Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2022ರಲ್ಲಿ ಧನಂಜಯ್ ನಟನೆಯ 6 ಚಿತ್ರಗಳು ಬಿಡುಗಡೆ; ಯಾವುದರಿಂದಲೂ ಸಿಗಲಿಲ್ಲ ಗೆಲುವು!
2022 ಮುಕ್ತಾಯದ ಹಂತಕ್ಕೆ ನಾವೆಲ್ಲಾ ಬಂದು ತಲುಪಿದ್ದೇವೆ. ವರ್ಷಾಂತ್ಯಕ್ಕೆ ಬರುತ್ತಿದ್ದಂತೆ ಈ ವರ್ಷದಲ್ಲಿ ಬಿಡುಗಡೆಗೊಂಡ ಚಿತ್ರಗಳು ಮಾಡಿದ ಕಲೆಕ್ಷನ್ ಬಗ್ಗೆ ಹಾಗೂ ಅವುಗಳು ಯಾವ ರೀತಿಯ ಇಂಪ್ಯಾಕ್ಟ್ ಮಾಡಿದವು ಎಂಬುದರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಿನಿ ರಸಿಕರು ಚರ್ಚಿಸುತ್ತಿದ್ದಾರೆ. ಈ ವರ್ಷ ನಾರ್ತ್ ಬಾಕ್ಸ್ ಆಫೀಸ್‌ನಲ್ಲಾಗಲಿ ಅಥವಾ ಸೌತ್ ಬಾಕ್ಸ್ ಆಫೀಸ್‌ನಲ್ಲಾಗಲಿ ದಕ್ಷಿಣ ಭಾರತದ ಚಿತ್ರಗಳ ಅಬ್ಬರವೇ ಹೆಚ್ಚಿತ್ತು.
ಅದರಲ್ಲಿಯೂ ಕನ್ನಡ ಚಿತ್ರರಂಗದ ಚಿತ್ರಗಳು ಈ ವರ್ಷ ಉಳಿದ ಎಲ್ಲಾ ಚಿತ್ರರಂಗದ ಚಿತ್ರಗಳಿಗಿಂತ ಹೆಚ್ಚಿನ ಯಶಸ್ಸು ಸಾಧಿಸಿದ್ದು ಹೆಚ್ಚು ಸಕ್ಸಸ್ ಕಂಡ ಚಿತ್ರರಂಗ ಎನಿಸಿಕೊಂಡಿದೆ. ಐದು ನೂರು ಕೋಟಿ ಕ್ಲಬ್ ಚಿತ್ರಗಳನ್ನು ಹೊಂದಿರುವ ಕನ್ನಡ ಚಿತ್ರರಂಗದ ಮೂರು ಚಿತ್ರಗಳು ಐಎಂಡಿಬಿ ಬಿಡುಗಡೆಗೊಳಿಸಿದ ಹತ್ತು ಜನಪ್ರಿಯ ಚಿತ್ರಗಳಲ್ಲಿ ಸ್ಥಾನ ಪಡೆದುಕೊಂಡಿವೆ.
ಹೀಗೆ ಈ ವರ್ಷ ಕನ್ನಡ ಚಿತ್ರರಂಗ ಅಬ್ಬರಿಸಿದರೆ ಕನ್ನಡದ ಕೆಲ ಚಿತ್ರಗಳು ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದ ಹೈಪ್ ಹೊಂದಿ ನಂತರ ಚಿತ್ರಮಂದಿರದಲ್ಲಿ ಆ ನೀರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿವೆ. ಇನ್ನು ಡಾಲಿ ಧನಂಜಯ್ ರೀತಿಯ ಒಳ್ಳೆಯ ಕಲಾವಿದ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿದರೂ ಸಹ ಈ ವರ್ಷ ಅವರ ನಟನೆಯ ಯಾವ ಚಿತ್ರವೂ ಸಹ ಭರ್ಜರಿ ಜಯಭೇರಿ ಬಾರಿಸುವಲ್ಲಿ ಯಶಸ್ವಿಯಾಗಿಲ್ಲ.

ಬರೋಬ್ಬರಿ 6 ಚಿತ್ರಗಳು ರಿಲೀಸ್
ವರ್ಷಾಂತ್ಯಕ್ಕೆ ಅಂದರೆ ಡಿಸೆಂಬರ್ 30ರಂದು ಡಾಲಿ ಧನಂಜಯ್ ನಟನೆಯ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಎಂಬ ಸಿನಿಮಾ ಬಿಡುಗಡೆಗೊಳ್ಳಲಿದ್ದು ಇದು ಈ ವರ್ಷ ತೆರೆ ಕಾಣಲಿರುವ ಧನಂಜಯ್ ನಟನೆಯ ಆರನೇ ಚಿತ್ರ ಎನಿಸಿಕೊಳ್ಳಿದೆ. ಮೊದಲಿಗೆ ಟ್ವೆಂಟಿ ಒನ್ ಅವರ್ಸ್ ಎಂಬ ಚಿತ್ರ ಬಿಡುಗಡೆಯಾಗಿ ಸೋಲನ್ನು ಅನುಭವಿಸಿತು. ನಂತರ ಶಿವ ರಾಜ್‌ಕುಮಾರ್ ಜತೆ ನಟಿಸಿದ್ದ ಬೈರಾಗಿ ಕೂಡ ಸದ್ದು ಮಾಡುವಲ್ಲಿ ಯಶಸ್ವಿಯಾಗಲಿಲ್ಲ. ತೆಲುಗಿನ ಕೇರ್ ಆಫ್ ಕಂಚೆರಪಾಲೆಂ ಚಿತ್ರದ ರಿಮೇಕ್ 'ಮಾನ್ಸೂನ್ ರಾಗ' ಸಹ ಹೇಳಿಕೊಳ್ಳುವಂತ ಗೆಲುವು ಸಾಧಿಸಲಿಲ್ಲ. ನಂತರ ಬಂದ ತೋತಾಪುರಿ ಮಕಾಡೆ ಮಲಗಿದರೆ, ಹೆಡ್ ಬುಷ್ ವಿವಾದದ ಮೂಲಕ ಸದ್ದು ಮಾಡಿತೇ ಹೊರತು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ. ಹೀಗೆ ಇಲ್ಲಿಯವರೆಗೂ ಈ ವರ್ಷ ಒಟ್ಟು ಐದು ಚಿತ್ರಗಳಲ್ಲೂ ದೊಡ್ಡ ಗೆಲುವು ಕಾಣದಿರುವ ಧನಂಜಯ್ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಚಿತ್ರದ ಮೂಲಕವಾದರೂ ಗೆಲ್ಲುತ್ತಾರಾ ಕಾದು ನೋಡಬೇಕಿದೆ.

ಸಾಲು ಸಾಲು ಚಿತ್ರ ಮಾಡಬೇಡಿ
ಇನ್ನು ಧನಂಜಯ್ ಸಾಲು ಸಾಲು ಚಿತ್ರಗಳನ್ನು ಮಾಡುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ ಸಿನಿ ರಸಿಕರು ಹಲವಾರು ಬಾರಿ ಇಷ್ಟು ವೇಗವಾಗಿ ಚಿತ್ರಗಳನ್ನು ಮಾಡಿ ನಿರೀಕ್ಷೆಯನ್ನು ತಲುಪಲಾಗದೇ ನಿರಾಸೆ ಮೂಡಿಸುವ ಬದಲು ಒಂದೊಳ್ಳೆ ಕಥೆಯನ್ನು ಆರಿಸಿ ನಟಿಸಿ ಎಂದು ಸಂದೇಶವನ್ನು ನೀಡಿದ್ದರು. ಸದ್ಯ ವರ್ಷಾಂತ್ಯದಲ್ಲಿ ನಡೆಯುತ್ತಿರುವ ಚರ್ಚೆಗಳಲ್ಲಿಯೂ ಸಹ ಈ ವಿಷಯದ ಕುರಿತು ಮಾತುಗಳು ಕೇಳಿ ಬರುತ್ತಿದ್ದು, ಧನಂಜಯ್ ಹೆಚ್ಚು ಚಿತ್ರ ಮಾಡುವ ಬದಲು ಕಂಟೆಂಟ್ ಇರುವ ಚಿತ್ರಗಳನ್ನು ಮಾಡಿದರೆ ಉತ್ತಮ ಎನ್ನುತ್ತಿದ್ದಾರೆ.

2023ರಲ್ಲಿ ಸರಿಯಾದ ಕತೆ ಆರಿಸಿ
ಇನ್ನೂ ಕೆಲ ನೆಟ್ಟಿಗರು ಈ ಕುರಿತು ಪ್ರತಿಕ್ರಿಯಿಸಿದ್ದು ಮುಂದಿನ ವರ್ಷವಾದರೂ ಧನಂಜಯ್ ಕ್ವಾಂಟಿಟಿ ಪಕ್ಕಕ್ಕಿಟ್ಟು ಕ್ವಾಲಿಟಿ ಚಿತ್ರಗಳನ್ನು ಮಾಡಲಿ, ಅವರಿಗಿರುವ ಪ್ರತಿಭೆಗೆ ಎಂಥೆಂಥ ಚಿತ್ರಗಳನ್ನು ನೀಡಬಹುದು ಎಂದಿದ್ದಾರೆ. ಹಾಗೂ ಈ ಪೈಕಿ ಬಹುತೇಕರು ಹೊಯ್ಸಳ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ, ಆ ಚಿತ್ರ ಗೆದ್ದೇ ಗೆಲ್ಲುತ್ತೆ ಎಂದಿದ್ದಾರೆ.