»   » ಟೈಟಲ್ ಗೊಂದಲದಲ್ಲಿ ಕ್ರೇಜಿ ಸ್ಟಾರ್ ಹೊಸ ಸಿನಿಮಾ

ಟೈಟಲ್ ಗೊಂದಲದಲ್ಲಿ ಕ್ರೇಜಿ ಸ್ಟಾರ್ ಹೊಸ ಸಿನಿಮಾ

Posted By:
Subscribe to Filmibeat Kannada

Love You Alia...... ಇದನ್ನ ಹೇಗೆ ಉಚ್ಛರಿಸುತ್ತೀರಾ..? 'ಆಲಿಯ' ಅನ್ನುವ ಹೆಸರನ್ನ ಕೇಳಿರುವವರು 'ಲವ್ ಯು ಆಲಿಯ' ಅಂತ ಸುಲಭವಾಗಿ ಹೇಳುತ್ತಾರೆ. ಆದ್ರೆ, ಅದನ್ನ ಕೇಳದೇ ಇರುವವರು, ನಮ್ಮ ಕನ್ನಡದ ಸ್ಟೈಲ್ ನಲ್ಲಿ 'ಲವ್ ಯು ಅಳಿಯ' ಅನ್ನುತ್ತಾರೆ.

ಸ್ಟಾರ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ನಿರ್ದೇಶಿಸುತ್ತಿರುವ ಹೊಸ ಚಿತ್ರ 'ಲವ್ ಯು ಆಲಿಯ'ಗೆ ಇಂತಹ ಟೈಟಲ್ ಕನ್ಫ್ಯೂಷನ್ ಎದುರಾಗಿದೆ. ಪೋಸ್ಟರ್ ಗಳಲ್ಲಿ 'ಲವ್ ಯು ಆಲಿಯ' ಅಂತ ಕನ್ನಡದಲ್ಲೇ ಇದ್ದರೂ, ಕೆಲವರು 'ಅಳಿಯ' ಅಂತ ಗೊಂದಲಕ್ಕೀಡಾಗುತ್ತಿದ್ದಾರೆ.


ಇನ್ನೂ ಕೆಲವರು ಡೈರೆಕ್ಟಾಗಿ ಚಿತ್ರತಂಡದವರ ಬಳಿ 'ಲವ್ ಯು ಅಳಿಯ' ಅಲ್ವಾ? ಅಂತ ಕೇಳಿದ್ದಾರೆ. ಇದೇ ಚಿತ್ರದಲ್ಲಿ ನಟಿಸುತ್ತಿರುವ ಸುಧಾರಾಣಿ ಒಮ್ಮೆ ಮಾಲ್ ಗೆ ಹೋಗಿದ್ದಾಗ, ಅವರ ಅಭಿಮಾನಿಗಳು ''ಮೇಡಂ, ನಿಮ್ಮ ಮುಂದಿನ ಸಿನಿಮಾ 'ಲವ್ ಯು ಅಳಿಯ' ಅಂತೆ?'' ಅಂತ ಕೇಳಿದ್ದಾರೆ.

Ravinchandran and Bhumika Chawla

ಇದನ್ನ ತಿಳಿದ ಸ್ಟೈಲಿಶ್ ನಿರ್ದೇಶಕ ಇಂದ್ರಜಿತ್ ಲಂಕೇಶ್, ತಕ್ಷಣ ವಾಣಿಜ್ಯ ಮಂಡಳಿಗೆ ತೆರಳಿ 'ಲವ್ ಯು ಅಳಿಯ' ಅನ್ನುವ ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ. ಇನ್ಯಾರೂ 'ಲವ್ ಯು ಅಳಿಯ' ಅಂತ ಟೈಟಲ್ ಇಟ್ಟುಕೊಳ್ಳಬಾರದು ಅಂತ ಇಂದ್ರಜಿತ್ ಲಂಕೇಶ್ ಈ ನಿರ್ಧಾರ ಕೈಗೊಂಡರಂತೆ. [ಕ್ರೇಜಿಸ್ಟಾರ್ ರವಿಮಾಮ ಇನ್ಮುಂದೆ ಡಾ.ರವಿಚಂದ್ರನ್!]


ಇಂದ್ರಜಿತ್ ರ ಈ ನಡೆಯನ್ನ ಕಂಡು, 'ಲವ್ ಯು ಆಲಿಯ' ಚಿತ್ರದ ಟೈಟಲ್ ಬದಲಾಗಿದೆ ಅಂತ ಕೆಲವರು ಸುದ್ದಿ ಹಬ್ಬಿಸಿದ್ದರು. ಆದ್ರೆ, ''ಯಾವುದೇ ಕಾರಣಕ್ಕೂ ನಾನು ಟೈಟಲ್ ಬದಲಾಯಿಸುವುದಿಲ್ಲ'' ಅಂತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸ್ಪಷ್ಟಪಡಿಸಿದ್ದಾರೆ.


love u alia

''ಲವ್ ಯು ಆಲಿಯ ಯೂತ್ ಓರಿಯೆಂಟೆಡ್ ಸಿನಿಮಾ. 'ಲವ್ ಯು ಅಳಿಯ' ಅನ್ನುವ ಟೈಟಲ್ ಸೂಟ್ ಆಗಲ್ಲ. ಬೇರೆಯಾರೂ, ಆ ಹೆಸರಲ್ಲಿ ಸಿನಿಮಾ ಮಾಡಿ, ನಮ್ಮ ಚಿತ್ರಕ್ಕೆ ಕನ್ಫ್ಯೂಸ್ ಆಗಬಾರದು ಅಂತ ಟೈಟಲ್ ರಿಜೆಸ್ಟರ್ ಮಾಡಿಸಿದ್ದೀನಿ ಅಷ್ಟೆ'' ಅಂತ ಇಂದ್ರಜಿತ್ ತಿಳಿಸಿದ್ದಾರೆ. [ಇದೇ ಮೊದಲ ಬಾರಿಗೆ ಸ್ತ್ರೀರೋಗ ತಜ್ಞರಾಗಿ ಕ್ರೇಜಿಸ್ಟಾರ್]


ಸೂಪರ್ ಸ್ಟೈಲಿಶ್ ಆಗಿ 'ಲವ್ ಯು ಆಲಿಯ' ಸಿನಿಮಾ ರೆಡಿಯಾಗಿದೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯದಲ್ಲೇ ಹಾಡುಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.


ಮೊದಲ ಬಾರಿಗೆ ಕ್ರೇಜಿಸ್ಟಾರ್ ರವಿಚಂದ್ರನ್ 'ಡಾಕ್ಟರ್' ಆಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ 'ಲವ್ ಯು ಆಲಿಯ'. ಬಹುಭಾಷಾ ಬೆಡಗಿ ಭೂಮಿಕಾ ರವಿಚಂದ್ರನ್ ಗೆ ಜೋಡಿಯಾಗಿದ್ದಾರೆ.


ಚಂದನ್, ಸಂಗೀತಾ, ಶಕೀಲಾ, ಸುಧಾರಾಣಿ, ಸಾಧು ಕೋಕಿಲಾ, ಬುಲ್ಲೆಟ್ ಪ್ರಕಾಶ್ ರಂತಹ ದೊಡ್ಡ ತಾರಾಬಳಗವಿರುವ 'ಲವ್ ಯು ಆಲಿಯ', 'ಅಪೂರ್ವ' ತೆರೆಕಂಡ ಬಳಿಕ ನಿಮ್ಮೆಲ್ಲರನ್ನ ರಂಜಿಸುವುದಕ್ಕೆ ಬರಲಿದೆ. (ಫಿಲ್ಮಿಬೀಟ್ ಕನ್ನಡ)

English summary
Crazy Star Ravichandran starrer Love You Alia suffers from title confusion. To avoid this, Director Indrajith Lankesh has registered new title under his home banner.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada