For Quick Alerts
  ALLOW NOTIFICATIONS  
  For Daily Alerts

  'ದನ ಕಾಯೋನು' ವಿವಾದ: ನಿರ್ಮಾಪಕ ಆರ್ ಶ್ರೀನಿವಾಸ್ ವಿರುದ್ಧ ಭಟ್ರ ಆಕ್ರೋಶ

  By Suneetha
  |

  ದುನಿಯಾ ವಿಜಯ್ ಮತ್ತು ಯೋಗರಾಜ್ ಭಟ್ರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ದನ ಕಾಯೋನು' ಚಿತ್ರಕ್ಕೆ ಸೆಟ್ಟೇರಿದಾಗಿನಿಂದ ಆಗಾಗ, ಒಂದಲ್ಲಾ ಒಂದು ಕಂಟಕಗಳು ಎದುರಾಗುತ್ತಲೇ ಇದೆ.

  'ದನ ಕಾಯೋನು' ಸಿನಿಮಾ ಬಿಡುಗಡೆಗೆ ತಯಾರಾಗಿ ನಿಂತರೂ, ಬಜೆಟ್ ಸಮಸ್ಯೆಯಿಂದ ರಿಲೀಸ್ ಮಾಡಲು ಸಾಧ್ಯವಾಗದೇ, ಅರ್ಧಕ್ಕೆ ನಿಂತಿದ್ದು ಹಳೆಯ ವಿಷಯ.[ತೆಲುಗಿನ 'ಅಖಿಲ್' ಸೋತಿದ್ದಕ್ಕೆ ಕನ್ನಡದ ಚಿತ್ರಗಳು ಬಲಿಪಶು ಆದ್ವಾ?]

  ಹೋಗ್ಲಿ ಆಮೇಲೆ ಬಜೆಟ್ ಸಮಸ್ಯೆಗೆ ಪರಿಹಾರ ಸಿಕ್ಕಿತು. ಇನ್ನೇನು ದಸರಾ ಹಬ್ಬದ ಸಂದರ್ಭದಲ್ಲಿ ಧಾಂ ಧೂಂ ಅಂತ ಸಿನಿಮಾ ಬಿಡುಗಡೆ ಮಾಡಿಯೇ ಬಿಡೋಣ ಅಂತ ಇಡೀ ಚಿತ್ರತಂಡ ಭರ್ಜರಿಯಾಗೇ ತಯಾರಿ ಮಾಡುತ್ತಿದೆ.

  ಈಗಾಗಲೇ ಟ್ರೈಲರ್, ಆಡಿಯೋ ಬಂದಿದೆ. ಸೆನ್ಸಾರ್ ಮಂಡಳಿ 'ಯು' ಪ್ರಮಾಣ ಪತ್ರ ಕೂಡ ನೀಡಿದೆ. ಅಕ್ಟೋಬರ್ 7, ಇದೇ ವಾರ ಬಿಡುಗಡೆ ಕೂಡ ಆಗುತ್ತೆ ಅಂತ ದುನಿಯಾ ವಿಜಯ್ ಅವರ ಅಭಿಮಾನಿಗಳು ಕೂಡ ಭಾರಿ ಖುಷಿಯಲ್ಲಿ ತೇಲಾಡ್ತಾ ಇದ್ದಾರೆ. ಅಷ್ಟರಲ್ಲೇ ಹೊಸ ಸಮಸ್ಯೆ ವಕ್ಕರಿಸಿಕೊಂಡಿದೆ. ಏನಪ್ಪಾ ಹೊಸ ಸಮಸ್ಯೆ ನೋಡಲು ಮುಂದೆ ಓದಿ....

  ಬಿಡುಗಡೆ ಮಾಡಲ್ಲ ಅಂತ ಪಟ್ಟು ಹಿಡಿದ ಭಟ್ರು

  ಬಿಡುಗಡೆ ಮಾಡಲ್ಲ ಅಂತ ಪಟ್ಟು ಹಿಡಿದ ಭಟ್ರು

  ''ದನ ಕಾಯೋನು' ನಟ ದುನಿಯಾ ವಿಜಯ್, ಕ್ಯಾಮೆರಾಮೆನ್ ಜ್ಞಾನಮೂರ್ತಿ ಮತ್ತು ನಿರ್ದೇಶಕ ಯೋಗರಾಜ್ ಭಟ್ ಅವರಿಗೆ, ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಸುಖಾ-ಸುಮ್ಮನೆ ನಿಂದನೆ ಮಾಡಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಅಕ್ಟೋಬರ್ 7ಕ್ಕೆ ಸಿನಿಮಾ ಬಿಡುಗಡೆ ಮಾಡಲು ನಾನು ಬಿಡುವುದಿಲ್ಲ' ಎಂದು ಚಿತ್ರದ ನಿರ್ದೇಶಕ ಯೋಗರಾಜ್ ಭಟ್ ಅವರು ಪಟ್ಟು ಹಿಡಿದು ಕುಳಿತಿದ್ದಾರೆ.[ಭಟ್ರ 'ದನ ಕಾಯೋನು' ಬಿಡುಗಡೆಗೆ ಮುಹೂರ್ತ ಇಟ್ಟಾಯ್ತು]

  ಕ್ಷಮೆ ಕೇಳಿದರೆ ಸಿನಿಮಾ ಬಿಡುಗಡೆ ಖಂಡಿತ

  ಕ್ಷಮೆ ಕೇಳಿದರೆ ಸಿನಿಮಾ ಬಿಡುಗಡೆ ಖಂಡಿತ

  'ಯುನಿಫಿ ಸ್ಟುಡಿಯೋದಲ್ಲಿ 'ದನ ಕಾಯೋನು' ಚಿತ್ರದ ಅನಿಮೇಷನ್ ನಡೆಯುತ್ತಿದ್ದ ವೇಳೆ, ಗ್ರಾಫಿಕ್ ಕೆಲಸಗಳಿಗೆ ಮತ್ತು ಸೌಂಡ್ ಕೆಲಸಗಳಿಗೆ, ನಿರ್ದೇಶಕ ಯೋಗರಾಜ್ ಭಟ್ ಮತ್ತು ಕ್ಯಾಮೆರಾಮೆನ್ ಜ್ಞಾನಮೂರ್ತಿ ಕಮಿಷನ್ ತೆಗೆದುಕೊಂಡಿದ್ದಾರೆ, ಅಂತ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಹೇಳಿದ್ದಾರೆ. ಈ ಘಟನೆ ನಡೆದಿದ್ದು ನಿನ್ನೆ ರಾತ್ರಿ. ಆದ್ದರಿಂದ ಅವರು ಕ್ಷಮೆ ಕೇಳುವವರೆಗೆ ನಾನು ಸಿನಿಮಾ ಬಿಡುಗಡೆ ಮಾಡುವುದಿಲ್ಲ' ಅಂತ ಭಟ್ರು ತಿಳಿಸಿದ್ದಾರೆ.[ಧನ ಬೇಕು ಅಂದರೆ ಇನ್ನೊಂದಷ್ಟು ದಿನ ದನ ಕಾಯಬೇಕು!]

  ಭಟ್ರ ಮನಸ್ಸಿಗೆ ನೋವುಂಟು ಮಾಡಿದೆ

  ಭಟ್ರ ಮನಸ್ಸಿಗೆ ನೋವುಂಟು ಮಾಡಿದೆ

  'ನಿರ್ಮಾಪಕರು ಈ ರೀತಿ ಹೇಳಿದ ಸಂದರ್ಭದಲ್ಲಿ ರಾಮಮೂರ್ತಿ, ಸಹ ನಿರ್ದೇಶಕ ಮಹೇಶ್ ಮಂಡ್ಯ ಮತ್ತು ಸುಮಾರು ಜನ ನಿರ್ಮಾಪಕರ ಕಡೆಯವರು ಅಲ್ಲೇ ಇದ್ದರಂತೆ. ಇವರ ಬಾಯಿಂದ ಬಂದ ಅಂತಹ ಮಾತುಗಳನ್ನು ಕೇಳಿ ನಮಗೆ ನಮ್ಮ ಇಡೀ ತಂಡಕ್ಕೆ ಮನಸ್ಸಿಗೆ ತುಂಬಾ ನೋವಾಗಿದೆ. ಅವರು ಆ ರೀತಿಯೆಲ್ಲಾ ಬೇಡದ ಮಾತು, ಲೂಸ್ ಟಾಕ್ಸ್ ಮಾತಾಡಬಾರದಿತ್ತು ಅನ್ನೋದು ನನ್ನ ನೋವಿನ ಅಭಿಪ್ರಾಯ'. -ಯೋಗರಾಜ್ ಭಟ್[ದುನಿಯಾ ವಿಜಯ್ 'ದನ' ಕಾಯ್ಲಿಲ್ಲ.! ಪ್ರಿಯಾಮಣಿ ತಿರುಗಿ ನೋಡ್ಲಿಲ್ಲ.! ಯಾಕೆ?]

  ಕಮಿಷನ್ ಪಡೆಯೋ ಲಕ್ಷಣ ನಮ್ಮ ಮುಖದಲ್ಲಿಲ್ಲ

  ಕಮಿಷನ್ ಪಡೆಯೋ ಲಕ್ಷಣ ನಮ್ಮ ಮುಖದಲ್ಲಿಲ್ಲ

  'ನನ್ನ ಮುಖದಲ್ಲಾಗಲಿ, ನಮ್ಮ ಕ್ಯಾಮೆರಾಮೆನ್ ಜ್ಞಾನಮೂರ್ತಿ ಅವರ ಮುಖದಲ್ಲಾಗಲಿ ಕಮಿಷನ್ ಪಡೆಯೋ ಕಿಂಚಿತ್ ಲಕ್ಷಣಗಳು ಕಾಣುತ್ತಿಲ್ಲ. ನಾವೆಂದಿಗೂ, ಯಾವತ್ತಿಗೂ ಅಂತಹ ಹೊಲಸಿಗೆ ಆಸೆ ಪಟ್ಟವರು ಅಲ್ಲ, ಪಡುವವರು ಅಲ್ಲ ಅಂತ, ನಾನು ಈ ಮೂಲಕ ಎಲ್ಲರಿಗೂ ತಿಳಿಸ್ತಾ ಇದ್ದೀನಿ. ನಾವು ಹಗಲು-ರಾತ್ರಿ ನಿದ್ದೆಗೆಟ್ಟು 'ದನ ಕಾಯೋನು' ಸಿನಿಮಾಗೆ ವಿಪರೀತ ಕೆಲಸ ಮಾಡಿದ್ದೇವೆ. ನಾವಷ್ಟೇ ಅಲ್ಲದೇ ನಾಯಕ-ನಾಯಕಿ ಸೇರಿದಂತೆ ಇಡೀ ತಂಡ, ಪ್ರತಿಯೊಬ್ಬರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಎಲ್ಲರೂ ಕಷ್ಟಪಟ್ಟಿದ್ದಕ್ಕೆ ಅವರಿಗೆ ಸರಿಯಾಗಿ ಕೂಲಿ ಸಿಕ್ಕಿದೆಯಾ ಇಲ್ವೋ ಅದೂ ನನಗೆ ಸರಿಯಾಗಿ ಗೊತ್ತಿಲ್ಲ'.-ಯೋಗರಾಜ್ ಭಟ್. [ಯೋಗರಾಜ್ ಭಟ್ರು ಏನೋ ಅಂದ್ರು, ಅದನ್ನ ಸಿದ್ಧರಾಮಣ್ಣ ಕೇಳ್ಸೋಬೇಕಲ್ಲಾ?!]

