twitter
    For Quick Alerts
    ALLOW NOTIFICATIONS  
    For Daily Alerts

    ರು.10 ಕೋಟಿ ಠೇವಣಿ ಇಡುವ ಮೂಲಕ 'ಲಿಂಗಾ' ತೆರೆಗೆ

    By ಶಂಕರ್, ಚೆನ್ನೈ
    |

    ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಭಾರಿ ಬಜೆಟ್ ಚಿತ್ರ 'ಲಿಂಗಾ' ಇದೇ ಶುಕ್ರವಾರ (ಡಿ.12) ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೆ ಈ ಚಿತ್ರಕ್ಕೆ ಹಲವಾರು ವಿಘ್ನಗಳು ಎದುರಾಗಿದ್ದು ಗೊತ್ತೇ ಇದೆ. ಅವುಗಳಲ್ಲಿ ಕೃತಿಚೌರ್ಯ ವಿವಾದವೂ ಒಂದು.

    ತನ್ನ ಕಥೆಯನ್ನು ಕದ್ದು 'ಲಿಂಗಾ' ಚಿತ್ರ ಮಾಡುತ್ತಿದ್ದಾರೆ ಎಂದು ರವಿರತ್ನಂ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದರು. ಈ ಕೇಸಿಗೆ ಸಂಬಂಧಿಸಿದಂತೆ 'ಲಿಂಗಾ' ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಅವರಿಗೆ ರು.10 ಕೋಟಿ ಠೇವಣಿ (ರು.5 ಕೋಟಿ ನಗದು ಹಾಗೂ ರು.5 ಕೋಟಿ ಬ್ಯಾಂಕ್ ಖಾತ್ರಿ) ಇಡುವಂತೆ ಚೆನ್ನೈ ಹೈಕೋರ್ಟ್ ನ ಮಧುರೈ ಪೀಠ ಸೂಚಿಸಿದೆ. [ಮೈನವಿರೇಳಿಸುವ ರಜನಿ 'ಲಿಂಗಾ' ಚಿತ್ರದ ಹೈಲೈಟ್ಸ್]

    Court Asks Producer of Lingaa Deposit Rs 10 cr

    ಈ ಬಗ್ಗೆ ಕೂಡಲೆ ಪ್ರತಿಕ್ರಿಯಿಸಿರುವ ರಾಕ್ ಲೈನ್ ವೆಂಕಟೇಶ್, "ಕೋರ್ಟ್ ಆದೇಶಕ್ಕೆ ತಲೆಬಾಗುತ್ತೇವೆ. ನ್ಯಾಯಾಲಯದ ಆದೇಶದಂತೆ ದುಡ್ಡು ಕಟ್ಟುತ್ತೇವೆ. ಚಿತ್ರವನ್ನು ನಿಗದಿತ ಸಮಯಕ್ಕೆ ಬಿಡುಗಡೆ ಮಾಡುತ್ತಿದ್ದೇವೆ" ಎಂದಿದ್ದಾರೆ. ರಜನಿಕಾಂತ್ ಅವರ 63ನೇ ಹುಟ್ಟುಹಬ್ಬದ ದಿನ ಅಂದರೆ ಡಿಸೆಂಬರ್ 12ರಂದು ಚಿತ್ರ ಬಿಡುಗಡೆಯಾಗುತ್ತಿದೆ.

    ಮುಳ್ಳಪೆರಿಯಾರ್ ಅಣೆಕಟ್ಟು ನಿರ್ಮಾಣದ ಹಿಂದಿರುವ ಪೆನ್ನಿಕ್ವಿಕ್ ಎಂಬ ಬ್ರಿಟಿಷ್ ಇಂಜಿನಿಯರ್ ಕುರಿತ ಕಥೆಯನ್ನು ತಮ್ಮ ಕೃತಿ ಒಳಗೊಂಡಿದೆ. ಈಗಾಗಲೆ ಈ ಕಥೆಯನ್ನು ಹಲವಾರು ನಿರ್ದೇಶಕರಿಗೆ ಹೇಳಿದ್ದೇನೆ. ಬಜೆಟ್ ಜಾಸ್ತಿಯಾಗುತ್ತದೆ ಎಂದು ಚಿತ್ರ ನಿರ್ಮಿಸಲು ಯಾರು ಮುಂದೆ ಬರಲಿಲ್ಲ. ತಮ್ಮ ಕಥೆಗೂ ಲಿಂಗಾ ಚಿತ್ರದ ಕಥೆಗೂ ಸಾಮ್ಯತೆಗಳಿರುವುದು ತಮ್ಮ ಗಮನಕ್ಕೆ ಬಂದಿದೆ.

    ಈ ಚಿತ್ರ ತಮ್ಮದೇ ಕಥೆಯನ್ನು ಬಳಸಿಕೊಂಡಿರುವ ಕಾರಣ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕು ಎಂದು ರವಿರತ್ನಂ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ಮದ್ರಾಸ್ ಸಿಟಿ ಸಿವಿಲ್ ಕೋರ್ಟ್ ಚಿತ್ರದ ನಿರ್ದೇಶಕ ಕೆ.ಎಸ್. ರವಿಕುಮಾರ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ಕಥೆ ಬರೆದಿರುವ ಪೊನ್ನು ಕುಮಾರ್ ಅವರಿಗೆ ನೋಟೀಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು.

    English summary
    HC bench at Madurai directed the producer to deposit Rs 10 cr (5 crore as cash and 5 crore as bank guarantee) befor 12 pm on 12th December to HC registry for screening of Rajinikanth 'Lingaa' film.
    Thursday, December 11, 2014, 18:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X