»   » ಪುನೀತ್ 'ಪವರ್ ಸ್ಟಾರ್' ಚಿತ್ರ ಬಿಡುಗಡೆಗೆ ತಡೆಯಾಜ್ಞೆ

ಪುನೀತ್ 'ಪವರ್ ಸ್ಟಾರ್' ಚಿತ್ರ ಬಿಡುಗಡೆಗೆ ತಡೆಯಾಜ್ಞೆ

Posted By: ಉದಯರವಿ
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಪವರ್ ***' ಚಿತ್ರ ಸಾಕಷ್ಟು ವಿಘ್ನಗಳನ್ನು ಎದುರಿಸಿ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರಕ್ಕೆ ಆರಂಭದಿಂದಲೂ ಶೀರ್ಷಿಕೆಯದ್ದೇ ಸಮಸ್ಯೆ. ಇನ್ನೇನು ಬಿಡುಗಡೆ ಹೊತ್ತಿನಲ್ಲಿರುವ ಚಿತ್ರಕ್ಕೆ ಇದೀಗ ಮತ್ತೊಂದು ವಿಘ್ನ ಎದುರಾಗಿದೆ.

ಚಿತ್ರದ ಟೈಟಲ್ ಪ್ರಶ್ನಿಸಿ ಸೂರ್ಯ ಎಂಬುವವರು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದು, ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡುವಂತೆ ಕೋರಿದ್ದರು. ಅದರಂತೆ ಸಿಟಿ ಸಿವಿಲ್ ಕೋರ್ಟ್ ಪವರ್ *** ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಿದೆ. [ಮುಗಿದಿಲ್ಲ ಪುನೀತ್ 'ಪವರ್ ಸ್ಟಾರ್' ಚಿತ್ರದ ಕಂಟಕ]


ಒಂದುವರೆ ವರ್ಷದ ಹಿಂದೆಯೇ ತಾವು 'ಪವರ್' ಟೈಟಲ್ ಪಡೆದಿರುವುದಾಗಿ ತಿಳಿಸಿರುವ ಸೂರ್ಯ ಇದೀಗ ಅದೇ ಟೈಟಲ್ ನಲ್ಲಿ ಚಿತ್ರ ಬಿಡುಗಡೆ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಏತನ್ಮಧ್ಯೆ 'ಪವರ್ ಸ್ಟಾರ್' ಚಿತ್ರ ಇದೇ ಆಗಸ್ಟ್ 28ರಂದು ತೆರೆಗೆ ಅಪ್ಪಳಿಸುತ್ತಿದೆ.

ತೆಲುಗಿನ ಬ್ಲಾಕ್ ಬಸ್ಟರ್ ಚಿತ್ರ 'ದೂಕುಡು' ಚಿತ್ರದ ರೀಮೇಕ್ ಆಗಿರುವ ಈ ಚಿತ್ರಕ್ಕೆ ಕೆ ಮಾದೇಶ್ ಅವರು ಆಕ್ಷನ್ ಕಟ್ ಹೇಳಿದ್ದು ಸೆನ್ಸಾರ್ ನಲ್ಲಿ ಯು/ಎ ಸರ್ಟಿಫಿಕೇಟ್ ಪಡೆದಿದೆ. ಸೆನ್ಸಾರ್ ಮಂಡಳಿಯಲ್ಲಿ ಕೋರಂ ಕೊರತೆಯಿಂದ ಕನ್ನಡ ಚಿತ್ರಗಳು ಸೆನ್ಸಾರ್ ಆಗುತ್ತಿಲ್ಲ.

ಕನ್ನಡ ಚಿತ್ರಗಳು ಅನಿವಾರ್ಯವಾಗಿ ಮುಂಬೈ ಸೆನ್ಸಾರ್ ಮಂಡಳಿಯನ್ನು ನೆಚ್ಚಿಕೊಳ್ಳುವ ಪರಿಸ್ಥಿತಿ ಉದ್ಭವವಾಗಿದೆ. ಆದರೆ ಮುಂಬೈ ಸೆನ್ಸಾರ್ ಮಂಡಳಿ ಸಿಇಓ ರಾಜೇಶ್ ಕುಮಾರ್ ಅವರು ಲಂಚ ಪಡೆಯುವಾಗ ಸಿಬಿಐ ಕೈಗೆ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿದ್ದಾರೆ. ಈಗ ಕನ್ನಡ ಚಿತ್ರಗಳಿಗೆ ಮುಂಬೈ ಸೆನ್ಸಾರ್ ಮಂಡಳಿ ಕೂಡ ಬಾಗಿಲು ಮುಚ್ಚಿದೆ.

English summary
The City Civil Court on Thursday stayed the screening of Puneeth Rajkumar and Trisha Krishnan starrer 'Power ***' on a suit filed by Surya who had registered same title year ago. The film was scheduled to release on 28th August. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada