Don't Miss!
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- News
ಉದ್ಯಾನವನಕ್ಕೆ ಇಟ್ಟಿದ್ದ ಟಿಪ್ಪು ಸುಲ್ತಾನ್ ಹೆಸರು ತೆಗೆದ ಮಹಾರಾಷ್ಟ್ರ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕಾಂತಾರ 2'ಗೆ ಪಂಜುರ್ಲಿಯ ಅನುಮತಿ ಕೇಳಿದ ಚಿತ್ರತಂಡ: ರಿಷಬ್‌ಗೆ ಎಚ್ಚರಿಕೆ ಕೊಟ್ಟ ದೈವ!
ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಮ್ಸ್ 'ಕಾಂತಾರ' ಸಿನಿಮಾದ ಯಶಸ್ಸಿನಿಂದ ಥ್ರಿಲ್ ಆಗಿದ್ದಾರೆ. ಕೇವಲ ಸುಮಾರು ಹದಿನೈದು ಕೋಟಿಯಲ್ಲಿ ನಿರ್ಮಿಸಿದ ಸಿನಿಮಾ 400 ಕೋಟಿಗೂ ಹೆಚ್ಚು ಹಣವನ್ನು ಚಿತ್ರಮಂದಿರಗಳಿಂದಲೇ ಕಲೆಕ್ಷನ್ ಮಾಡಿದೆ!
ಕರ್ನಾಟಕ ಮಾತ್ರವೇ ಅಲ್ಲದೆ ಹೊರ ರಾಜ್ಯಗಳಲ್ಲಿಯೂ 'ಕಾಂತಾರ' ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ನಿರೀಕ್ಷೆಗಿಂತಲೂ ಬಹುದೊಡ್ಡಮಟ್ಟದ ಗೆಲುವನ್ನು ಸಿನಿಮಾ ಕಂಡಿದೆ. ಇದಕ್ಕೆ ಚಿತ್ರತಂಡದ ಶ್ರಮದ ಜೊತೆಗೆ ದೈವದ ಆಶೀರ್ವಾದವೂ ಕಾರಣ ಎನ್ನಲಾಗುತ್ತಿದೆ.
'ಕಾಂತಾರ'
ಚಿತ್ರ
ವೀಕ್ಷಿಸಲು
ಬಂದ
ಮುಸ್ಲಿಂ
ಜೋಡಿಯ
ಮೇಲೆ
ಗುಂಪಿನಿಂದ
ಹಲ್ಲೆ
ದೈವವನ್ನು ನಂಬುವ ರಿಷಬ್ ಶೆಟ್ಟಿ, ದೈವದ ಬಗ್ಗೆ ಸಿನಿಮಾ ಮಾಡುವಾದ ನೇಮ, ನಿಷ್ಠೆಗಳಿಂದ ಮಾಡಿದ್ದು, ಅಪಚಾರವಾಗದಂತೆ ನಡೆದುಕೊಂಡಿದ್ದರಿಂದಲೇ ದೈವದ ಆಶೀರ್ವಾದ ಸಿನಿಮಾಕ್ಕೆ ಧಕ್ಕಿ, ದೊಡ್ಡ ಹಿಟ್ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೀಗ 'ಕಾಂತಾರ 2' ಸಿನಿಮಾದ ಮಾತುಕತೆ ಶುರುವಾಗಿದ್ದು, 'ಕಾಂತಾರ 2' ಸಿನಿಮಾ ಮಾಡಬಹುದೇ ಎಂದು ಸ್ವತಃ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ಚಿತ್ರತಂಡದವರು ದೈವದ ಅನುಮತಿಯನ್ನು ಕೇಳಿದ್ದಾರೆ. ಈ ಸಂದರ್ಭದಲ್ಲಿ ದೈವವು ಕೆಲವು ಎಚ್ಚರಿಕೆಗಳನ್ನು ಚಿತ್ರತಂಡಕ್ಕೆ ನೀಡಿದೆ.

'ಕಾಂತಾರ 2'ಗೆ ಅನುಮತಿ ಕೋರಿದ ಚಿತ್ರತಂಡ
ಮಂಗಳೂರು ನಗರ ಹೊರವಲಯದ ಬಂದಲೆಯ ಮನೆಯಲ್ಲಿ ನಡೆದ ಪಂಜುರ್ಲಿ ಕೋಲದಲ್ಲಿ ಕಾಂತಾರ ಚಿತ್ರತಂಡ ಭಾಗವಹಿಸಿದೆ. ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಅಡಿಗ ಅವರ ಸಮ್ಮುಖದಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ದೈವದ ಬಳಿ ರಿಷಬ್ ಶೆಟ್ಟಿ ದೈವದ ಬಳಿ ಕಾಂತಾರಾ ಭಾಗ ಎರಡು ನಿರ್ಮಾಣಕ್ಕೆ ಅನುಮತಿ ಕೇಳಿದೆ. ಈ ಸಂದರ್ಭದಲ್ಲಿ ಸಿನಿಮಾದ ನಿರ್ದೇಶಕ, ನಟ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು ಸೇರಿದಂತೆ ಇನ್ನು ಕೆಲವರು ಹಾಜರಿದ್ದರು.

