»   » ರವಿಮಾಮನ ಬರ್ತಡೇ ಈ ಬಾರಿ ಕಲರ್ ಫುಲ್

ರವಿಮಾಮನ ಬರ್ತಡೇ ಈ ಬಾರಿ ಕಲರ್ ಫುಲ್

By: ಜೀವನರಸಿಕ
Subscribe to Filmibeat Kannada

ಕನ್ನಡದ ಕ್ರೇಜಿಸ್ಟಾರ್ ರವಿಮಾಮ ಕಳೆದ ಮೂರು ವರ್ಷಗಳಿಂದ ಬರ್ತಡೇಯನ್ನ (ಮೇ.30) ಸಿಂಪಲ್ಲಾಗಿ ಆಚರಿಸಿದ್ರು. ಈ ಬಾರಿ ಬರ್ತಡೇಯನ್ನ ಸ್ವಲ್ಪ ಭರ್ಜರಿಯಾಗೇ ಆಚರಿಸೋ ಪ್ಲಾನ್ ನಲ್ಲಿದ್ದಾರೆ. ನಾಲ್ಕೈದು ವರ್ಷಗಳಿಂದ ತನ್ನದೇ ಸಿನಿಮಾ ಮಾಡೋ ಬಗ್ಗೆ ತಲೆಕೆಡಿಸಿಕೊಂಡಿದ್ದ ಕ್ರೇಜಿಸ್ಟಾರ್ ಈ ವರ್ಷ ರೂಟ್ ಚೇಂಜ್ ಮಾಡಿದ್ದಾರೆ.

ರವಿಚಂದ್ರನ್ ಅಂದ್ರೇ ಕಲರ್ ಫುಲ್ ಕನ್ನಡ ಚಿತ್ರರಂಗದ ಶೋಮ್ಯಾನ್. ಒಂದು ಕಾಲದಲ್ಲಿ ತೆಲುಗು, ತಮಿಳು ಚಿತ್ರಗಳಿಗೆ ರಿಚ್ ನೆಸ್ ನಲ್ಲಿ ಮಾದರಿಯಾಗೋ ಸಿನಿಮಾಗಳನ್ನ ಮಾಡಿದ ನಿರ್ದೇಶಕ ನಿರ್ಮಾಪಕ ಈ ಪ್ರೇಮಲೋಕದ ರೋಮಿಯೋ. [ಫೀನಿಕ್ಸ್ ನಂತೆ ಎದ್ದುಬಂದ ಕ್ರೇಜಿಸ್ಟಾರ್]

ಇತ್ತೀಚೆಗೆ ರವಿಮಾಮನ ಕಾಲ ಮುಗಿದೋಯ್ತು, ಇನ್ನು ರವಿಚಂದ್ರನ್ ಕಳೆದುಹೋದ್ರು. ಕ್ರೇಜಿಸ್ಟಾರ್ ಯಾವ ಸಿನಿಮಾಗಳು ಬರೋದಿಲ್ಲ. ಹಾಗೆ ಹೀಗೆ ಅಂತ ಗಾಂಧಿನಗರ ಮಾತಾಡಿಕೊಳ್ತಿತ್ತು. ಆದರೆ ಫೀನಿಕ್ಸ್ ತರಹ ಎದ್ದು ಬಂದಿದ್ದಾರೆ ರವಿಚಂದ್ರನ್.

ಈಗ ಕ್ರೇಜಿಸ್ಟಾರ್ ಫುಲ್ ಬಿಜಿ. ಕೈ ತುಂಬಾ ಕೆಲಸಗಳ ಒಂದಷ್ಟು ಹೊಸ ಪ್ಲಾನ್ ಗಳು ರೆಡಿಯಾಗಿವೆ. ಕ್ರೇಜಿಸ್ಟಾರ್ 53ನೇ ಹುಟ್ಟುಹಬ್ಬದ ಜೋಶ್ ನಲ್ಲಿ ರವಿಮಾಮನ ಪ್ಲಾನ್ ಗಳೇನು ಅನ್ನೋ ಇಂಟರೆಷ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

ವರ್ಷ 53 ಪ್ಲಾನ್ ಗಳು ಹಲವಾರು

ಈ ವರ್ಷ ರವಿಮಾಮನಿಗೆ ನಿಜಕ್ಕೂ ಎನರ್ಜಿ ತಂದುಕೊಟ್ಟಿದ್ದು ಕ್ರೇಜಿಸ್ಟಾರ್ ಮತ್ತು ಕಿಚ್ಚ ಸುದೀಪ್ ಜೊತೆಗಿನ ಹಿಟ್ ಸಿನಿಮಾ 'ಮಾಣಿಕ್ಯ'. ಕ್ರೇಜಿಸ್ಟಾರ್ ಸಿನಿಮಾದಿಂದ ಒಂದಷ್ಟು ವರ್ಷಗಳಿಂದ ದೂರವಾಗಿದ್ದ ಗಾಂಧಿನಗರ ಹತ್ತಿರವಾಗಿದೆ. ರವಿಮಾಮ ಹೊಸ ಹೊಸ ಸಿನಿಮಾಗಳ ಪ್ಲಾನಿಂಗ್ ನಲ್ಲಿದ್ದಾರೆ.

ಮಗನನ್ನ ಲಾಂಚ್ ಮಾಡ್ತಿದ್ದಾರೆ

ಕ್ರೇಜಿಸ್ಟಾರ್ ಪುತ್ರ ಮನೋರಂಜನ್ ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಡ್ತಿದ್ದಾರೆ. ರವಿಮಾಮನ ಬರ್ತಡೇಗೆ ಸಿನಿಮಾದ ಮುಹೂರ್ತ ನಡೆಯಲಿದೆ. ಕ್ರೇಜಿಸ್ಟಾರ್ ಸಿನಿಮಾದಲ್ಲಿ ಮುಖ್ಯಪಾತ್ರಮಾಡಿದ್ದ ಮನೋರಂಜನ್ ಹೊಸ ಸಿನಿಮಾದ ಬಗ್ಗೆ ಮಾಹಿತಿ ಸದ್ಯದಲ್ಲೇ ಹೊರಬರಲಿದೆ.

'ದೃಶ್ಯ' ವೈಭವ ರವಿಮಾಮನ ರಂಗು

ಈ ಬಾರಿಯ ಕ್ರೇಜಿಸ್ಟಾರ್ ಬರ್ತಡೇಗೆ ಗಿಫ್ಟಾಗಿ 'ದೃಶ್ಯ' ಚಿತ್ರ ರಿಲೀಸಾಗಲಿದೆ. ರವಿಮಾಮ ವಿಭಿನ್ನ ಅವತಾರದಲ್ಲಿ ಬರ್ತಿರೋ ಸಿನಿಮಾ ಇದು. ಇಲ್ಲಿ ರಿಚ್ ರವಿಚಂದ್ರನ್ ಕೇಬಲ್ ಆಪರೇಟರ್ ಪಾತ್ರ ಮಾಡಿದ್ದಾರೆ. ಇದೊಂದು ಫ್ಯಾಮಿಲಿ ಸಿನಿಮಾ.

ಶೃಂಗಾರದ ಜೋಶ್

ಕ್ರೇಜಿಸ್ಟಾರ್ ಗೆ ನಾಗೇಂದ್ರ ಪ್ರಸಾದ್ ಆಕ್ಷನ್ ಕಟ್ ಹೇಳ್ತಿರೋ 'ಶೃಂಗಾರ' ಚಿತ್ರ ವೇಗವಾಗಿ ಶೂಟಿಂಗ್ ಮುಗಿಸ್ತಿದೆ. ಕ್ರೇಜಿಸ್ಟಾರ್ ಗೆ ಇಲ್ಲಿ ಗ್ಲಾಮರ್ ಡಾಲ್ ರಾಗಿಣಿ, ಮತ್ತೊಂದು ಗ್ಲಾಮರ್ ಬೊಂಬೆ ಲಕ್ಷ್ಮಿ ರೈ ಜೋಡಿಯಾಗಿದ್ದಾರೆ.

ಪರಮಶಿವ ರಿಲೀಸ್ ಗೆ ರೆಡಿ

ರವಿಚಂದ್ರನ್ ಅವರನ್ನ ಮತ್ತೊಂದು ಸ್ಟೈಲ್ ನಲ್ಲಿ ನೋಡೋ 'ಪರಮಶಿವ' ಚಿತ್ರ ಕೂಡ ಭರ್ಜರಿಯಾಗಿ ದೇಶ ವಿದೇಶಗಳಲ್ಲಿ ಶೂಟಿಂಗ್ ಮುಗಿಸಿದೆ. ಮಹೇಶ್ ಬಾಬು ನಿರ್ದೇಶನದ ಚಿತ್ರವನ್ನ ಜುಲೈ ತಿಂಗಳಲ್ಲಿ ರಿಲೀಸ್ ಮಾಡೋ ಪ್ಲಾನ್ ನಲ್ಲಿದೆ ಚಿತ್ರತಂಡ.

ಮಂಜಿನ ಹನಿಗಾಗಿ ಕಾದಿದ್ದಾರೆ ಅಭಿಮಾನಿಗಳು

ರವಿಮಾಮನ ಯಾವ ಸಿನಿಮಾ ಬಂದ್ರೂ ಅಭಿಮಾನಿಗಳು ಕಾದಿರೋದು ಮಾತ್ರ 'ಮಂಜಿನಹನಿ' ಗಾಗಿ. ಈ ಚಿತ್ರದಲ್ಲಿ ಇನ್ನೇನು ಮ್ಯಾಜಿಕ್ ಇರುತ್ತದೋ ಏನೋ ಎಂಬ ಕುತೂಹಲವಂತೂ ಪ್ರೇಕ್ಷಕರಿಗೆ ಇದ್ದೇ ಇದೆ.

English summary
Kannada films Dream Merchant Crazy Star Ravichandran celebrating his 53rd birthday in colorful style on 30th May, 2014. Few projects are launching on his birthday. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada