುವರು ಅಪಮಾನಿಸಿದ್ದಾರೆ. ಇದು ನನಗೆ ಬಹಳ ನೋವುಂಟು ಮಾಡಿದೆ. ಹಾಗಾಗಿ ಸಂಬಂಧವಿಲ್ಲದೆ ನನ್ನ ಬಗ್ಗೆ ಸುಳ್ಳು ಆಪಾದನೆ ಮಾಡಿರುವ ಮಾನ್ಯ ರಘುರವರ ಮೇಲೆ ಮಾನನಷ್ಟ ಅಪಾದನೆ ದಾಖಲಿಸುತ್ತಿರುವೆ. ದಯಮಾಡಿ ಯಾರೆ ಆಗಲಿ ಸತ್ಯ ಅರಿತು ನುಡಿಯುವ ಗುಣ ಬೆಳಸಿಕೊಳ್ಳಿ'' ಎಂದು ಟ್ವೀಟ್ ಮಾಡಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ, ''ಮೈಬಗ್ಗಿಸಿ ದುಡಿದು ತಿನ್ನೋ ಗುಣ ಕಮ್ಮಿಯಾಗಿ ಅನಾಚಾರ ಜೀವನ ಮಾಡುವವರಿಗೆ ಸರಿಯಾದ ಮಾರ್ಗದಲ್ಲಿ ಬದುಕುವವರ ಕಂಡರೆ ಅವರನ್ನು ಅವರ ಸಾಲಿಗೆ ಎಳೆಯಲು ಯತ್ನಿಸುತ್ತಾರೆ. ತಾನು ಕಳ್ಳನಾದರೆ ಲೋಕೆವೆಲ್ಲಾ ಕಳ್ಳರನ್ನ ಮಾಡುವುದು ಕಳ್ಳರ ಲಕ್ಷಣ. ನೆನಪಿಡಿ ಕಲುಷಿತ ಕೆಸರಲ್ಲಿ ನಾನು ಕಮಲದಂತೆ ರಾಯರದಯೇಯಿಂದ ಮೇಲೆ ಬಂದು ಬಾಳುತ್ತಿರುವೆ. ಅಣಕವೆ ನನ್ನ ಯಶಸ್ಸು'' ಎಂದಿದ್ದಾರೆ.