ರಿಷಬ್ ಶೆಟ್ಟಿಗೆ ಎಚ್ಚರಿಕೆ ನೀಡಿದ ದೈವ!
'ಕಾಂತಾರ' ಭಾಗ 2 ಸಿನಿಮಾ ಮಾಡಲು ದೈವವು ಅನುಮತಿಯನ್ನು ನೀಡಿದೆ. ಆದರೆ ಕೆಲವು ಷರತ್ತುಗಳನ್ನು, ಎಚ್ಚರಿಕೆಯನ್ನು ದೈವ ನೀಡಿದೆ. 'ಕಾಂತಾರ' ಚಿತ್ರತಂಡಕ್ಕೆ ಅಭಯ ನೀಡಿರುವ ಅಣ್ಣಪ್ಪ ಪಂಜುರ್ಲಿ 'ಮೊದಲು ಚಿತ್ರ ಮಾಡೋವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ, ಈ ಬಾರಿ ಮಾತ್ರ ನೂರು ಬಾರಿ ಯೋಚನೆ ಮಾಡಿ. ಮಾಡಿದ ಪ್ರಯತ್ನಕ್ಕೆ ಯಾವತ್ತೂ ಜಯ ಸಿಗುವ ರೀತಿ ಮಾಡುತ್ತೇನೆ. ಈ ಹಿಂದೆ ಇದ್ದ ತಂಡದ ಜೊತೆಗೆ, ಅಷ್ಟೇ ಶುದ್ಧಾಚಾರದಲ್ಲಿ ಮುಂದುವರಿಯಿರಿ' ಅಂತಾ ದೈವ ಅಣ್ಣಪ್ಪ ಪಂಜುರ್ಲಿ ಕಾಂತಾರ ಚಿತ್ರತಂಡಕ್ಕೆ ಅಭಯ ನೀಡಿದೆ.

ಮುಂದಿನ ಮಳೆಗಾಲದಲ್ಲಿ ಚಿತ್ರೀಕರಣ ಆರಂಭ
ದೈವದಿಂದ ಅನುಮತಿ ದೊರೆತೊಡನೆ ರಿಷಬ್ ಶೆಟ್ಟಿ ಸಿನಿಮಾ ನಿರ್ಮಾಣಕ್ಕೆ ಈಗಾಗಲೇ ಮಾಡಿಕೊಂಡಿದ್ದ ಯೋಜನೆಯನ್ನು ಜಾರಿಗೊಳಿಸಲು ಪ್ರಾರಂಭಿಸಿದ್ದಾರೆ. ಚಿತ್ರದಲ್ಲಿ ನಟಿಸುವ ಕೆಲವರಿಗೆ ಉದ್ದ ಕೂದಲು ಬಿಡಲು ಸೂಚಿಸಿದ್ದಾರೆ. ಮುಂದಿನ ಮಳೆಗಾಲದ ಅವಧಿಯಲ್ಲಿ ಕಾಂತಾರಾ ಭಾಗ ಎರಡು ಚಿತ್ರದ ಚಿತ್ರೀಕರಣ ವಾಗುವ ಸಾಧ್ಯತೆಗಳಿವೆ. 'ಕಾಂತಾರ' ಸಿನಿಮಾದಲ್ಲಿ ನಟಿಸಿರುವ ಬಹುತೇಕ ಕಲಾವಿದರು 'ಕಾಂತಾರ 2' ಸಿನಿಮಾದಲ್ಲಿಯೂ ನಟಿಸುವ ಸಾಧ್ಯತೆ ದಟ್ಟವಾಗಿದೆ. ಮತ್ತು ಈ ಕತೆ 'ಕಾಂತಾರ' ಮೊದಲ ಭಾಗ ನಡೆದ ಕತೆಗಿಂತಲೂ ಹಿಂದಿನ ಸಮಯದ ಕತೆ ಹೊಂದಿರಲಿದೆ ಎನ್ನಲಾಗುತ್ತಿದೆ.

'ಕಾಂತಾರ' ಚಿತ್ರತಂಡ ಭಾಗಿ
ಹೊಂಬಾಳೆ ಪ್ರೊಡಕ್ಷನ್ ನ ವಿಜಯ್ ಕಿರಂಗದೂರು, ನಟ, ನಿರ್ದೇಶಕ ರಿಷಬ್ ಶೆಟ್ಟಿ, ನಟಿ ಸಪ್ತಮಿ ಗೌಡ, ಪ್ರಮೋದ್ ಶೆಟ್ಟಿ, ದೀಪಕ್ ರೈ ಪಾಣಾಜೆ, ನವೀಬ್ ಬೋಂದೆಲ್ ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಸೇರಿದಂತೆ ರಿಷಬ್ ಕುಟುಂಬಸ್ಥರು,ಕಾಂತಾರಾ ಚಿತ್ರ ತಂಡದ ಕಲಾವಿದರು ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ಭಾಗವಹಿಸಿದ್ದಾರೆ. ಇದಕ್ಕೂ ಮುನ್ನ ರಿಷಬ್ ಶೆಟ್ಟಿ ಹಾಗೂ ಇತರರು ಕಟೀಲು ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.