»   » ಭಟ್ರ 'ದನ ಕಾಯೋನು' ಬಿಡುಗಡೆಗೆ ಮುಹೂರ್ತ ಇಟ್ಟಾಯ್ತು

ಭಟ್ರ 'ದನ ಕಾಯೋನು' ಬಿಡುಗಡೆಗೆ ಮುಹೂರ್ತ ಇಟ್ಟಾಯ್ತು

Posted By:
Subscribe to Filmibeat Kannada

ಯೋಗರಾಜ್ ಭಟ್ರು ಮತ್ತು ದುನಿಯಾ ವಿಜಯ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ದನ ಕಾಯೋನು' ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದೆ.

ತರಾತುರಿಯಲ್ಲಿ ಸೆನ್ಸಾರ್ ಪರೀಕ್ಷೆ ಮುಗಿಸಿ, ಇದೀಗ ಪ್ರಮಾಣಪತ್ರ ಪಡೆದುಕೊಂಡ 'ದನ ಕಾಯೋನು' ದಸರಾ ಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆಯಾಗಿ ಬಿಡುಗಡೆ ಆಗ್ತಾ ಇದೆ.[ದಸರಾ ಹಬ್ಬಕ್ಕೆ ನಟಿ ಪ್ರಿಯಾಮಣಿಗೆ ಅಗ್ನಿಪರೀಕ್ಷೆ !]


ಸಾಕಷ್ಟು ಕುತೂಹಲ ಹುಟ್ಟು ಹಾಕಿರುವ 'ದನ ಕಾಯೋನು' ಚಿತ್ರದಲ್ಲಿ ದುನಿಯಾ ವಿಜಿ ಅವರಿಗೆ ನಟಿ ಪ್ರಿಯಾಮಣಿ ಅವರು ಸಾಥ್ ಕೊಟ್ಟಿದ್ದಾರೆ. ಹಳ್ಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಈ ಚಿತ್ರದ ಚಿತ್ರೀಕರಣ ನಡೆದಿದ್ದು, ಪ್ರಿಯಾಮಣಿ ಮತ್ತು ದುನಿಯಾ ವಿಜಯ್ ಅವರು ಅಪ್ಪಟ ಮಣ್ಣಿನ ಮಕ್ಕಳ ಅವತಾರದಲ್ಲಿ ಮಿಂಚಿದ್ದಾರೆ. ಮುಂದೆ ಓದಿ...


ಸೆನ್ಸಾರ್ ನಲ್ಲಿ ಗ್ರೀನ್ ಸಿಗ್ನಲ್

ಯೋಗರಾಜ್ ಭಟ್ರ ಬಹು ನಿರೀಕ್ಷೆಯ 'ದನ ಕಾಯೋನು' ಸಿನಿಮಾ ನೋಡಿದ ಸೆನ್ಸಾರ್ ಮಂಡಳಿ 'ಯು' ಪ್ರಮಾಣಪತ್ರ ನೀಡುವ ಮೂಲಕ, ಸಿನಿಮಾ ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದೆ.[ವಿಡಿಯೋ: ದುನಿಯಾ ವಿಜಿ-ಭಟ್ರ 'ಕಾವೇರಿ ಗಾನ'ದ ಸಣ್ಣ ಝಲಕ್]


ಯಾವಾಗ ರಿಲೀಸ್?

ದಸರಾ ಹಬ್ಬದ ಸಂದರ್ಭದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಅಂತ, ಭಟ್ರು ಈ ಮೊದಲೇ ಹೇಳಿದ್ದರು. ಇದೀಗ ಕೊಟ್ಟ ಮಾತಿನಂತೆ ಇದೇ ವಾರ ಅಂದ್ರೆ, ಅಕ್ಟೋಬರ್ 7 ರಂದು ಇಡೀ ಕರ್ನಾಟಕದಾದ್ಯಂತ ಗ್ರ್ಯಾಂಡ್ ಆಗಿ 'ದನ ಕಾಯೋನು' ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಬೆಂಗಳೂರಿನ ಅನುಪಮ ಚಿತ್ರಮಂದಿರದಲ್ಲಿ 'ದನ ಕಾಯೋನು' ತೆರೆ ಕಾಣುತ್ತಿದೆ.[ಧನ ಬೇಕು ಅಂದರೆ ಇನ್ನೊಂದಷ್ಟು ದಿನ ದನ ಕಾಯಬೇಕು!]


ಮೊದಲ ಬಾರಿಗೆ ವಿಜಿಗೆ 'ಯು' ಪ್ರಮಾಣಪತ್ರ

ಇನ್ನು ನಟ ದುನಿಯಾ ವಿಜಯ್ ಅವರ ಸಿನಿ ಜರ್ನಿಯಲ್ಲಿ ಮೊಟ್ಟ ಮೊದಲ ಬಾರಿಗೆ 'ಯು' ಪ್ರಮಾಣಪತ್ರ ಪಡೆದುಕೊಂಡಿದ್ದಾರೆ. ಇದುವರೆಗೆ ಅವರು ನಟಿಸಿರುವ ಯಾವೊಂದು ಸಿನಿಮಾಗಳಿಗೂ ಬರೀ 'ಯು' ಪ್ರಮಾಣಪತ್ರ ದೊರೆತಿರಲಿಲ್ಲವಂತೆ.


ಚಿತ್ರ-ವಿಚಿತ್ರ ಹೆಸರುಗಳು

ಯೋಗರಾಜ್ ಭಟ್ರ ಸಿನಿಮಾ ಅಂದ್ರೆ ಹಾಗೆ, ಅದರಲ್ಲಿ ಕೊಂಚ ವಿಭಿನ್ನತೆ ಇರಲೇಬೇಕು. ಅವರು ತಮ್ಮ ಚಿತ್ರದಲ್ಲಿ ಪಾತ್ರಧಾರಿಗಳಿಗೆ ನೀಡುವ ಹೆಸರೂ ಕೂಡ ಭಿನ್ನ-ವಿಭಿನ್ನ. ಅಂದಹಾಗೆ ಈ ಚಿತ್ರದಲ್ಲಿ ನಟ ದುನಿಯಾ ವಿಜಯ್ ಅವರ ಹೆಸರು ಕೆಂಪರಾಜು ಅಲಿಯಾಸ್ ಡೊಕೊಮೊ, ನಟಿ ಪ್ರಿಯಾಮಣಿ ಅವರ ಹೆಸರು ಜಗದಾಂಬ ಅಲಿಯಾಸ್ ಜುಮ್ಮಿ ಅಂತಾದ್ರೆ, ರಂಗಾಯಣ ರಘು ಅವರ ಹೆಸರು ಸಬ್ಸಿಡಿ ಶಾಮಣ್ಣ ಎಂದಿದೆ.


English summary
Kannada movie 'Dana Kayonu' gets 'U' certificate, and releasing on October 7th. Kannada Actor Duniya Vijay, Actress Priyamani in the lead role. The movie is directed by Yogaraj Bhat.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada