For Quick Alerts
  ALLOW NOTIFICATIONS  
  For Daily Alerts

  ನಿರ್ಮಾಪಕರಾಗುತ್ತಿದ್ದಾರೆ ಡಾಲಿ ಧನಂಜಯ್: ಸಿನಿಮಾ ಯಾವುದು? ಯಾರು ಹೀರೋ?

  |

  ನಾಯಕ ನಟನಾಗಿ, ವಿಲನ್‌ ಆಗಿ ಈಗಾಗಲೇ ಅಭಿನಯ ಪ್ರತಿಭೆ ಸಾಬೀತು ಮಾಡಿರುವ ಧನಂಜಯ್‌ಗೆ ಸಾಲು ಸಾಲಾಗಿ ಅವಕಾಶಗಳು ಅರಸಿ ಬರುತ್ತಿವೆ. ಕೈತುಂಬಾ ಸಿನಿಮಾಗಳನ್ನಿಟ್ಟುಕೊಂಡಿರುವ ಈ ಪ್ರತಿಭಾವಂತ ನಟ ನಿರ್ಮಾಪಕನಾಗಲು ಮುಂದಾಗಿದ್ದಾರೆ.

  ಹೌದು ನಟ ಧನಂಜಯ್ ಇದೇ ಮೊದಲ ಬಾರಿಗೆ ಸಿನಿಮಾ ಒಂದಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಆದರೆ ಪೂರ್ಣ ಪ್ರಮಾಣದ ಬದಲಿಗೆ ಪಾಲುದಾರರೊಬ್ಬರ ಜೊತೆ ಸೇರಿ ಸಿನಿಮಾ ನಿರ್ಮಾಣಕ್ಕೆ ಕೈ ಇಟ್ಟಿದ್ದಾರೆ ಧನಂಜಯ್. ಈ ಹಿಂದೆ ಕಿರುಚಿತ್ರಕ್ಕೆ ಕತೆ, ಚಿತ್ರಕತೆ ಬರೆದಿರುವ ಧನಂಜಯ್ ಸೃಜನಶೀಲ ಚಿಂತಕರು, ಹಾಗಾಗಿ ಅವರು ನಿರ್ದೇಶನ ವಿಭಾಗಕ್ಕೆ ಬರಬಹುದೆನ್ನುವ ನಿರೀಕ್ಷೆ ಇತ್ತು. ಆದರೆ ಧನಂಜಯ್ ಒಂದೇ ಬಾರಿಗೆ ನಿರ್ಮಾಪಕರ ಕ್ಯಾಪು ಧರಿಸಿದ್ದಾರೆ.

  ಧನಂಜಯ್ ಬಯಸಿ-ಬಯಸಿ ನಿರ್ಮಾಪಕರಾಗಿಲ್ಲ ಬದಲಿಗೆ ಪರಿಸ್ಥಿತಿ ಒತ್ತಡಕ್ಕೆ ಸಿಲುಕಿ ನಿರ್ಮಾಪಕರಾಗಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಘೋಷಣೆ ಆಗಿದ್ದ ಸಿನಿಮಾದ ನಿರ್ಮಾಪಕ ಬದಲಾದ ಕಾರಣ ಧನಂಜಯ್ ಅನಿವಾರ್ಯವಾಗಿ ನಿರ್ಮಾಪಕರಾಗುತ್ತಿದ್ದಾರೆ.

  ಲಾಕ್‌ಡೌನ್‌ಗೆ ಮುಂಚೆ ಘೋಷಿಸಲಾಗಿದ್ದ ಸಿನಿಮಾ

  ಲಾಕ್‌ಡೌನ್‌ಗೆ ಮುಂಚೆ ಘೋಷಿಸಲಾಗಿದ್ದ ಸಿನಿಮಾ

  'ಹೆಡ್-ಬುಶ್' ಸಿನಿಮಾವು ಸಿನಿಮಾವು ಕಳೆದ ವರ್ಷದ ಲಾಕ್‌ಡೌನ್‌ಗೆ ಮುಂಚೆಯೇ ಘೋಷಣೆ ಆಗಿತ್ತು. ಆದರೆ ಸಿನಿಮಾ ಇನ್ನೂ ಸೆಟ್ಟೇರಿಲ್ಲ. ಇದಕ್ಕೆ ಹಲವು ಕಾರಣಗಳು. ಇದೀಗ ಈ ಸಿನಿಮಾದ ನಿರ್ಮಾಣದ ಜವಾಬ್ದಾರಿಯನ್ನು ಡಾಲಿ ಧನಂಜಯ್ ವಹಿಸಿಕೊಂಡಿದ್ದು ಸಿನಿಮಾ ಶೀಘ್ರದಲ್ಲಿಯೇ ಸೆಟ್ಟೇರಲಿದೆ.

  ರೌಡಿ ಜಯರಾಜ್ ಜೀವನ ಆಧರಿಸಿದ ಸಿನಿಮಾ

  ರೌಡಿ ಜಯರಾಜ್ ಜೀವನ ಆಧರಿಸಿದ ಸಿನಿಮಾ

  'ಹೆಡ್‌-ಬುಶ್' ಸಿನಿಮಾವು ಕುಖ್ಯಾತ ರೌಡಿ ಎಂಪಿ ಜಯರಾಜ್ ಜೀವನ ಆಧರಿಸಿದ್ದಾಗಿದ್ದು, ಸಿನಿಮಾಕ್ಕೆ ಅಗ್ನಿ ಶ್ರೀಧರ್ ಕತೆ ಬರೆದಿದ್ದಾರೆ. ಸಿನಿಮಾಕ್ಕಾಗಿ ಧನಂಜಯ್ ಕಸರತ್ತು ಮಾಡಿ ದೇಹಾಕಾರ ಬದಲಾಯಿಸಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣವು ಆಗಸ್ಟ್ 9ರಿಂದ ಆರಂಭವಾಗಲಿದ್ದು 23ಕ್ಕೆ ಮೊದಲ ಲುಕ್ ಬಿಡುಗಡೆ ಆಗಲಿದೆ.

  ಸಿನಿಮಾ ಮೇಲೆ ಭರವಸೆ ಇದೆ ಧನಂಜಯ್‌ಗೆ

  ಸಿನಿಮಾ ಮೇಲೆ ಭರವಸೆ ಇದೆ ಧನಂಜಯ್‌ಗೆ

  'ಹೆಡ್-ಬುಶ್' ಸಿನಿಮಾದ ಬಗ್ಗೆ ಧನಂಜಯ್‌ಗೆ ಸಾಕಷ್ಟು ನಿರೀಕ್ಷೆ, ಭರವಸೆ ಇರುವ ಕಾರಣ ಸಿನಿಮಾವನ್ನು ಧನಂಜಯ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಅಶು ಬೆದ್ರ ಎಂಬುವರು ಸಿನಿಮಾ ನಿರ್ಮಾಣ ಮಾಡಲಿದ್ದರು ಆದರೆ ಆ ನಿರ್ಮಾಪಕರು ಬದಲಾಗಿದ್ದಾರೆ. ಇದೀಗ ಸೋಮಣ್ಣ ಎಂಬುವರ ಜೊತೆ ಸೇರಿ ಧನಂಜಯ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾವು ಪ್ಯಾನ್ ಸಿನಿಮಾ ಆಗಿರಲಿದೆ. ಸಿನಿಮಾವನ್ನು ಶೂನ್ಯ ಎಂಬುವರು ನಿರ್ದೇಶನ ಮಾಡಲಿದ್ದಾರೆ.

