For Quick Alerts
  ALLOW NOTIFICATIONS  
  For Daily Alerts

  ನಟ ದರ್ಶನ್ ಹೆಲಿಕಾಪ್ಟರ್ ನಲ್ಲೇ ಡಿಶುಂ ಡಿಶುಂ

  By Rajendra
  |

  ಈಗಾಗಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹಲವಾರು ಚಿತ್ರಗಳಲ್ಲಿ ಗಾಳಿಯಲ್ಲೇ ಹಾರುತ್ತಾ ಶತ್ರುಗಳನ್ನು ಸದೆಬಡಿದಿದ್ದಾರೆ. ಇನ್ನು ಹೆಲಿಕಾಪ್ಟರ್ ಸನ್ನಿವೇಶಗಳು ದರ್ಶನ್ ಅವರ ಅಭಿಮಾನಿಗಳಿಗೆ ಹೊಸದಲ್ಲ. ಗಾಳಿಯಲ್ಲೇ ಹಾರಾಡುತ್ತಾ ಡ್ಯುಯಟ್ ಸಹ ಹಾಡಿದ್ದಾರೆ.

  ಈ ಬಾರಿ ಬೃಂದಾವನ ಚಿತ್ರದ ಮೂಲಕ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲು ಬರುತ್ತಿದ್ದಾರೆ. ಈ ಚಿತ್ರದ ಒಂದು ಸಾಹಸ ಸನ್ನಿವೇಶದ ಬಗ್ಗೆ ಮಾತನಾಡಿರುವ ದರ್ಶನ್, "ನನ್ನ ವೃತ್ತಿ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ ನಲ್ಲಿ ಆಕ್ಷನ್ ಸನ್ನಿವೇಶ ಮಾಡಿದ್ದೇನೆ. ಅದೊಂದು ಮರೆಯಲಾಗದ ಅನುಭವ" ಎಂದು ಹೇಳಿಕೊಂಡಿದ್ದಾರೆ.

  ಅಪಾಯದಲ್ಲಿರುವ ಗೆಳೆಯ ಉಳಿಸಲು ಹೆಲಿಕಾಪ್ಟರ್ ನಿಂದ ತಾನು ಕೆಳಗೆ ಜಿಗಿಯುತ್ತೇನೆ. ಇದು ಚಿತ್ರದ ಇಂಟ್ರಡಕ್ಷನ್ ಸೀನ್. ಇಲ್ಲಿಂದ ಕಥೆ ಆರಂಭವಾಗುತ್ತದೆ ಎನ್ನುತ್ತಾರೆ ದರ್ಶನ್. ಸದ್ಯಕ್ಕೆ ಬೃಂದಾವನ ಚಿತ್ರದ ಶೂಟಿಂಗ್ ಸಕಲೇಶಪುರದಲ್ಲಿ ಭರದಿಂದ ಸಾಗುತ್ತಿದೆ.

  ಹೆಲಿಕಾಪ್ಟರ್ ಸಾಹಸ ಸನ್ನಿವೇಶ ಚಿತ್ರೀಕರಣಕ್ಕಾಗಿ ಪೈಲಟ್ ಗೆ ಮುಂಚಿತವಾಗಿಯೇ ತಿಳಿಸಲಾಗಿತ್ತು. ನನಗೆ ಒಂದು ವಾರ ಕಾಲಾವಧಿ ಇತ್ತು. ಭೂಮಿಯಿಂದ ಹತ್ತು ಅಡಿ ಮೇಲೆ ಹೆಲಿಕಾಪ್ಟರ್ ಹಾರುತ್ತದೆ. ಆಗ ಕೆಳಗೆ ಜಿಗಿಯುವ ಸನ್ನಿವೇಶ ಅದು. ಚಿತ್ರೀಕರಣ ಸ್ಪಾಟ್ ನಲ್ಲಿ ಬಹಳಷ್ಟು ಟ್ರಾಫಿಕ್ ಇದ್ದ ಕಾರಣ ಅಪಾಯ ಸ್ವಲ್ಪ ಹೆಚ್ಚಾಗಿಯೇ ಇತ್ತು ಎಂದು ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ.

  ಈ ಚಿತ್ರಕ್ಕೆ ಕೆ.ವಿ.ರಾಜು ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರಮೇಶ್ ಬಾಬು ಅವರ ಛಾಯಾಗ್ರಹಣವಿದೆ. ಪಾತ್ರವರ್ಗದಲ್ಲಿ ಜೈಜಗದೀಶ್, ದೊಡ್ಡಣ್ಣ, ಸಾಧು ಕೋಕಿಲಾ, ಸಂಪತ್, ಕುರಿ ಪ್ರತಾಪ್, ಕೇಡಿ ವೆಂಕಟೇಶ್, ವೀಣಾ ಸುಂದರ್ ಮುಂತಾದ ಕನ್ನಡ ಚಿತ್ರಗಳ ರೆಗ್ಯುಲರ್ ಕಲಾವಿದರಿದ್ದಾರೆ. ಬಿಗ್ ಬಜೆಟ್ ಚಿತ್ರವಾಗಿರುವ 'ಬೃಂದಾವನ' ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ. (ಏಜೆನ್ಸೀಸ್)

  English summary
  Challenging Star Darshan has done an action sequence in a helicopter for the first time in his career. The actor sasy it was a very exciting experience. In the action scene, he seen swooping down in a helicopter to save a friend in distress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X