Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವೀರೇಂದ್ರ ಹೆಗ್ಡೆ ಒಪ್ಪಿದರೆ 'ಕಾಂತಾರ 2 ಗುಟ್ಟು ಬಿಚ್ಚಿಟ್ಟ ದೈವನರ್ತಕ ಉಮೇಶ್?
ರಿಷಬ್ ಶೆಟ್ಟಿ 'ಕಾಂತಾರ 2' ಸಿನಿಮಾ ಮಾಡುತ್ತಾರಾ ಇಲ್ವಾ? ಅನ್ನೋದು ಸಿನಿಪ್ರಿಯರಿಗೆ ದೊಡ್ಡ ಪ್ರಶ್ನೆಯಾಗಿಯೇ ಕಾಡುತ್ತಿತ್ತು. ಆ ಗೊಂದಲಕ್ಕಿಂಗ ಪರಿಹಾರ ಸಿಕ್ಕಂತಾಗಿದೆ. ರಿಷಬ್ ಶೆಟ್ಟಿ 'ಕಾಂತಾರ ಪಾರ್ಟ್ 2' ಮಾಡೋದು ಬಹುತೇಕ ಕನ್ಫರ್ಮ್ ಆಗಿದೆ.
ದೇಶಾದ್ಯಂತ ಡಿವೈನ್ ಹಿಟ್ ಪಡೆದ 'ಕಾಂತಾರಾ' ಚಿತ್ರ ಎರಡನೇ ಭಾಗ ಪಡೆಯೋದು ಖಚಿತವಾಗಿದೆ. ಮಂಗಳೂರಿನ ಬಂದಲೆಯ ಮಡಿವಾಳಬೆಟ್ಟುವಿನಲ್ಲಿ ನಡೆದ ರಿಷಬ್ ಶೆಟ್ಟಿ ಯ ಹರಕೆಯ ಅಣ್ಣಪ್ಪ ಪಂಜುರ್ಲಿಯ ದೈವದ ಕೋಲದಲ್ಲಿ 'ಕಾಂತಾರಾ' ಚಿತ್ರ ಎರಡನೇ ಭಾಗಕ್ಕೆ ಶುಭಶಕುನ ತೋರಿದೆ.
'ರಿಷಬ್
ಶೆಟ್ಟಿ
ಕಂಡ್ರೆ
ನನಗೆ
ಅಸೂಯೆ':
ಬಾಲಿವುಡ್
ನಟ
ನವಾಜುದ್ದೀನ್
ಸಿದ್ದಿಕಿ
ಹೀಗಂದಿದ್ಯಾಕೆ?
ರಿಷಬ್ ಶೆಟ್ಟಿಯ ಹರಕೆ ಬಗ್ಗೆ ಅಣ್ಣಪ್ಪ ಪಂಜುರ್ಲಿಗೆ ದೈವ ಸೇವೆ ಮಾಡಿದ ದೈವ ನರ್ತಕ ಉಮೇಶ್ ಗಂಧಕಾಡು ಫಿಲ್ಮಿಬೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಉಮೇಶ್ ಈ ಭೂತ ಕೋಲ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ.

'ಕಾಂತಾರ 2'ಗಾಗಿ ಹರಕೆ ಹೊತ್ತಿದ್ದ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಅಪ್ಪಣ್ಣ ಪಂಜುರ್ಲಿಗೆ ಕೋಲ ಮಾಡಿಸುತ್ತೇನೆ ಎಂದು ಹರಕೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದಷ್ಟೆ ಕೋಲ ನೆರವೇರಿದೆ. ಈ ಬಗ್ಗೆ ದೈವನರ್ತಕರಾಗಿರುವ ಅಪ್ಪಣ್ಣ ಪಂಜುರ್ಲಿ ಮಾಹಿತಿ ನೀಡಿದ್ದಾರೆ. "ಕಳೆದ ಕೆಲ ದಿನಗಳ ಹಿಂದೆ ರಿಷಬ್ ಶೆಟ್ಟಿ ಕರೆ ಮಾಡಿ ತನ್ನ ಮನದಾಸೆಯಂತೇ ಮಡಿವಾಳ ಬೆಟ್ಟುವಿನಲ್ಲಿ ಅಣ್ಣಪ್ಪ ಪಂಜುರ್ಲಿಗೆ ಕೋಲ ಮಾಡಬೇಕು ಅಂತಾ ಹರಕೆ ಹೊತ್ತಿದ್ದೇನೆ. ತಾವು ಆ ಸೇವೆ ಮಾಡಬೇಕೆಂದು ಮನವಿ ಮಾಡಿದ್ದರು. ದೈವ ಇಚ್ಛೆಯಂತೇ ಡಿಸೆಂಬರ್ 8ನೇ ತಾರೀಖು ದೈವ ಅಣ್ಣಪ್ಪಪಂಜುರ್ಲಿಯ ಹರೆಕೆಯ ಕೋಲ ಮಾಡಿದ್ದೇವೆ. ಆ ದಿನ ಗ್ರಾಮ ದೇವರಿಗೆ ಕ್ಷೇತ್ರದ ನಾಗ ದೇವರಿಗೆ ಸೇವೆ ಸಲ್ಲಿಸಿ ಸಂಜೆ ಐದು ಗಂಟೆಗೆ ರಿಷಬ್ ಶೆಟ್ಟಿ ಮಡಿವಾಳ ಬೆಟ್ಟುವಿನ ಅಣ್ಣಪ್ಪ ಪಂಜುರ್ಲಿಯ ದೈವಸ್ಥಾನಕ್ಕೆ ಆಗಮಿಸಿದರು. ಆರು ಗಂಟೆಗೆ ದೈವ ಸೇವೆಗೆ ಎಣ್ಣೆ ಬೂಳ್ಯ ಸಂಪ್ರದಾಯವೂ ನಡೆಯಿತು. ರಾತ್ರಿ ಇಡೀ ಅಣ್ಣಪ್ಪ ಪಂಜುರ್ಲಿಯ ಕೋಲ ಮೂರು ಪ್ರಕಾರದಲ್ಲಿ ಸೂಸೂತ್ರವಾಗಿ ನಡೆಯಿತು" ಎಂದು ದೈವ ನರ್ತಕ ಉಮೇಶ್ ಗಂಧಕಾಡು ಮಾಹಿತಿ ನೀಡಿದ್ದಾರೆ.

'ಕಾಂತಾರ 2'ಗೆ ದೈವದ ಶುಭ ಶಕುನ
"ಕಾಂತಾರಾ-2 ಗೆ ಅಣ್ಣಪ್ಪ ಪಂಜುರ್ಲಿ ದೈವದ ಅನುಮತಿ ವಿಚಾರವಾಗಿ ದೈವ ನರ್ತನ ಸೇವೆ ಮಾಡಿದರೂ, ದೈವದ ಸೇವೆಗೆ ಇಳಿದ ಬಳಿಕ ಎಲ್ಲವೂ ದೈವದ ಇಚ್ಛೆಯಾಗಿದೆ. ದೈವ ಹೇಳುವ ನುಡಿಯೆಲ್ಲಾ ನನಗೆ ಗೊತ್ತಾಗದೇ ಆಗುವಂತಹದು. ಅಣ್ಣಪ್ಪ ಪಂಜುರ್ಲಿಯ ಸೇವೆ ಮುಗಿದ ಬಳಿಕ ಹಲವು ಮಂದಿ ನನ್ನ ಬಳಿ 'ಕಾಂತಾರಾ-2' ಚಿತ್ರಕ್ಕೆ ದೈವ ಅಪ್ಪಣೆ ನೀಡಿದೆ ಎಂಬ ವಿಚಾರ ಹೇಳಿದರು. ಪುಷ್ಪ ಪ್ರಶ್ನೆಯಲ್ಲಿ ದೈವದ ಬಳಿ ಮನವಿ ಮಾಡಿಕೊಂಡಾಗ ಶುಭ ಶಕುನ ಕಂಡಿದೆ ಅಂತಾ ಗೊತ್ತಾಯಿತು" ಅಂತಾ ಉಮೇಶ್ ಗಂಧಕಾಡು ಹೇಳಿದ್ದಾರೆ.

ಪುಷ್ಪ ಪ್ರಶ್ನೆ ಎಂದರೇನು?
ಯಾವುದೇ ದೈವದ ಕೋಲವನ್ನು ಯಾವಾಗಂದ್ರೆ ಆಗ ಮಾಡಲು ಸಾಧ್ಯವಿಲ್ಲ. ಪ್ರತಿಯೊಂದು ದೈವಕ್ಕೂ ಕೋಲ ಮಾಡುವಾಗಲೂ ಕೆಲವು ನಿಯಮಗಳನ್ನು ಪಾಲಿಸಬೇಕು. ಪ್ರಶ್ನೆಗಳನ್ನು ಕೇಳಬೇಕು. "ಪುಷ್ಪ ಪ್ರಶ್ನೆ ಅಂದರೆ ದೈವದ ಕೊಡಿಯಲ್ಲಿ ಮನದ ಸಂದೇಶಕ್ಕೆ ಹೂ ಪ್ರಶ್ನೆ ಮೂಲಕ ಪರಿಹಾರ ಕಾಣೋದಾಗಿದೆ. ದೈವಾರಾಧನೆಯಲ್ಲಿ ಎಲ್ಲವೂ ಪ್ರಾಕೃತಿಕವಾಗಿ ಸಿಗುವ ಪುಷ್ಪವನ್ನೇ ಬಳಸೋದಾಗಿದೆ. ಪುಷ್ಪ ಪ್ರಶ್ನೆಯಲ್ಲಿ ಅಡಿಕೆಯ ಹಿಂಗಾರದ ಎಸಳನ್ನು ಪ್ರಶ್ನೆ ಮಾಡಿ ಆ ಬಳಿಕ ಶಕುನ ಕಂಡುಹೊಡಿಯೋದಾಗಿದೆ." ಪುಷ್ಪ ಪ್ರಶ್ನೆ ಮಾಡಿದ್ದರ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ವೀರೇಂದ್ರ ಹೆಗ್ಡೆ ಒಪ್ಪಿದರೆ ಮಾತ್ರ 'ಕಾಂತಾರ 2' ಎಂದು ಪಂಜುರ್ಲಿ ಹೇಳಿರೊ ಬಗ್ಗೆ ಮಾಹಿತಿ ಹೊರಬಿದ್ದಿದೆ.

'ಅಪ್ಪಣ್ಣ ಪಂಜುರ್ಲಿ ಪ್ರಾರ್ಥನೆ ಮಾಡಬೇಕು'
"ಕಾಂತಾರಾ-2 ಬಹಳ ಶುದ್ಧಾಚಾರದಿಂದ ಮಾಡಬೇಕು. ಮೊದಲು ಧರ್ಮಸ್ಥಳಕ್ಕೆ ತೆರಳಿ ಅಣ್ಣಪ್ಪ ಪಂಜುರ್ಲಿ ದೈವದ ಬಳಿ ಪ್ರಾರ್ಥನೆಯನ್ನು ಮಾಡಬೇಕು. ದೈವದ ಸೇವೆ ಬಳಿಕ ನನಗೆ ಈ ವಿಚಾರ ಗೊತ್ತಾಗಿದೆ" ಅಂತಾ ಅಣ್ಣಪ್ಪ ಪಂಜುರ್ಲಿ ದೈವ ನರ್ತಕ ಉಮೇಶ್ ಗಂಧಕಾಡು ಫಿಲ್ಮಿಬೀಟ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.