For Quick Alerts
  ALLOW NOTIFICATIONS  
  For Daily Alerts

  ನಿಶ್ವಿಕಾ ನಾಯ್ದು ನಾಲ್ಕು ಚಿತ್ರಗಳಿಗೂ ದರ್ಶನ್ ಬೆಂಬಲ

  |

  ಪ್ರಜ್ವಲ್ ದೇವರಾಜ್ ನಟನೆಯ ಜಂಟಲ್ ಮನ್ ಸಿನಿಮಾ ಇದೇ ವಾರ ತೆರೆಕಾಣುತ್ತಿದೆ. ನಿಶ್ವಿಕಾ ನಾಯ್ಡು ಅಭಿನಯದ ನಾಲ್ಕನೇ ಚಿತ್ರ ಇದು. ಜಂಟಲ್ ಮನ್ ಸಿನಿಮಾ ಆರಂಭದಿಂದಲೂ ಬಿಡುಗಡೆವರೆಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಚಿತ್ರಕ್ಕೆ ಸಾಥ್ ನೀಡಿದ್ದಾರೆ.

  ಟೀಸರ್, ಟ್ರೈಲರ್, ಆಡಿಯೋ ಹೀಗೆ ಪ್ರತಿ ಕಾರ್ಯಕ್ರಮದಲ್ಲಿ ದರ್ಶನ್ ಭಾಗಿಯಾಗಿದ್ದರು. ಪ್ರಜ್ವಲ್ ದೇವರಾಜ್ ಸಿನಿಮಾ ಎನ್ನುವುದು ಇದಕ್ಕೆ ಕಾರಣವಾಗಿದ್ದರೂ ನಿಶ್ವಿಕಾ ನಾಯ್ಡುಗೆ ಒಂದು ರೀತಿ ಲಕ್ಕಿಯಾಗಿದೆ.

  ನಿಶ್ವಿಕಾ ನಾಯ್ಡು ಪ್ರಕಾರ 'ಜಂಟಲ್ ಮ್ಯಾನ್' ಅಂದ್ರೆ ಇವರಂತೆ!ನಿಶ್ವಿಕಾ ನಾಯ್ಡು ಪ್ರಕಾರ 'ಜಂಟಲ್ ಮ್ಯಾನ್' ಅಂದ್ರೆ ಇವರಂತೆ!

  ಹೌದು, ನಿಶ್ವಿಕಾ ನಟನೆಯ ನಾಲ್ಕು ಚಿತ್ರಗಳಿಗೂ ಡಿ ಬಾಸ್ ಬೆಂಬಲ ನೀಡಿದ್ದು ಇಲ್ಲಿ ಗಮನಾರ್ಹ. ನಿಶ್ವಿಕಾ ನಾಯ್ಡು ನಟಿಸಿದ್ದ ಚೊಚ್ಚಲ ಸಿನಿಮಾ 'ಅಮ್ಮ ಐ ಲವ್ ಯೂ' ಚಿತ್ರದ ಕಾರ್ಯಕ್ರಮದಲ್ಲಿ ದರ್ಶನ್ ಭಾಗಿಯಾಗಿದ್ದರು. ಚಿರಂಜೀವಿ ಸರ್ಜಾ ನಾಯಕರಾಗಿದ್ದರು.

  ನಿಶ್ವಿಕಾ ನಟನೆಯ ಎರಡನೇ ಚಿತ್ರ 'ವಾಸು ನಾನು ಪಕ್ಕಾ ಕಮರ್ಷಿಯಲ್' ಚಿತ್ರಕ್ಕೂ ದರ್ಶನ್ ಸಾಥ್ ನೀಡಿದ್ದರು. ಅನಿಶ್ ತೇಜೇಶ್ವರ್ ನಾಯಕನಾಗಿದ್ದ ಈ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ದರ್ಶನ್ ಅತಿಥಿಯಾಗಿದ್ದರು.

  ಚೊಚ್ಚಲ ಚಿತ್ರಕ್ಕೂ ಮುಂಚೆಯೇ 4 ಪ್ರಾಜೆಕ್ಟ್ ಗೆ ಬುಕ್ ಆದ ನಟಿ.!ಚೊಚ್ಚಲ ಚಿತ್ರಕ್ಕೂ ಮುಂಚೆಯೇ 4 ಪ್ರಾಜೆಕ್ಟ್ ಗೆ ಬುಕ್ ಆದ ನಟಿ.!

  ಇನ್ನು ಕೆ ಮಂಜು ಮಗ ಶ್ರೇಯಸ್ ಅಭಿನಯಿಸಿದ್ದ ಮೊದಲ ಸಿನಿಮಾ ಪಡ್ಡೆಹುಲಿ ಚಿತ್ರದ ಕಾರ್ಯಕ್ರಮಕ್ಕೂ ದರ್ಶನ್ ಬಂದಿದ್ದರು. ಈ ಸಿನಿಮಾದಲ್ಲು ನಿಶ್ವಿಕಾ ನಟಿಸಿದ್ದರು. ಈಗ ನಾಲ್ಕನೇ ಚಿತ್ರಕ್ಕೂ ಡಿ ಬಾಸ್ ಸಾಥ್ ಕೊಟ್ಟಿದ್ದಾರೆ.

  ಜಂಟಲ್ ಮನ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಈ ಖುಷಿಯನ್ನ ನಿಶ್ವಿಕಾ ನಾಯ್ಡು ಹಂಚಿಕೊಂಡರು. 'ನಾನು ನಟಿಸಿದ ಎಲ್ಲ ಚಿತ್ರಗಳಿಗೂ ದರ್ಶನ್ ಅವರು ಬಂದಿದ್ದಾರೆ, ಮುಂದೆ ಅವರ ಜೊತೆ ನಟಿಸುವುದು ಮಾತ್ರ ಬಾಕಿ. ಅದು ಆದಷ್ಟೂ ಬೇಗ ಆಗಲಿ' ಎಂದು ಆಸೆ ವ್ಯಕ್ತಪಡಿಸಿದ್ದಾರೆ.

  English summary
  Kannada actress Nishvika Naidu expressed happy about darshan. because, darshan was always supports her films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X