twitter
    For Quick Alerts
    ALLOW NOTIFICATIONS  
    For Daily Alerts

    ಬೇಸರ ಆಗಿದ್ದರೆ ಕ್ಷಮೆ, ವಿವಾದ ಎಬ್ಬಿಸುತ್ತಿರುವವರಿಗೆ ಸಂತಾಪ: ಧನಂಜಯ್

    |

    ಡಾಲಿ ಧನಂಜಯ್ ನಟಿಸಿ, ನಿರ್ಮಾಣ ಮಾಡಿರುವ 'ಹೆಡ್ ಬುಷ್' ಸಿನಿಮಾದಲ್ಲಿ ವೀರಗಾಸೆಯವರಿಗೆ ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನಟ ಧನಂಜಯ್ ಇಂದು ಸುದ್ದಿಗೋಷ್ಠಿ ನಡೆಸಿ ಆ ಬಗ್ಗೆ ಸ್ಪಷ್ಟನೆ ನೀಡಿದರು.

    ವೀರಗಾಸೆ ಕಲಾವಿದರು, ಸಮುದಾಯದ ಮುಖಂಡರುಗಳು ಹಾಗೂ ಇತರರೊಡನೆ ಸೇರಿ ಸುದ್ದಿಗೋಷ್ಠಿ ನಡೆಸಿದ ನಟ ಧನಂಜಯ್, ''ಯಾರೋ ಕೆಲವು ಕಿಡಿಗೇಡಿಗಳು ಸಣ್ಣ ವಿಡಿಯೋ ತುಣುಕೊಂದನ್ನು ವೈರಲ್ ಮಾಡಿದ್ದರಿಂದ ವೀರಭದ್ರನ ಭಕ್ತರಿಗೆ ಬೇಸರ ಆಗಿದೆ, ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ಹಾಗೂ ಯಾರು ದುರುದ್ದೇಶಪೂರ್ವಕವಾಗಿ, ವಿವಾದ ಹುಟ್ಟಿಸಲೆಂದೇ ವಿಡಿಯೋಗಳನ್ನು ವೈರಲ್ ಮಾಡುತ್ತಿದ್ದಾರೊ ಅವರಿಗೆ ಸಂತಾಪ ಸೂಚಿಸುತ್ತೇನೆ'' ಎಂದಿದ್ದಾರೆ.

    ಮುಂದುವರೆದು ಮಾತನಾಡಿ, ''ವೀರಗಾಸೆ ಕಲೆಯನ್ನು ಸಣ್ಣ ವಯಸ್ಸಿನಿಂದಲೂ ನೋಡುತ್ತಲೇ ಬೆಳೆದಿದ್ದೇನೆ. ನಮ್ಮ ಶೂಟಿಂಗ್‌ಗಳಿಗೆ ಬರುತ್ತಿರುತ್ತಾರೆ. ನನ್ನ ಈ ಹಿಂದಿನ ಸಿನಿಮಾ 'ಬಡವ ರಾಸ್ಕಲ್‌'ನ ಬಿಡುಗಡೆ ದಿನ ವೀರಗಾಸೆ ಕಲಾವಿದರು ಬಂದಿದ್ದರು. ಅವರೊಟ್ಟಿಗೆ ಸೇರಿ ನಾನೂ ಸಹ ಕುಣಿದಿದ್ದೆ. ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಪ್ರೀತಿ ಇದೆ'' ಎಂದರು ಧನಂಜಯ್.

    ವೀರಗಾಸೆಯವರಿಗೆ ಮಾಸಾಶನ ಕೊಡಿ: ಧನಂಜಯ್

    ವೀರಗಾಸೆಯವರಿಗೆ ಮಾಸಾಶನ ಕೊಡಿ: ಧನಂಜಯ್

    ''ನಾವು ವೀರಗಾಸೆಯವರಿಗೆ ಅವಮಾನ ಮಾಡಿದ್ದೇವೆ ಎಂದು ಗಲಾಟೆ ಮಾಡುತ್ತಿರುವವರಲ್ಲಿ ಎಷ್ಟು ಜನ ವೀರಗಾಸೆಯವರ ಕಷ್ಟಗಳನ್ನು ಕೇಳಿದ್ದೀರಿ? ಅವರ ಪರವಾಗಿ ಎಷ್ಟು ಜನ ನಿಂತಿದ್ದೀರಿ? ಅವರಿಗೆ ಸಹಾಯ ಮಾಡುವ ಕಾರ್ಯ ಎಷ್ಟು ಜನ ಮಾಡಿದ್ದೀರಿ? ಅವರ ಪರವಾಗಿ ನಾನು ಕೇಳುತ್ತಿದ್ದೀನಿ, ಸರ್ಕಾರ ವೀರಗಾಸೆಯವರಿಗೂ ಮಾಸಾಶನ ಕೊಡಬೇಕು. ಅವರ ಪರವಾಗಿ ನಿಲ್ಲಬೇಕು, ಅವರ ಕಷ್ಟಗಳನ್ನು ಕೇಳಬೇಕು. ಎಲ್ಲ ಕಲೆಯೂ ಶ್ರೀಮಂತವೇ, ನಾವು ಎಲ್ಲ ಕಲಾವಿದರ ಕಷ್ಟಗಳನ್ನೂ ಕೇಳಬೇಕು ಇದು ನನ್ನ ಕಡೆಯಿಂದ ಸರ್ಕಾರಕ್ಕೆ ಮನವಿ'' ಎಂದಿದ್ದಾರೆ ಧನಂಜಯ್.

    'ವೀರಗಾಸೆಯವರಿಗೆ ಅಪಮಾನ ಮಾಡುವ ದೃಶ್ಯವಲ್ಲ ಅದು'

    'ವೀರಗಾಸೆಯವರಿಗೆ ಅಪಮಾನ ಮಾಡುವ ದೃಶ್ಯವಲ್ಲ ಅದು'

    ''ಸಿನಿಮಾದಲ್ಲಿ ವೀರಗಾಸೆಯವರನ್ನು ಜಯರಾಜ್ ಪಾತ್ರಧಾರಿಯಾದ ನಾನು ಹೊಡೆಯುತ್ತಿಲ್ಲ ಬದಲಿಗೆ ವೀರಗಾಸೆಯ ವೇಷ ಧರಿಸಿದ ಧುರುಳುರನ್ನು ಹೊಡೆಯುತ್ತೇನೆ. ವಿಶ್ಲೇಷಿಸಿ ನೋಡಿದರೆ ಶೂ ಧರಿಸಿ, ವೀರಗಾಸೆ ವೇಷಕ್ಕೆ ಅಪಮಾನ ಮಾಡುತ್ತಿರುವವರನ್ನು ಒದೆಯುತ್ತೇನೆಯೇ ವಿನಃ ವೀರಗಾಸೆಯವರಿಗೆ ಅಲ್ಲ. ಆದರೆ ಕೆಲವರು ಉದ್ದೇಶಪೂರ್ವಕವಾಗಿ ಕೆಲವು ಕ್ಲಿಪ್ಪಿಂಗ್‌ಗಳನ್ನು ವೈರಲ್ ಮಾಡಿ ವಿವಾದ ಸೃಷ್ಟಿಸುವ ಯತ್ನ ಮಾಡುತ್ತಿದ್ದಾರೆ'' ಎಂದಿದ್ದಾರೆ ಧನಂಜಯ್.

    ಡಾಲಿ ಧನಂಜಯ್ ಜೊತೆ ಸಮುದಾಯದ ಮುಖಂಡರು

    ಡಾಲಿ ಧನಂಜಯ್ ಜೊತೆ ಸಮುದಾಯದ ಮುಖಂಡರು

    ಡಾಲಿ ಧನಂಜಯ್ ಜೊತೆಗೆ ಲಿಂಗಾಯತ ಸಮುದಾಯ ಮುಖಂಡರು, ವೀರಗಾಸೆ ಕಲಾವಿದರು, ಸಿನಿಮಾ ಕರ್ಮಿ ಚಕ್ರವರ್ತಿ ಚಂದ್ರಚೂಡ್, ವೀರಭದ್ರ ಸ್ವಾಮಿಯ ಅರ್ಚಕರು ಇನ್ನೂ ಕೆಲವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ವೀರಭದ್ರ ಸ್ವಾಮಿ ಅರ್ಚಕರು, ಸಿನಿಮಾದಲ್ಲಿರುವ ಫೈಟ್ ದೃಶ್ಯವನ್ನು ಡಿಲೀಟ್ ಮಾಡಲು ವೇದಿಕೆ ಮೇಲೆಯೇ ಧನಂಜಯ್ ಅವರಿಗೆ ಬೇಡಿಕೆ ಸಲ್ಲಿಸಿದರು. ಅರ್ಚಕರಿಗೆ ವಿವರಣೆ ನೀಡಿದ ಧನಂಜಯ್, ವೀರಗಾಸೆ ವೇಷವನ್ನು ಧರಿಸಿ ಅಪಮಾನ ಮಾಡುತ್ತಿದ್ದವರಿಗೆ ಸಿನಿಮಾದಲ್ಲಿ ಜಯರಾಜ್ ಪಾತ್ರ ಹೊಡೆಯುತ್ತದೆ, ವೀರಗಾಸೆಯವರಿಗಲ್ಲ ಎಂದು ತಿಳಿಹೇಳಿದರು.

    ಫೈಟ್ ದೃಶ್ಯ ವಿವಾದಕ್ಕೆ ಕಾರಣ

    ಫೈಟ್ ದೃಶ್ಯ ವಿವಾದಕ್ಕೆ ಕಾರಣ

    'ಹೆಡ್ ಬುಷ್' ಸಿನಿಮಾದ ದೃಶ್ಯವೊಂದರಲ್ಲಿ ಜಯರಾಜ್ ಪಾತ್ರಧಾರಿ ಡಾಲಿ ಧನಂಜಯ್ ಮೇಲೆ ವೀರಗಾಸೆ ವೇಷದಲ್ಲಿದ್ದ ರೌಡಿಗಳು ಅಟ್ಯಾಕ್ ಮಾಡುತ್ತಾರೆ. ಅವರನ್ನು ಜಯರಾಜ್ ಪಾತ್ರಧಾರಿ ಧನಂಜಯ್ ಹೊಡೆದು ಉರುಳಿಸುತ್ತಾರೆ. ಈ ದೃಶ್ಯದಲ್ಲಿ ವೀರಗಾಸೆ ವೇಷದರಿಸುವ ಕಲಾವಿದರಿಗೆ ಅಪಮಾನ ಮಾಡಲಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ. ಸಿನಿಮಾದಲ್ಲಿ ಕರಗಕ್ಕೂ ಅಪಮಾನ ಮಾಡಲಾಗಿದೆ ಎಂದು ವಹ್ನಿಕುಲ ಕ್ಷತ್ರಿಯ ಸಮುದಾಯದ ಕೆಲವರು ಆರೋಪ ವ್ಯಕ್ತಪಡಿಸಿದ್ದಾರೆ.

    English summary
    Daali Dhananjay gave clarification on Veeragase controversy of his recent movie Head Bush. He ask sorry if any one's sentiment hurt due to their movie.
    Wednesday, October 26, 2022, 22:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X