»   » ಗೆದ್ದು ಸೋತ ಚಿತ್ರ : ಕ್ಯಾಕರಿಸಿ ನಕ್ಕ ಗಾಂಧಿನಗರ

ಗೆದ್ದು ಸೋತ ಚಿತ್ರ : ಕ್ಯಾಕರಿಸಿ ನಕ್ಕ ಗಾಂಧಿನಗರ

Posted By:
Subscribe to Filmibeat Kannada
Dandupalya director busy in Tamil and Telugu dubbing
ದಂಡುಪಾಳ್ಯ ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ಅವರ ಮುಂದಿನ ಪ್ರಾಜೆಕ್ಟ್ ಯಾವುದು? ಈ ಬಗ್ಗೆ ಇವರಿಗೇ ಇನ್ನೂ ಕ್ಲಾರಿಟಿ ಇಲ್ಲ. ರಾಜು ಸದ್ಯ ದಂಡುಪಾಳ್ಯ ಬೇರೆ ಭಾಷೆಗೆ ಡಬ್ ಮಾಡುವಲ್ಲಿ ತೊಡಗಿಕೊಂಡಿದ್ದಾರೆ. ತೆಲುಗು ಮತ್ತು ತಮಿಳಿನಲ್ಲಿ ಈ ಚಿತ್ರವನ್ನು ಡಬ್ ಮಾಡಲು ಹೊರಟಿದ್ದಾರೆ ಶ್ರೀನಿವಾಸರಾಜು.

ದಂಡುಪಾಳ್ಯ ಚಿತ್ರ ಚೆನ್ನಾಗಿಯೇ ಓಡಿತಾದರೂ ಐವತ್ತು ದಿನದ ಹೊತ್ತಿಗೆ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಆ ಚಿತ್ರವನ್ನು ಹೆಚ್ಚು ಪ್ರೊಮೋಟ್ ಮಾಡಬೇಡಿ ಎಂದು ನಿರ್ಮಾಪಕರಿಗೆ ಎಚ್ಚರಿಕೆ ಕೊಟ್ಟರು.

ಹಾಗಾಗಿ ಊರು ತುಂಬಾ ಬಿದ್ದಿದ್ದ ಪೋಸ್ಟರ್ ಗಳು ಎರಡೇ ದಿನದಲ್ಲಿ ಮೋರಿ ಪಾಲಾದವು.

ನಂತರ ಐವತ್ತು ದಿನದ ಕಾರ್ಯಕ್ರಮ ಕೂಡ ಕ್ಯಾನ್ಸಲ್ ಮಾಡಬೇಕಾದ ಅನಿವಾರ್ಯತೆ ಬಂತು. ಕಾರಣ ಊರು ತುಂಬಾ ದಂಡುಪಾಳ್ಯ ಮಾದರಿಯ ಕೊಲೆ-ಸುಲಿಗೆಗಳು ಆಗತೊಡಗಿದವು.ಆ ಕಾರಣಕ್ಕೆ ದಂಡುಪಾಳ್ಯ ಒಂಥರಾ ಗೆದ್ದು ಸೋತ ಚಿತ್ರ ಎಂದು ಗಾಂಧಿನಗರ ಕ್ಯಾಕರಿಸಿ ನಗತೊಡಗಿತು.

ಈ ಎಲ್ಲಾ ಕಾರಣಕ್ಕೆ ಶ್ರೀನಿವಾಸರಾಜು ಒಂಥರಾ ಗೆದ್ದು ಸೋತ ನಿರ್ದೇಶಕರಾಗಿಬಿಟ್ಟರು. ಒಳ್ಳೆ ಸಿನಿಮಾ ಮಾಡಿ ಹೆಸರು ಮಾಡೋದು ಬೇರೆ. ಸೆಕ್ಸ್-ರೇಪ್-ಮರ್ಡರ್ ಮಿಸ್ಟರಿಯನ್ನು ಹೈಲೈಟ್ ಮಾಡಿ ಕಾಸು ಮಾಡುವುದು ಬೇರೆ ಎಂದು ಚಿತ್ರೋದ್ಯಮ ನಿರ್ಧರಿಸಿಬಿಟ್ಟಿತು.

ಈ ಎಲ್ಲಾ ಕಾರಣಕ್ಕೆ ಟಿವಿ ರೈಟ್ಸ್ ಕೂಡಾ ಕೇಳುವವರಿಲ್ಲ. ಕ್ರೈಮ್ ಸಿನಿಮಾ ಟೀವಿಯಲ್ಲಿ ಬರಬೇಕಾದರೆ ಮತ್ತೆ ಸೆನ್ಸಾರ್ ಮಾಡಬೇಕು. ಯು ಸರ್ಟಿಫಿಕೇಟ್ ಪಡೆದುಕೊಳ್ಳಬೇಕು. ಅವೆಲ್ಲಾ ಸಹವಾಸವೇ ಬೇಡ ಎಂದು ಚಾನೆಲುಗಳು ಸುಮ್ಮನಾಗಿಬಿಟ್ಟವು.

ತೆಲುಗು ತಮಿಳಲ್ಲಿ ಡಬ್ ಅಥವಾ ರೀಮೇಕ್ ಮಾಡುವುದನ್ನು ಬಿಟ್ಟರೆ ಶ್ರೀನಿವಾಸ ರಾಜು ಸದ್ಯ ಬೇರೆ ಯಾವುದರ ಬಗ್ಗೆಯೂ ತಲೆಕೆಡಿಸಿಕೊಂಡಿಲ್ಲ. ಉಪ್ಪಿಯ ಡೇಟ್ ಇದೆ. ದುನಿಯಾ ವಿಜಿ ಕಾಲ್‍ಶೀಟ್ ಕೊಟ್ಟಿದ್ದಾರೆ. ಅವರಿಗೆ ಅಡ್ವಾನ್ಸ್ ಕೊಟ್ಟಿದ್ದೇವೆ ಎಂದಷ್ಟೇ ಹೇಳಿಕೊಂಡು ಶ್ರೀನಿವಾಸರಾಜು ಓಡಾಡುತ್ತಿದ್ದಾರೆ.

English summary
Director Srinivasaraju busy in dubbing of Dandupalya movie in Tamil and Telugu.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada