»   » 'ಮುನಿರತ್ನ ಕುರುಕ್ಷೇತ್ರ'ಕ್ಕೆ ಚಾಲೆಂಜಿಂಗ್ ದರ್ಶನ್ ಕಾಲಿಟ್ಟಿದ್ದು ಹೇಗೆ?

'ಮುನಿರತ್ನ ಕುರುಕ್ಷೇತ್ರ'ಕ್ಕೆ ಚಾಲೆಂಜಿಂಗ್ ದರ್ಶನ್ ಕಾಲಿಟ್ಟಿದ್ದು ಹೇಗೆ?

Posted By:
Subscribe to Filmibeat Kannada

ನಿರ್ಮಾಪಕ ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಚಿತ್ರದ ಧುರ್ಯೋಧನನ ಪಾತ್ರದಲ್ಲಿ ನಟ ದರ್ಶನ್ ಕಾಣಿಸಿಕೊಂಡಿದ್ದಾರೆ. ಆದರೆ ಮುನಿರತ್ನ ತಮ್ಮ ಈ ಚಿತ್ರಕ್ಕೆ ದರ್ಶನ್ ಅವರನ್ನೇ ಯಾಕೆ ಆಯ್ಕೆ ಮಾಡಿಕೊಂಡರು ಎನ್ನುವುದು ಅನೇಕರಿಗೆ ಮೂಡುವ ಸಣ್ಣ ಕುತೂಹಲ.

'ಕುರುಕ್ಷೇತ್ರ' ಚಿತ್ರದ ಯಾವ್ಯಾವ ಪಾತ್ರಗಳಲ್ಲಿ ಯಾವ್ಯಾವ ನಟರು ಮಿಂಚಲಿದ್ದಾರೆ ನೋಡಿ..

ನಿಜ ಹೇಳಬೇಕೆಂದರೆ ದರ್ಶನ್ ಮತ್ತು ಮುನಿರತ್ನ ಅವರ ಅನುಬಂಧ ನಿನ್ನೆ ಮೊನ್ನೆಯದಲ್ಲ. ಅದು 'ಮೆಜೆಸ್ಟಿಕ್' ಚಿತ್ರದಿಂದ ಶುರುವಾಗಿ ಈಗ 'ಕುರುಕ್ಷೇತ್ರ'ವನ್ನು ತಲುಪಿದೆ. ದರ್ಶನ್ ಅಭಿನಯದ ಮೊದಲ ಸಿನಿಮಾಗೆ ಕ್ಲಾಪ್ ಮಾಡಿದ ಮುನಿರತ್ನ ಈಗ ಅವರ 50ನೇ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

'ಕುರುಕ್ಷೇತ್ರ'ಕ್ಕೆ ಅದ್ಧೂರಿ ಚಾಲನೆ: ಎಲ್ಲ ಊಹಾಪೋಹಗಳಿಗೆ ಸಿಕ್ತು ಉತ್ತರ

Darshan and Munirathna friendship

ದರ್ಶನ್ ಅವರ ಜೊತೆ ಒಳ್ಳೆಯ ಒಡನಾಟ ಹೊಂದಿರುವ ಮುನಿರತ್ನ, ದರ್ಶನ್ ಮತ್ತು ಉಪೇಂದ್ರ ಅವರ 'ಅನಾಥರು' ಚಿತ್ರವನ್ನು ನಿರ್ಮಾಣ ಮಾಡಿದ್ದರು. ನಂತರ ದರ್ಶನ್ ಅವರ 'ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ' ಚಿತ್ರ ನೋಡಿದ ಮುನಿರತ್ನ ಈಗ 'ಕುರುಕ್ಷೇತ್ರ' ಚಿತ್ರಕ್ಕೆ ಅವರೇ ಸರಿ ಅಂತ ಆಯ್ಕೆ ಮಾಡಿದ್ದಾರೆ. ದರ್ಶನ್ ಅವರಿಗೂ ಮುನಿರತ್ನ ಬ್ಯಾನರ್ ನಲ್ಲಿ ಸಿನಿಮಾ ಮಾಡುವ ಬಗ್ಗೆ ಖುಷಿ ಇದೆ.

English summary
Kurukshetra Movie Actor Darshan and Producer Munirathna friendship.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada