»   » ಪ್ರೇಮಲೋಕದಲ್ಲಿ ರಣಧೀರನಾಗಿ ರವಿಚಂದ್ರನ್ ಪುತ್ರ

ಪ್ರೇಮಲೋಕದಲ್ಲಿ ರಣಧೀರನಾಗಿ ರವಿಚಂದ್ರನ್ ಪುತ್ರ

Posted By:
Subscribe to Filmibeat Kannada

ಕನಸುಗಾರನ ಮತ್ತೊಂದು ಕನಸು ನನಸಾಗುವ ಸಮಯ ಬಂದಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಪುತ್ರ ಮನೋರಂಜನ್ ಅವರನ್ನು ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ. ಅವರ 53ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮೇ.30ರಂದು ಮನೋರಂಜನ್ ಅವರ ಚೊಚ್ಚಲ ಚಿತ್ರ ಸೆಟ್ಟೇರುತ್ತಿದೆ.

ತಮ್ಮ ಪುತ್ರನ ಚಿತ್ರಕ್ಕೆ ರವಿಚಂದ್ರನ್ ಇಟ್ಟಿರುವ ಹೆಸರು 'ರಣಧೀರ'. 1989ರಲ್ಲಿ ತೆರೆಕಂಡ ಮ್ಯೂಸಿಕಲ್ ಹಿಟ್ 'ರಣಧೀರ' ಚಿತ್ರವನ್ನು ವಿ ರವಿಚಂದ್ರನ್ ಅವರು ನಿರ್ದೇಶಿಸಿದ್ದರು. ರವಿ ಅವರ ತಂದೆ ಎನ್ ವೀರಸ್ವಾಮಿ ಅವರು ನಿರ್ಮಾಪಕರು. [ರವಿಮಾಮನ ಬರ್ತಡೇ ಈ ಬಾರಿ ಕಲರ್ ಫುಲ್]

Ranadheera poster

ಈಗ ತಮ್ಮ ಪುತ್ರನ ಚಿತ್ರಕ್ಕೆ ರವಿಚಂದ್ರನ್ ನಿರ್ಮಾಪಕರು. ಹಂಸಲೇಖ ಅವರ ಸಂಗೀತ ಇದ್ದ 'ರಣಧೀರ' ಚಿತ್ರದ ಹಾಡುಗಳು ಇಂದಿಗೂ ಕಿವಿಗೆ ಬಿದ್ದರೆ ಚಿತ್ರರಸಿಕರು ಪುಳಕಿತರಾಗುತ್ತಾರೆ. ಏನ್ ಹುಡುಗೀರೋ, ಒಂದಾನೊಂದು ಕಾಲದಲ್ಲಿ, ಪ್ರೀತಿ ಮಾಡಬಾರದು, ಯಾರೇ ನೀನು ಚೆಲುವೆ...ಮುಂತಾದ ಹಾಡುಗಳನ್ನು ಮರೆಯಲು ಸಾಧ್ಯವೇ.

'ರಣಧೀರ' ಚಿತ್ರದ ಅಡಿಬರಹ "ಪ್ರೇಮಲೋಕದಲ್ಲಿ..." ಎಂಬುದು. ಅಲ್ಲಿಗೆ ಇದೊಂದು ಪಕ್ಕಾ ಲವ್ ಸ್ಟೋರಿ ಎಂಬಂತಾಯಿತು. ರವಿಚಂದ್ರನ್ ಅವರು ತಮ್ಮ ಇನ್ನೊಬ್ಬ ಪುತ್ರ ವಿಕ್ರಂ ಅವರನ್ನು ತಮ್ಮ 'ಕ್ರೇಜಿಸ್ಟಾರ್' ಚಿತ್ರದಲ್ಲಿ ಪರಿಚಯಿಸಿದ್ದು ಗೊತ್ತೇ ಇದೆ.

ಚಿತ್ರದ ಪಾತ್ರವರ್ಗ, ತಾಂತ್ರಿಕ ಬಳಗದಲ್ಲಿ ಯಾರೆಲ್ಲಾ ಇರುತ್ತಾರೆ? ನಾಯಕಿ ಯಾರಿರಬಹುದು ಎಂಬ ಕುತೂಹಲಕ್ಕೆ ಮೇ.30ರಂದು ತೆರೆಬೀಳಲಿದೆ. ಅಲ್ಲಿಯವರೆಗೂ ವೆಯ್ಟ್ ಅಂಡ್ ವಾಚ್. (ಏಜೆನ್ಸೀಸ್)

English summary
Crazy Star Ravichandran is launching his son Manoranjan Ravichandran in the film Ranadheera-Premalokadalli on his 53th birthday 30th May. Ranadheera will be the third generation film for the family.
Please Wait while comments are loading...