  ಮೂರು ಸಿನಿಮಾ ಬಿಡುಗಡೆಗೆ ರೆಡಿ

  ಮೂರು ಸಿನಿಮಾ ಬಿಡುಗಡೆಗೆ ರೆಡಿ

  ಈ ನಡುವೆ ಡಾಲಿ ಧನಂಜಯ್ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರು ನಟಿಸಿರುವ 'ರತ್ನನ್ ಪರ್ಪಂಚ', 'ಸಲಗ', 'ತೋತಾಪುರಿ' ಸಿನಿಮಾಗಳು ಬಿಡುಗಡೆ ರೆಡಿಯಾಗಿದೆ. 'ಡಾಲಿ', 'ಬಡವ ರ್ಯಾಸ್ಕಲ್', 'ಮಾನ್ಸೂನ್ ರಾಗ', 'ಭೈರಾಗಿ' ಸಿನಿಮಾಗಳ ಚಿತ್ರೀಕರಣ ಜಾರಿಯಲ್ಲಿದೆ. ಕನ್ನಡದ ಜೊತೆಗೆ ತೆಲುಗಿನ 'ಪುಷ್ಪ' ತಮಿಳಿನ 'ಪಾಯುಂ ಒಲಿ ನೀ ಎನಕ್ಕುಂ' ಸಿನಿಮಾಗಳಲ್ಲಿಯೂ ಧನಂಜಯ್ ನಟಿಸುತ್ತಿದ್ದಾರೆ.

  'ಪುಷ್ಪ' ಸಿನಿಮಾ ಬಗ್ಗೆ ಭರವಸೆ

  'ಪುಷ್ಪ' ಸಿನಿಮಾ ಬಗ್ಗೆ ಭರವಸೆ

  ಡಾಲಿ ಧನಂಜಯ್‌ ತೆಲುಗಿನಲ್ಲಿ ನಟಿಸುತ್ತಿರುವ ಅಲ್ಲು ಅರ್ಜುನ್ ಮುಖ್ಯ ಪಾತ್ರದಲ್ಲಿರುವ 'ಪುಷ್ಪ' ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಧನಂಜಯ್ ನಟಿಸಿದ್ದ 'ಭೈರವಗೀತ' ಹಾಗೂ 'ಟಗರು' ಸಿನಿಮಾ ನೋಡಿದ್ದರಂತೆ ಪುಷ್ಪ ಸಿನಿಮಾ ನಿರ್ದೇಶಕ ಸುಕುಮಾರ್. ಈ ಎರಡೂ ಸಿನಿಮಾದಲ್ಲಿ ನಟಿಸಿರುವ ನಟ ಒಬ್ಬನೇನಾ? ಎಂಬುದೇ ಅವರಿಗೆ ನಂಬಲು ಕಷ್ಟವಾಗಿತ್ತಂತೆ. ಈ ಎರಡೂ ಸಿನಿಮಾಗಳಲ್ಲಿ ಧನಂಜಯ್ ನಟನೆ ಕಂಡು ಇಷ್ಟಪಟ್ಟು 'ಪುಷ್ಪ' ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಾರೆ ಸುಕುಮಾರ್. ನನ್ನ ಬಾಡಿ ಲಾಂಗ್ವೇಜ್, ಡೈಲಾಗ್ ಡೆಲಿವರಿ ಸುಕುಮಾರ್‌ಗೆ ಇಷ್ಟವಾಯಿತಂತೆ. 'ಪುಷ್ಪ' ಸಿನಿಮಾದ ಪಾತ್ರವೊಂದಕ್ಕೆ ನಾನೇ ಬೇಕು ಎಂದು ಕರೆಸಿಕೊಂಡರು. ಮೊದಲ ಭೇಟಿಯಲ್ಲಿಯೇ ನನ್ನನ್ನು ಸಿನಿಮಾದ ಪಾತ್ರಕ್ಕೆ ಓಕೆ ಮಾಡಿದರು. ನಾನೂ ಸಹ ಅವರೊಟ್ಟಿಗೆ ಮೊದಲ ಭೇಟಿಗೆ ಕನೆಕ್ಟ್ ಆದೆ' ಎಂದಿದ್ದಾರೆ ಧನಂಜಯ್.

  English summary
  Daali Dhananjay producing Head-Bush Kannada movie. Dhananjay playing lead role in the movie. Movie is about rowdy Jayaraj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X