»   » ಹುಟ್ಟುಹಬ್ಬದ ವಿಜೃಂಭಣೆಗೆ ರವಿಚಂದ್ರನ್ ರೆಡ್ ಸಿಗ್ನಲ್?

ಹುಟ್ಟುಹಬ್ಬದ ವಿಜೃಂಭಣೆಗೆ ರವಿಚಂದ್ರನ್ ರೆಡ್ ಸಿಗ್ನಲ್?

Posted By:
Subscribe to Filmibeat Kannada
ಈ ವರ್ಷವೂ ಬರ್ತ್‌ಡೇಯನ್ನ ಆಚರಿಸಿಕೊಳ್ಳುವ ಮನಸ್ಸಿಲ್ಲ ಎಂದಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್. ಮೇ ತಿಂಗಳ ಮೂವತ್ತನೇ ತಾರೀಖು ರವಿಚಂದ್ರನ್‌ರ ಹುಟ್ಟುಹಬ್ಬ. ಆದರೆ ಕಳೆದ ಬಾರಿಯೇ ಅದ್ಧೂರಿ ಸೆಲಬರೇಷನ್‌ಗೆ ಕಡಿವಾಣ ಹಾಕಿದ್ದ ರವಿಚಂದ್ರನ್, ತನ್ನ ಅಭಿಮಾನಿಗಳ ಯಾವುದೇ ಸಂಭ್ರಮ ಸಡಗರಗಳಿಗೆ ತಾವು ಸಿಕ್ಕದೆ ದೂರವುಳಿದಿದ್ದರು.

ಬರ್ತ್‌ಡೇಗೂ ವಾರದ ಮುಂಚೆಯೇ ಈ ಬಾರಿ ಬರ್ತ್‌ಡೇ ಸೆಲಬರೇಷನ್ ಇಲ್ಲ ಎಂಬ ಸಂದೇಶವನ್ನ ಅಭಿಮಾನಿಗಳಿಗೆ ತಲುಪಿಸುವಂತೆ ಪತ್ರಕರ್ತರಿಗೆ ತಾವೇ ವಿನಂತಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಈ ಬಾರಿಯೂ ಅವರು ಸಂಭ್ರಮಿಸುವ ಮೂಡಿನಲ್ಲಿಲ್ಲ. ಮಂಜಿನ ಹನಿ ಬಿಡುಗಡೆ ಮಾಡಲಾಗಲಿಲ್ಲವಲ್ಲ ಎಂಬ ಬೇಸರ ಅವರ ಕಳೆದ ವರ್ಷದ ನಿರ್ಧಾರದಲ್ಲಿ ಎದ್ದು ಕಾಣುತ್ತಿತ್ತು.

ಆ ಸಿನಿಮಾ ಈ ವರ್ಷವೂ ತೆರೆ ಕಾಣಿಸಲು ಅವರಿಗೆ ಸಾಧ್ಯವಾಗಲಿಲ್ಲವಾದ್ದರಿಂದ, ಮತ್ತೆ ಬೇಸರದಲ್ಲಿದ್ದಾರೆ ರವಿಚಂದ್ರನ್. ಯಾವತ್ತು ಮಂಜಿನ ಹನಿ ಬಿಡುಗಡೆಯಾಗುತ್ತದೋ ಅವತ್ತೆ ತನ್ನ ಹುಟ್ಟಿದ ಹಬ್ಬ ಎನ್ನುವಂತೆ ಮಾತಾಡುತ್ತಾರವರು. ಈ ವರ್ಷ ಅಂಬರೀಷ್ ಅರುವತ್ತರ ಹುಟ್ಟಹಬ್ಬವಾದ್ದರಿಂದ, ಅಂಬಿ ಸಂಭ್ರಮಕ್ಕೆ ಭಾರೀ ಸಿದ್ಧತೆಗಳಾಗುತ್ತಿವೆ. ನಾನು ಅದರಲ್ಲಿ ಭಾಗವಹಿಸಿ ಸಂತೋಷಪಡುತ್ತೇನೆ. ಈ ಬಾರಿ ಅದೇ ನನ್ನ ಹುಟ್ಟುಹಬ್ಬ ಎಂದಿದ್ದಾರೆ ರವಿಚಂದ್ರನ್. (ಒನ್‌ಇಂಡಿಯಾ ಕನ್ನಡ)

English summary
Crazy Star V Ravichandran has not in the mood of celebrating his 51th birthday on May 30, 2012. He decided to celebrate his birthday on his dream project Manjina Hani release. But his dream project is yet to be completed.
Please Wait while comments are loading...