Don't Miss!
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- News
Vishnuvardhan Memorial: ಇಂದು ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ, ವಿಷ್ಣು ಅಭಿಮಾನಿಗಳ ಅಸಮಾಧಾನವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪುಷ್ಕರ್ ಟ್ವೀಟ್ ಬೆನ್ನಲ್ಲೆ 'ಡಿ-ಬಾಸ್' ಅಭಿಮಾನಿಗಳಲ್ಲಿ ಹೆಚ್ಚಾಯ್ತು ಚರ್ಚೆ!
ಕನ್ನಡದ ಯಶಸ್ವಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಡಿ ಬಾಸ್ ಜೊತೆ ಸಿನಿಮಾ ಮಾಡುವ ಕುರಿತು ನಿನ್ನೆಯಷ್ಟೆ ಟ್ವಿಟ್ಟರ್ ಹಾಗೂ ಫೇಸ್ ಬುಕ್ನನಲ್ಲಿ ಪೋಸ್ಟ್ ಹಾಕಿದ್ದರು.
''ದರ್ಶನ್ ಅವರು ಒಪ್ಪಿಕೊಂಡರೆ, ಕ್ರೀಡೆ ಆಧಾರಿತ ಅಥವಾ ಕುದುರೆ ರೇಸ್ ಕುರಿತ ಸಿನಿಮಾವೊಂದು ಮಾಡಬೇಕು ಎಂದುಕೊಂಡಿದ್ದೇನೆ. ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಅತಿ ದೊಡ್ಡ ಸ್ಫೋರ್ಟ್ಸ್ ಸಿನಿಮಾ ಆಗಲಿದೆ. ಇಂತಹದೊಂದು ಕನಸಿದೆ'' ಎಂದು ಆಸೆಯನ್ನ ಹಂಚಿಕೊಂಡಿದ್ದರು.
'ಕುದುರೆ
ರೇಸಿಂಗ್'ನಲ್ಲಿ
ಡಿ
ಬಾಸ್
ದರ್ಶನ್:
ನಿರ್ಮಾಪಕ
ಪುಷ್ಕರ್
ಹೇಳಿದ್ದೇನು?
ಪುಷ್ಕರ್ ಮಲ್ಲಿಕಾರ್ಜುನ ಅವರು ಹಾಕಿದ ಪೋಸ್ಟ್ ನೋಡಿದ ಡಿ ಬಾಸ್ ಅಭಿಮಾನಿಗಳು ಮತ್ತು ಸ್ಯಾಂಡಲ್ ವುಡ್ ಚಿತ್ರರಸಿಕರು ಖುಷ್ ಆಗಿದ್ದಾರೆ. ಇದೀಗ, ಡಿ ಬಾಸ್ ಅಭಿಮಾನಿಗಳ ಮಧ್ಯೆಯೇ ಇದು ಬಹಳ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಏನದು? ಮುಂದೆ ಓದಿ....

ಪ್ಲೀಸ್ ಕಾಲ್ ಶೀಟ್ ಕೊಡಿ
ಪುಷ್ಕರ್ ಅವರ ಈ ಆಸೆ ಹೊರಹಾಕಿದ್ದೆ ತಡ ದರ್ಶನ್ ಅಭಿಮಾನಿಗಳು ಸೇರಿದಂತೆ ಕನ್ನಡ ಚಿತ್ರರಂಗದ ಸಿನಿಪ್ರೇಮಿಗಳು ದರ್ಶನ್ ಅವರಲ್ಲಿ ಮನವಿ ಮಾಡುತ್ತಿದ್ದಾರೆ. ''ದಯವಿಟ್ಟು ಇವರಿಗೆ ಒಂದು ಕಾಲ್ ಶೀಟ್ ಕೊಡಿ. ಇವರದ್ದು ಉತ್ತಮವಾದ ನಿರ್ಮಾಣ ಸಂಸ್ಥೆ. ಇದು ಒಳ್ಳೆಯ ಸಿನಿಮಾ ಆಗುತ್ತೆ'' ಎಂದು ಬೇಡಿಕೆ ಇಡುತ್ತಿದ್ದಾರೆ.

ಮೊದಲು ಘೋಷಣೆ ಮಾಡಿ
''ನಮಗೆ ಈ ಸಿನಿಮಾ ಬೇಕೆ ಬೇಕೆ. ನೀವು ಏನಾದರೂ ಮಾಡಿಕೊಳ್ಳಿ. ದರ್ಶನ್ ಅವರನ್ನ ಒಪ್ಪಿಸಿ ಅಧಿಕೃತವಾಗಿ ಮೊದಲು ಘೋಷಿಸಿ. ಆಮೇಲೆ ಯಾವಾಗ ಬೇಕಾದರು ಶೂಟಿಂಗ್ ಆರಂಭಿಸಿ. ಡಿ ಬಾಸ್ ಒಪ್ಪಿದ ತಕ್ಷಣ ಅದನ್ನು ತಿಳಿಸಿ'' ಎಂದು ಕೆಲವರು ತಮ್ಮ ಅನುಭವವನ್ನ ಹಂಚಿಕೊಳ್ಳುತ್ತಿದ್ದಾರೆ.
ಬಾಲಿವುಡ್
ಡೈರೆಕ್ಟರ್
ರೋಹಿತ್
ಶೆಟ್ಟಿ
'ಆ'
ಒಂದು
ಮಾತು
ಹೇಳಿದ್ದು
ನಮ್ಮ
ದರ್ಶನ್
ಬಗ್ಗೆನಾ.?

ಪ್ಯಾನ್ ಇಂಡಿಯಾ ಹೋಗಿ
''ಮೂವಿಲಿ ಪ್ರಾಣಿ ಪ್ರೀತಿ... ಸ್ವಲ್ಪ ಆಕ್ಷನ್.. ಸೆಂಟಿಮೆಂಟ್ ಇದ್ರೆ.. ಪಕ್ಕ ಬ್ಲಾಕ್ಬಸ್ಟರ್'' ಎಂದು ಒಬ್ಬರು ಹೇಳಿದ್ರೆ, ''ಈ ಚಿತ್ರವನ್ನ ಪ್ಯಾನ್ ಇಂಡಿಯಾ ಮಾಡಿ'' ಎಂದು ಇನ್ನೊಬ್ಬರು ಹೇಳಿದ್ದಾರೆ. 'ಒಳ್ಳೆಯ ಸ್ಕ್ರಿಪ್ಟ್ ರೆಡಿ ಮಾಡಿ, ಅಪ್ರೋಚ್ ಮಾಡಿ ಖಂಡಿತಾ ಒಪ್ಪಿಕೊಳ್ಳುತ್ತಾರೆ' ಎಂದು ಇನ್ನು ಕೆಲವರು ಅಭಿಪ್ರಾಯ ಹೊರಹಾಕುತ್ತಿದ್ದಾರೆ.
ದರ್ಶನ್
'ಗಂಡುಗಲಿ
ಮದಕರಿ
ನಾಯಕ'
ಚಿತ್ರದ
ಮುಹೂರ್ತಕ್ಕೆ
ದಿನಾಂಕ
ಫಿಕ್ಸ್

ನಿರಾಸೆ ಮಾಡಬೇಡಿ ಪುಷ್ಕರ್
''ಸುಮ್ಮನೆ ಇಂತಹದೊಂದು ಆಸೆಯನ್ನು ವ್ಯಕ್ತಪಡಿಸಿದ, ಡಿ ಬಾಸ್ ಅಭಿಮಾನಿಗಳಲ್ಲಿ ಖುಷಿ ಹುಟ್ಟಿಸಿ, ಅದನ್ನು ನಿರಾಸೆ ಮಾಡಬೇಡಿ. ಅವನೇ ಶ್ರೀಮನ್ನಾರಾಯಣ ಚಿತ್ರದ ಬಳಿಕ ದರ್ಶನ್ ಅವರ ಜೊತೆ ಈ ಚಿತ್ರವನ್ನ ಮಾಡಿ'' ಎಂದು ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ.

ಸೋಶಿಯಲ್ ಮೀಡಿಯಾ ಯಾಕೆ?
ಪುಷ್ಕರ್ ಮಲ್ಲಿಕಾರ್ಜುನ ಅವರಿಗೆ ದರ್ಶನ್ ಅವರನ್ನ ಭೇಟಿ ಮಾಡುವುದು ಕಷ್ಟದ ಮಾತೇನು ಅಲ್ಲ. ಆದರೆ, ಅವರು ಯಾಕೆ ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ಹಾಕಿ ತಮ್ಮ ಆಸೆ ಹೇಳಿಕೊಳ್ಳುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಇದೇ ಕುತೂಹಲ ಅಭಿಮಾನಿಗಳಲ್ಲೂ ಇದೆ. ಅದರೆ, ಪುಷ್ಕರ್ ಅವರ ಆಸೆಗೆ ಜೀವ ಬಂದರೆ ಅದು ನಿಜಕ್ಕೂ ಸ್ಯಾಂಡಲ್ ವುಡ್ ನಲ್ಲಿ ಹಬ್ಬ ಆಗುವುದಂತೂ ಪಕ್ಕಾ.

ಯಾವುದೇ ಮಾತುಕತೆ ನಡೆದಿಲ್ಲ!
''ದರ್ಶನ್ ಸರ್ ಜೊತೆ ಸಿನಿಮಾ ಮಾಡ್ಬೇಕು ಅನ್ನೋದು, ಪ್ರತಿಯೊಬ್ಬ ನಿರ್ಮಾಪಕರ ಕನಸು, ಅದರಲ್ಲಿ ನಾನು ಒಬ್ಬ, ಆದರೆ, ಈ ವಿಚಾರದಲ್ಲಿ ಯಾವುದೇ Developments ನಡೆದಿಲ್ಲ, Looking forward for that one Awesome opportunity'' ಎಂದು ಪುಷ್ಕರ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.