For Quick Alerts
  ALLOW NOTIFICATIONS  
  For Daily Alerts

  ತಮಿಳು ನಟ ಧನುಷ್ 'ನಮ್ಮ ಮಗ' ಎಂದ ದಂಪತಿ: ಧನುಷ್ ಗೆ ಕೋರ್ಟ್ ಸಮನ್ಸ್ ಜಾರಿ

  By Bharathkumar
  |

  ಮದುರೈ ಜಿಲ್ಲಾ ನ್ಯಾಯಾಲಯ ತಮಿಳು ನಟ ಧನುಷ್ ಗೆ ಸಮನ್ಸ್ ಜಾರಿ ಮಾಡಿದೆ. ನಟ ಧನುಷ್ ನಮ್ಮ ಮಗ ಎಂದು ಮದುರೈ ದಂಪತಿ ಸಲ್ಲಿಸಿದ್ದ ಅರ್ಜಿಯನ್ನ ವಿಚಾರಣೆ ಮಾಡಿದ ನ್ಯಾಯಾಲಯ, ನಟ ಧನುಷ್ ಅವರನ್ನ ಕೋರ್ಟಿಗೆ ಹಾಜರಾಗುವಂತೆ ಸೂಚನೆ ನೀಡಿದೆ. ಜನವರಿ 12ನೇ ತಾರೀಖಿನ ಒಳಗೆ ಕೋರ್ಟಿಗೆ ಬಂದು ಹೇಳಿಕೆ ನೀಡುವಂತೆ ಧನುಷ್ ಗೆ ಸಮನ್ಸ್ ಜಾರಿ ಮಾಡಿದೆ.

  ಅಂದ್ಹಾಗೆ, ಧನುಷ್ ನಮ್ಮ ಮಗ ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವುದು ಮದುರೈನ ಕದಿರಸನ್ (65) ಹಾಗೂ ಮೀನಾಕ್ಷಿ ದಂಪತಿ (53). ವೃತ್ತಿಯಲ್ಲಿ ಸರ್ಕಾರಿ ಬಸ್ ಕಂಡಕ್ಟರ್ ಆಗಿರುವ ಕದಿರಸನ್ ಗೆ ಒಟ್ಟು ಮೂರು ಜನ ಮಕ್ಕಳಿದ್ದು, ಅವರಲ್ಲಿ ಧನುಷ್ ಕೂಡ ಒಬ್ಬರು ಎಂಬ ಆರೋಪ ಮಾಡಿದ್ದಾರೆ.

  ಕದಿರಸನ್ ಹಾಗೂ ಮೀನಾಕ್ಷಿ ದಂಪತಿ ಹೇಳುವಂತೆ, ''ಧನುಷ್ ಅವರ ಮೊದಲ ಹೆಸರು 'ಕಲೈಸೆಲ್ವನ್'. 1985 ರಲ್ಲಿ ಮದುರೈನ ರಾಜಾಜಿ ಸರ್ಕಾರಿ ಆಸ್ವತ್ರೆಯಲ್ಲಿ ಜನಿಸಿದರು. 10ನೇ ತರಗತಿವರೆಗೂ ಮೇಲೂರಿನಲ್ಲಿ ಶಿಕ್ಷಣ ಮುಗಿಸಿದ ಧನುಷ್ ನ, 11ನೇ ತರಗತಿಗಾಗಿ ತಿರಪತ್ತೂರಿಗೆ ಕಳುಹಿಸಲಾಗಿತ್ತು. ಆದ್ರೆ, ಚಿತ್ರರಂಗದಲ್ಲಿ ಕೆಲಸ ಮಾಡುವ ಉದ್ದೇಶ ಹೊಂದಿದ್ದ ಧನುಷ್, ಶಿಕ್ಷಣವನ್ನ ಅರ್ಧಕ್ಕೆ ನಿಲ್ಲಿಸಿ ಮನೆ ಬಿಟ್ಟು ಓಡಿ ಹೋಗಿದ್ದ. ನಂತರ ತಮಿಳಿನ ಖ್ಯಾತ ನಿರ್ದೇಶಕ ಕಸ್ತೂರಿ ರಾಜ ಅವರ ಬಳಿ ಕೆಲಸಕ್ಕೆ ಸೇರಿಕೊಂಡಿದ್ದ. ನಾವು ಹಲವು ಬಾರಿ ಧನುಷ್ ಅವರನ್ನ ಬೇಟಿ ಮಾಡಲು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ'' ಎಂದು ಕೋರ್ಟಿಗೆ ತಿಳಿಸಿದ್ದಾರೆ.

  Court Issues Summons To Actor Dhanush

  ಸದ್ಯ, ಕದಿರಸನ್ ಹಾಗೂ ಮೀನಾಕ್ಷಿ ದಂಪತಿ ಅನಾರೋಗ್ಯದಿಂದ ಬಳಲುತ್ತಿದ್ದು, ಆರ್ಥಿಕ ಸಮಸ್ಯೆ ಎದುರಾಗಿದೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಹೀಗಾಗಿ ಧನುಷ್ ಅವರಿಂದ ಪ್ರತಿ ತಿಂಗಳು 65 ಸಾವಿರ ರೂಪಾಯಿ ನೆರವು ಕೊಡಿಸುವಂತೆ ಬೇಡಿಕೆಯಿಟ್ಟು ಮದುರೈ ದಂಪತಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

  ಇನ್ನೂ ಧನುಷ್ ತಮ್ಮ ಮಗ ಎನ್ನುವುದಕ್ಕೆ ಪುರಾವೆಯಾಗಿ ಕದಿರೇಶನ್ ದಂಪತಿ ಧನುಷ್ ಅವರ ಚಿಕ್ಕಂದಿನ ಫೋಟೋ ಸೇರಿದಂತೆ, ಕುಟುಂಬದ ಹಲವು ಫೋಟೋಗಳನ್ನು ಕೋರ್ಟ್‌ಗೆ ಒದಗಿಸಿದ್ದಾರೆ. ಧನುಷ್ ತಮ್ಮ ಮಗ ಎಂದು ಸಾಬೀತು ಪಡಿಸಲು ತಮ್ಮ ಬಳಿ ಸಾಕ್ಷ್ಯಾಧಾರಗಳಿವೆ. ಅಗತ್ಯವಿದ್ದರೆ ಡಿಎನ್‌ಎ ಪರೀಕ್ಷೆಗೂ ತಾವು ಸಿದ್ಧ ಎಂದು ಕದಿರೇಸನ್ ದಂಪತಿ ತಿಳಿಸಿದ್ದಾರೆ.

  ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಗುರುತಿಸಿಕೊಂಡಿರುವ ಧನುಷ್, ನಿರ್ದೇಶಕ ಕಸ್ತೂರಿ ರಾಜ ಅವರ ಮಗ. ಸೂಪರ್‌ ಸ್ಟಾರ್ ರಜನಿಕಾಂತ್ ಮಗಳು ಐಶ್ವರ್ಯ ಅವರನ್ನ 2004ರಲ್ಲಿ ಧನುಷ್ ವಿವಾಹವಾಗಿದ್ದಾರೆ. ಈಗ ಧನುಷ್ ನಮ್ಮ ಮಗ ಎಂದು ಮದುರೈನ ದಂಪತಿ ನ್ಯಾಯಾಲಯದ ಮೆಟ್ಟಿಲೇರಿದ್ದು, ವಿಚಾರಣೆ ನಡೆಸಿದ ನ್ಯಾಯಲಯ ನಟ ಧನುಷ್ ಅವರನ್ನ ನ್ಯಾಯಾಲಯಕ್ಕೆ ಹಾಜಾರಾಗುವಂತೆ ಸೂಚಿಸಿದೆ.

  English summary
  Madurai couple claims Dhanush their son: Court summons to actor. The petition was filed by a couple from Melur Taluk in Madurai district, R Kathiresan, (65) and his wife, K Meenakshi, (53), claiming that the actor was their son and they want him to provide maintenance of Rs 65,000 per month.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X