»   » ಕ್ರೇಜಿಸ್ಟಾರ್ ರವಿಚಂದ್ರನ್ ಈಗ ಶೃಂಗಾರ ರಾಮ

ಕ್ರೇಜಿಸ್ಟಾರ್ ರವಿಚಂದ್ರನ್ ಈಗ ಶೃಂಗಾರ ರಾಮ

Posted By:
Subscribe to Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೂ ಶೃಂಗಾರಕ್ಕೂ ದ್ರಾಕ್ಷಿಗೂ ಬಳ್ಳಿಗೂ ಇರುವ ಸಂಬಂಧ. ತೆರೆಯ ಮೇಲೆ ಅವರು ಅದೆಷ್ಟೋ ಹೆಂಗೆಳೆಯರ ಹೃದಯ ಕದ್ದ ಶೃಂಗಾರ ಪುರುಷ. ಅವರ ಚಿತ್ರಗಳಲ್ಲಿ ಶೃಂಗಾರಕ್ಕೆ ವಿಶೇಷ ಆದ್ಯತೆ ಇರುವುದು ಗೊತ್ತೇ ಇದೆ. ಇದೀಗ ಅವರು 'ಶೃಂಗಾರ ರಾಮ'ನಾಗಿ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗುತ್ತಿದ್ದಾರೆ.

ಸತತ ಸೋಲುಗಳಿಂದ ಕಂಗೆಟ್ಟಿ ರವಿಚಂದ್ರನ್ ಅವರು 'ಕ್ರೇಜಿಸ್ಟಾರ್' ಚಿತ್ರದ ಮೂಲಕ ಮತ್ತೆ ಫೀನಿಕ್ಸ್ ಪಕ್ಷಿಯಂತೆ ಎದ್ದು ಬಂದಿದ್ದಾರೆ. ಈ ಚಿತ್ರದ ಗೆಲುವು ಅವರನಲ್ಲಿ ಇನ್ನಷ್ಟು ಹೊಸ ಚೈತನ್ಯ ತುಂಬಿದೆ. ಈಗವರು ಸಾಕಷ್ಟು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಮಲಯಾಳಂನ 'ದೃಶ್ಯಂ' ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ. ಪಿ.ವಾಸು ಆಕ್ಷನ್ ಕಟ್ ಹೇಳಿತ್ತಿರುವ ಚಿತ್ರ ಇದಾಗಿದೆ. [ಕ್ರೇಜಿಸ್ಟಾರ್ ಚಿತ್ರವಿಮರ್ಶೆ]


ಇದೀಗ ಗೀತಸಾಹಿತಿ ಕಮ್ ನಿರ್ದೇಶಕ ವಿ ನಾಗೇಂದ್ರ ಪ್ರಸಾದ್ ಅವರ ಜೊತೆ 'ಶೃಂಗಾರ ರಾಮ'ನಾಗುತ್ತಿದ್ದಾರೆ. ಸ್ವಾಮಿ ಅವರ ಕಥೆ, ಚಿತ್ರಕಥೆ ಶೃಂಗಾರ ರಾಮನಿಗಿದೆ. ಅನೂಪ್ ಸೀಳಿನ್ ಅವರ ಸಂಗೀತ, ಜಿಎಸ್ ವಿ ಸೀತಾರಾಮ್ ಅವರ ಛಾಯಾಗ್ರಹಣ ಇರುವ ಚಿತ್ರವನ್ನು ಆರ್ ಶಂಕರ್ ನಿರ್ಮಿಸುತ್ತಿದ್ದಾರೆ.

'ಕ್ರೇಜಿಸ್ಟಾರ್' ಚಿತ್ರ ರವಿಚಂದ್ರನ್ ಅವರನ್ನು ಮತ್ತೆ ಟ್ರ್ಯಾಕ್ ಗೆ ಬರುವಂತೆ ಮಾಡಿದೆ. ಇದೀಗ ಅವರು ನಲ್ಲ ಸುದೀಪ್ ಜೊತೆಗಿನ 'ಮಾಣಿಕ್ಯ' ಚಿತ್ರದಲ್ಲಿ ತಂದೆಯ ಪಾತ್ರವನ್ನು ಪೋಷಿಸುತ್ತಿದ್ದಾರೆ. ಇದೀಗ ಶೃಂಗಾರ ರಾಮನಾಗುತ್ತಿದ್ದಾರೆ. ಚಿತ್ರ ಏಪ್ರಿಲ್ ನಲ್ಲಿ ಸೆಟ್ಟೇರಲಿದೆ ಎಂಬುದು ಸದ್ಯದ ಮಾಹಿತಿ. (ಏಜೆನ್ಸೀಸ್)

English summary
Crazy Star Ravichandran is now Sringara Rama. His new movie is likely to be launched in the month of April directed by lyricist turned director V Nagendra Prasad.
Please Wait while comments are loading...