»   » ದಾದಾ ಪ್ರಾಣ್ ಇನ್ನಿಲ್ಲ; ಇಂದು ಅಂತ್ಯಕ್ರಿಯೆ

ದಾದಾ ಪ್ರಾಣ್ ಇನ್ನಿಲ್ಲ; ಇಂದು ಅಂತ್ಯಕ್ರಿಯೆ

Posted By:
Subscribe to Filmibeat Kannada
dadasaheb-phalke-awardee-bollywood-actor-pran-dead
ಮುಂಬೈ, ಜುಲೈ 13: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಬಾಲಿವುಡ್ ಬ್ಲ್ಯಾಕ್ ಗೋಲ್ಡ್ ಎಂದೇ ಖ್ಯಾತರಾಗಿದ್ದ ಹಿರಿಯ ನಟ ಪ್ರಾಣ್ ಅವರು ನಿಧನರಾಗಿದ್ದಾರೆ. ಇತ್ತೀಚೆಗೆ ವಯೋಸಹಜ ಅನಾರೋಗ್ಯದಿಂದ (ಅಂದಹಾಗೆ ಅವರಿಗೆ 93 ವರ್ಷ) ಆಸ್ಪತ್ರೆ ಸೇರಿದ್ದ ಪ್ರಾಣ್ ಅವರು ಲೀಲಾವತಿ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಪ್ರಾಣ್ ಪತ್ನಿ ಶುಕ್ಲ ಸಿಂಕಂದ್ ಮತ್ತು ಮೂವರು ಮಕ್ಕಳನ್ನು ಅವರು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಮುಂಬೈನ ಶಿವಾಜಿ ಪಾರ್ಕಿನಲ್ಲಿ ಇಂದು ಶನಿವಾರ ಮಧ್ಯಾಹ್ನ ನಡೆಯಲಿದೆ ಎಂದು ಅವರ ಪುತ್ರ ಸುನಿಲ್ ತಿಳಿಸಿದ್ದಾರೆ.

ಪ್ರಾಣ್ ಕ್ರಿಶನ್ ಸಿಕಂದ್ ( Pran Krishan Sikand) ಹೆಸರಿನ ನಟ ಪ್ರಾಣ್ ಆಗಿ ಜನಪ್ರಿಯವಾಗಿದ್ದರು. ಅವರು 1945 ರಲ್ಲಿ 'Yamla ಜಾಟ್' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಪ್ರಾಣ್, 1990ರ ವರೆಗೂ ಹಿಂದಿ ಚಿತ್ರರಂಗದಲ್ಲಿ ಖಳನಾಯಕನ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದರು. ಪರಿಪೂರ್ಣ ನಟರಾಗಿದ್ದ ಪ್ರಾಣ್ ಸುಮಾರು 400 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮೊನ್ನೆ ಮೇ ತಿಂಗಳಲ್ಲಿ ಪ್ರಾಣ್ ಅವರಿಗೆ ಪ್ರದಾನ ಮಾಡಲಾಗಿತ್ತು. ಅಂದಹಾಗೆ ಪ್ರಾಣ್ ಅವರು ಕನ್ನಡದ 'ಹೊಸರಾಗ' (1991) ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅವರಿಗೆ ಕನ್ನಡ ಭಾಷೆ ಬರುತ್ತಿಲ್ಲದ ಕಾರಣ ತುಂಬ ಕಷ್ಟಪಟ್ಟು ಈ ಚಿತ್ರದಲ್ಲಿ ಅಭಿನಯಿಸಿದ್ದರು. ಅವರ ಪಾಲಿಗೆ ಕನ್ನಡ ಕಬ್ಬಿಣದ ಕಡಲೆಯಾಗಿತ್ತು. ಹಾಗಾಗಿ ಅವರು ಮತ್ತೆ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ. (ಒನ್ಇಂಡಿಯಾ ಕನ್ನಡ)

ರಾಮ್ ಔರ್ ಶಾಮ್, ಪುರಬ್ ಔರ್ ಪಶ್ಚಿಮ್, ಕರ್ಝ್, ಉಪ್ ಕಾರ್ ಶರಾಬಿ ಹಾಗೂ ಝಂಜೀರ್ ಚಿತ್ರಗಳು ಅವರಿಗೆ ಹೆಚ್ಚು ಖ್ಯಾತಿಯನ್ನು ತಂದುಕೊಟ್ಟಂತಹವು. ಶರಾಬಿ (1984) ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೆ ತಂದೆಯಾಗಿ ಪ್ರಾಣ್ ಅಭಿನಯಿಸಿದ್ದಾರೆ. ಝಂಜೀರ್ (1973) ಚಿತ್ರದಲ್ಲಿ ಶೇರ್ ಖಾನ್ ಆಗಿ ಅಮಿತಾಬ್ ಗೆ ಗೆಳೆಯನಾಗಿ ಅಭಿನಯಿಸಿದ್ದಾರೆ. ಭಾರತದ ಮೂರನೇ ಅತ್ಯುನ್ನತ ಗೌರವವಾದ ಪದ್ಮಭೂಷಣ ಪ್ರಶಸ್ತಿಗೂ ಪ್ರಾಣ್ ಪಾತ್ರರಾಗಿದ್ದಾರೆ.

English summary
Veteran actor Pran, who was known as the Bollywood's Black gold, and had got the the prestigious Dada Saheb Phalke Award recently is no more. He died in the Leelavathi hospital on July 12 due to ileeness. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada