twitter
    For Quick Alerts
    ALLOW NOTIFICATIONS  
    For Daily Alerts

    ಸುದೀಪ್ 'ರನ್ನ' ರಿಲೀಸ್ ಗೆ ಕೋರ್ಟ್ ಮಧ್ಯಂತರ ತಡೆ

    By ಉದಯರವಿ
    |

    ಕಿಚ್ಚ ಸುದೀಪ್ ಅಭಿನಯದ ಭಾರಿ ಬಜೆಟ್ ನ 'ರನ್ನ' ಚಿತ್ರ ಬಿಡುಗಡೆಗೆ ನಗರದ ಸಿಟಿ ಸಿವಿಲ್ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಚಿತ್ರದ ನಿರ್ಮಾಪಕರಾದ ನಿಮಿಷಾಂಬ ಚಂದ್ರಶೇಖರ್ ಅವರ ಮೇಲೆ ಕೇಸು ದಾಖಲಾಗಿದ್ದು ಚಿತ್ರ ಬಿಡುಗಡೆಗೆ ತಡೆ ನೀಡಲಾಗಿದೆ.

    ಸಹ ನಿರ್ಮಾಪಕರಾದ ನಾಗರಾಜ್ ಅವರು ಸಲ್ಲಿಸಿರುವ ದೂರಿನ ವಿಚಾರಣೆ ನಡೆಸಿರುವ ನ್ಯಾಯಾಲಯ ರನ್ನ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದು ವಿಚಾರಣೆಯನ್ನು ಏಪ್ರಿಲ್ 27ಕ್ಕೆ ಮುಂದೂಡಿದೆ. ಸಹ ನಿರ್ಮಾಪಕರಾದ ನಾಗರಾಜ್ ಅವರಿಂದ ಚಂದ್ರಶೇಖರ್ ಅವರು ರು.25 ಲಕ್ಷ ಸಾಲ ಪಡೆದಿದ್ದಾರೆ ಎಂಬ ಆರೋಪ ಮಾಡಲಾಗಿದೆ. [ಬಬ್ಬರ್ ಶೇರ್ ಆಗಿ 'ರನ್ನ' ಬರ್ತಿದ್ದಾನೆ ದಾರಿಬಿಡಿ]

    Kichcha Sudeep
    ಆದರೆ ಚಂದ್ರಶೇಖರ್ ಅವರು ಮರುಪಾವತಿ ಮಾಡದ ಕಾರಣ ನಾಗರಾಜ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಿದೆ. ನಾಗರಾಜ್ ಅವರು ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಪ್ರದೇಶದ ವಿತರಣೆ ಹಕ್ಕುಗಳಿಗಾಗಿ ಮುಂಗಡ ಹಣ ನೀಡಿದ್ದರಂತೆ.

    ಆದರೆ ಎಲ್ಲೂ ನಾಗರಾಜ್ ಅವರ ಹೆಸರು ಇಲ್ಲದ ಕಾರಣ ಅವರು ತಮ್ಮ ಹಣದ ಮರುಪಾವತಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ನಂದಕಿಶೋರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ಮೇ 1ಕ್ಕೆ ತೆರೆಕಾಣಲು ಸಜ್ಜಾಗಿದೆ. ಇದೀಗ ಕೋರ್ಟ್ ಮೆಟ್ಟಿಲೇರಿರುವ 'ರನ್ನ' ಅಂದುಕೊಂಡ ಸಮಯಕ್ಕೆ ಬಿಡುಗಡೆಯಾಗುತ್ತದೆಯೇ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

    ನಂದಕಿಶೋರ್ ನಿರ್ದೇಶನದ ಬಗ್ಗೆ ಕೂಡ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ವಿ ಹರಿಕೃಷ್ಣ ಹಾಡುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಹಿಂದೆ ಪವರ್ ಸ್ಟಾರ್ ಪುನೀತ್ ಅಭಿನಯದ 'ಅಣ್ಣಾಬಾಂಡ್' ಚಿತ್ರ 2012 ಮೇ 1ಕ್ಕೆ ಥಿಯೇಟರ್ ಗೆ ಎಂಟ್ರಿಕೊಟ್ಟಿತ್ತು.

    ರನ್ನ ಚಿತ್ರಕ್ಕೆ 'ಬುಲ್ ಬುಲ್' ಖ್ಯಾತಿಯ ರಚಿತಾ ರಾಮ್ ನಾಯಕಿಯಾಗಿರುವ ಚಿತ್ರದಲ್ಲಿ ಅತ್ತೆ ಪಾತ್ರವನ್ನು "ಗೊಂಬೆ ಗೊಂಬೆ ಗೊಂಬೆ ನಿನ್ನ ಮುದ್ದಾಡಬೇಕು ನರಗೊಂಬೆ..." ಎಂದು ಕ್ರೇಜಿಸ್ಟಾರ್ ಜೊತೆ ಕುಣಿದಿದ್ದ ಮಧು ಅತ್ತೆ ಪಾತ್ರದಲ್ಲಿ ಅಭಿನಯಿಸಿದ್ದಾರೆ.

    ಸರಿಸುಮಾರು ರು.20 ಕೋಟಿ ಬಜೆಟ್ ನಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ ಎಂ ಚಂದ್ರಶೇಖರ್. ಚಿತ್ರದ ಮುಖ್ಯಪಾತ್ರಗಳಲ್ಲಿ ದೇವರಾಜ್ ಹಾಗೂ ಪ್ರಕಾಶ್ ರೈ ಸಹ ಇದ್ದು ವಿ ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದೆ. ಸುಧಾಕರ್ ಎಸ್ ರಾಜು ಅವರ ಛಾಯಾಗ್ರಹಣ ಕೆ.ಎಂ. ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿದೆ. ಕಾರ್ಮಿಕರ ದಿನವನ್ನ ಎನ್ ಕ್ಯಾಶ್ ಮಾಡಿಕೊಳ್ಳೋಕೆ ಸುದೀಪ್ ಅಂಡ್ ಟೀಂ ರೆಡಿಯಾಗಿದೆ, ಸಿನಿಮಾ ನೋಡೋಕೆ ರೆಡಿಯಾಗಿ. (ಏಜೆನ್ಸೀಸ್)

    English summary
    Bengaluru City Civil court has stayed the release of Sudeep lead Kannada movie 'Ranna'. The film cannot be released till the next date of hearing of the case, which is slated on April 27, after a financier approached it against the producer.
    Saturday, April 25, 2015, 12:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X