  ದುನಿಯಾ ವಿಜಯ್ ಮಧ್ಯ ಪ್ರವೇಶ

  ದುನಿಯಾ ವಿಜಯ್ ಮಧ್ಯ ಪ್ರವೇಶ

  ನಟ ದುನಿಯಾ ವಿಜಯ್ ಅವರ ಮಧ್ಯ ಪ್ರವೇಶ ಇಲ್ಲಾ ಅಂತಿದ್ರೆ, ಈ ಸಿನಿಮಾದ ಕೆಲಸ ಅದ್ಯಾವಾಗ್ಲೋ ನಿಂತು ಹೋಗಬೇಕಿತ್ತು. ಅದಕ್ಕಾಗಿ ಈ ಸಂದರ್ಭದಲ್ಲಿ ಅವರಿಗೆ ಒಂದು ನಮನ ಸಲ್ಲಿಸುತ್ತೇನೆ. ಹಾಗೂ ಈ ರೀತಿ ಯಾವತ್ತೂ ಕೂಡ ಒಬ್ಬ ನಟ-ನಟಿ ಅಥವಾ ತಂತ್ರಜ್ಞರ ಬಗ್ಗೆ ಯಾವ ನಿರ್ಮಾಪಕರು ಕೂಡ ಕೆಟ್ಟದಾಗಿ ಮಾತನಾಡಬಾರದು ಅಂತ ನನ್ನ ಕೋರಿಕೆ. ಕೆಟ್ಟದ್ದನ್ನು ಮಾತಾಡಿದ್ದಕ್ಕಾಗಿ, ಕ್ಷಮೆ ಕೇಳುವವರೆಗೂ ನಾನು, ದುನಿಯಾ ವಿಜಿ, ನಟಿ ಮುಂತಾದವರು ಚಿತ್ರದ ಯಾವುದೇ ಬೆಳವಣಿಗೆಗಳಲ್ಲೂ ಭಾಗವಹಿಸುವುದಿಲ್ಲ'. -ಯೋಗರಾಜ್ ಭಟ್

  ಬಿಡುಗಡೆ ಮುಂದಕ್ಕೆ ಹೋದ್ರು ಚಿಂತೆ ಇಲ್ಲ

  ಬಿಡುಗಡೆ ಮುಂದಕ್ಕೆ ಹೋದ್ರು ಚಿಂತೆ ಇಲ್ಲ

  'ರಿಲೀಸ್ ಮುಂದೆ ಹೋದ್ರು ಪರವಾಗಿಲ್ಲ. ನಟ-ನಟಿಯರದ್ದು ಮರ್ಯಾದೆ ಉಳಿಯಬೇಕು. ಇನ್ಮುಂದೆ ಯಾರೂ ಕೂಡ ಬೆನ್ನಹಿಂದೆ ಕೆಟ್ಟದಾಗಿ ಮಾತಾಡಿ ತಪ್ಪಿಸಿಕೊಳ್ಳಲು ನೋಡಬಾರದು ಅನ್ನೋದಕ್ಕೆ ಈ ಸಂದೇಶ. ನಿರ್ಮಾಪಕ ಆರ್.ಶ್ರೀನಿವಾಸ್ ಅವರು ಕ್ಷಮೆ ಕೇಳಲೇಬೇಕು, ಹಾಗೂ ಯಾರಿಗೆಲ್ಲಾ ಕೂಲಿ ಕೊಡಲು ಬಾಕಿ ಇದೆಯೋ ಅವರಿಗೆಲ್ಲಾ ಸಮಾಧಾನಕರವಾಗಿ ಕೂತು ಸಂದಾಯ ಮಾಡಬೇಕು. ಆಮೇಲೆ ಸಿನಿಮಾ ಬಿಡುಗಡೆ ಮಾಡಲಿ'.-ಯೋಗರಾಜ್ ಭಟ್

  ದುನಿಯಾ ವಿಜಯ್ ಏನಂತಾರೆ?

  ದುನಿಯಾ ವಿಜಯ್ ಏನಂತಾರೆ?

  'ಶ್ರೀನಿವಾಸ್ ಅವರು ಯೋಗರಾಜ್ ಭಟ್ ಮತ್ತು ಕ್ಯಾಮೆರಾಮೆನ್ ಬಗ್ಗೆ ಮಾತನಾಡಿದ್ದಾರೆ. ಕಮಿಷನ್ ತೆಗದುಕೊಳ್ಳುತ್ತಾರೆ ಎಂದು ನಿಂದಿಸಿದ್ದಾರೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ. ಈ ವಿಚಾರದಲ್ಲಿ ನಾನಂತೂ ಯೋಗರಾಜ್ ಭಟ್ ಅವರ ಪರವಾಗಿ ನಿಲ್ಲುತ್ತೇನೆ. ಅವರನ್ನಾಗಲಿ, ಕ್ಯಾಮೆರಾಮೆನ್ ಗಳನ್ನಾಗಲಿ ಯಾವುದೇ ಕಾರಣಕ್ಕೂ ಬಿಟ್ಟುಕೊಡೋದಿಲ್ಲ. ಭಟ್ರು ಏನು ಅಂತ ಇಡೀ ಚಿತ್ರರಂಗಕ್ಕೆ ಗೊತ್ತು. ಅವರನ್ನು ಕಮಿಷನ್ ಏಜೆಂಟ್ ಅಂತ ಕರೆದಿರೋದು ಅಸಹ್ಯ ಮೂಡಿಸುತ್ತದೆ. ಅವರು ಮಾತಾಡಿರೋದು ತಪ್ಪು. ಅವರು ಕ್ಷಮೆ ಕೇಳಬೇಕು, ಇಲ್ಲವಾದಲ್ಲಿ ಸಿನಿಮಾ ಬಿಡುಗಡೆ ಆದ್ರೂ ನಮಗೂ ಅದಕ್ಕೂ ಸಂಬಂಧವಿಲ್ಲ'.- ನಟ ದುನಿಯಾ ವಿಜಯ್

  ತಳ್ಳಿ ಹಾಕಿದ ನಿರ್ಮಾಪಕ

  ತಳ್ಳಿ ಹಾಕಿದ ನಿರ್ಮಾಪಕ

  ಯೋಗಾರಾಜ್ ಭಟ್ ಮತ್ತು ದುನಿಯಾ ವಿಜಯ್ ಅವರ ಹೇಳಿಕೆಗಳನ್ನು ತಳ್ಳಿ ಹಾಕಿರುವ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು 'ಕಮಿಷನ್ ಏಜೆಂಟ್ ಅಂತ ಹೇಳಿಲ್ಲ, ಬೇಕಾದರೆ ದೇವರ ಮೇಲೆ ಆಣೆ ಮಾಡುತ್ತೇನೆ. ಯೋಗರಾಜ್ ಭಟ್ ಬಗ್ಗೆ ನಾನೇನೂ ಹೇಳಿಲ್ಲ. ಈ ವಿಷಯವೇ ನನಗೆ ಗೊತ್ತಿಲ್ಲ. ತಪ್ಪು ಮಾಡಿದ್ದರೆ ಕ್ಷಮೆ ಕೇಳಬೇಕು. ಆದ್ರೆ ನಾನು ತಪ್ಪು ಮಾಡಿಲ್ಲ, ಮತ್ಯಾಕೆ ಕ್ಷಮೆ ಕೇಳಬೇಕು', ಎನ್ನುತ್ತಾರೆ ನಿರ್ಮಾಪಕರು.

  English summary
  All is not well between the producer and the director of 'Dana Kayonu'. And producer Kanakapura Srinivas has accused director Yogaraj Bhatt and actor Vijay that they have taken commission from Uni-Fi Media and has usurped a lot of money.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X