»   » 'ಕುರುಕ್ಷೇತ್ರ' ಶೂಟಿಂಗ್ ಸೆಟ್ ನಲ್ಲಿ 'ಭೀಮ'ನ ಹುಟ್ಟುಹಬ್ಬ ಆಚರಣೆ

'ಕುರುಕ್ಷೇತ್ರ' ಶೂಟಿಂಗ್ ಸೆಟ್ ನಲ್ಲಿ 'ಭೀಮ'ನ ಹುಟ್ಟುಹಬ್ಬ ಆಚರಣೆ

Posted By:
Subscribe to Filmibeat Kannada

ಮುನಿರತ್ನ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಕುರುಕ್ಷೇತ್ರ' ಚಿತ್ರದ ಶೂಟಿಂಗ್ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ನಟ ದರ್ಶನ್ ಸೇರಿದಂತೆ ರವಿಚಂದ್ರನ್, ಅರ್ಜುನ್ ಸರ್ಜಾ, ರವಿಶಂಕರ್, ಸೋನು ಸೂದ್ ಹಾಗೂ ಇನ್ನಿತರ ಕಲಾವಿದರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಈ ಮಧ್ಯೆ 'ಭೀಮ' ಪಾತ್ರಧಾರಿ ಡ್ಯಾನಿಶ್ ಅಖ್ತರ್ ಸೈಫ್ ಅವರ ಹುಟ್ಟುಹಬ್ಬವನ್ನ 'ಕುರುಕ್ಷೇತ್ರ' ಶೂಟಿಂಗ್ ಸೆಟ್ ನಲ್ಲಿ ಆಚರಿಸಲಾಗಿದೆ.

ವಿಡಿಯೋ: 'ತಾರಕ್' ಜೊತೆ 'ಕುರುಕ್ಷೇತ್ರ' ಟೀಸರ್ ಬಂತು

Danish akhtar saifi birthday celebration in kurukshetra shooting set

ಹೌದು, ಬಾಲಿವುಡ್ ಕಿರುತೆರೆ ನಟ ಹಾಗೂ ಬಾಡಿ ಬಿಲ್ಡರ್ ಡ್ಯಾನಿಶ್ ಅಖ್ತರ್ ಸೈಫ್, ಕನ್ನಡದ 'ಕುರುಕ್ಷೇತ್ರ' ಚಿತ್ರದಲ್ಲಿ ಭೀಮನ ಪಾತ್ರ ನಿರ್ವಹಿಸುತ್ತಿದ್ದಾರೆ. ಸತತ ಶೂಟಿಂಗ್ ಮಧ್ಯೆ ತಮ್ಮ ಜನುಮದಿನವನ್ನ ಸೆಲೆಬ್ರೆಟ್ ಮಾಡಿದ್ದು, ಈ ವೇಳೆ ನಟ ಶಶಿಕುಮಾರ್, ಸೋನುಸೂದ್, ಯಶಸ್ ಸೂರ್ಯ, ನಿರ್ದೇಶಕ ನಾಗಣ್ಣ ಸೇರಿದಂತೆ ಹಲವರು ಈ ಸಂತಸದ ಕ್ಷಣಕ್ಕೆ ಸಾಕ್ಷಿಯಾಗಿದ್ದರು.

'ಕುರುಕ್ಷೇತ್ರ' ಶೂಟಿಂಗ್ ಬಿಡುವಿನ ವೇಳೆ 'ದುರ್ಯೋಧನ' ಏನ್ ಮಾಡ್ತಾರೆ?

Danish akhtar saifi birthday celebration in kurukshetra shooting set

ಅಂದ್ಹಾಗೆ, ಶಶಿಕುಮಾರ್ 'ಧರ್ಮರಾಯ', ಸೋನು ಸೂದ್ 'ಅರ್ಜುನ', ಯಶಸ್ ಸೂರ್ಯ 'ನಕುಲ'ನಾಗಿ ಹಾಗೂ ಡ್ಯಾನಿಶ್ ಅಖ್ತರ್ 'ಭೀಮ'ನಾಗಿ ಅಬ್ಬರಿಸಲಿದ್ದಾರೆ. ಇನ್ನುಳಿದಂತೆ ದರ್ಶನ್ 'ದುರ್ಯೋಧನ', ರವಿಚಂದ್ರನ್ 'ಕೃಷ್ಣ', ಅರ್ಜುನ್ ಸರ್ಜಾ 'ಕರ್ಣ', ಸ್ನೇಹಾ 'ದ್ರೌಪದಿ', ಪಾತ್ರವನ್ನ ನಿರ್ವಹಿಸಲಿದ್ದಾರೆ.

English summary
Danish akhtar saifi birthday celebration in Kannada movie kurukshetra shooting set.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada