For Quick Alerts
  ALLOW NOTIFICATIONS  
  For Daily Alerts

  ಜೋಡೆತ್ತುಗಳ ಉಳಿದ 14 ದಿನ ಪ್ರಚಾರದ ಸಂಪೂರ್ಣ ವೇಳಾಪಟ್ಟಿ

  |

  ಸುಮಲತಾ ಪರ ಜೋಡೆತ್ತುಗಳು ಪ್ರಚಾರಕ್ಕಿಳಿದಿದೆ. ನಿನ್ನೆಯಿಂದ ಅಧಿಕೃತವಾಗಿ ಆರಂಭಿಸಿರುವ ರಾಕಿಂಗ್ ಸ್ಟಾರ್-ಚಾಲೆಂಜಿಂಗ್ ಸ್ಟಾರ್ ಸತತವಾಗಿ 16ನೇ ತಾರೀಖಿನವರೆಗೂ ಅಬ್ಬರದ ಪ್ರಚಾರ ಮಾಡಲಿದ್ದಾರೆ.

  ಈ ಸಲ ಟ್ರೈಲರ್ ತೋರಿಸಲ್ಲ, ಪೂರ್ತಿ ಸಿನಿಮಾ ತೋರಿಸುತ್ತೇವೆ ಎಂದು ಹೇಳಿದ್ದ ಡಿ ಬಾಸ್, ಹೇಳಿದಂತೆ ಸಂಪೂರ್ಣವಾಗಿ ಪ್ರಚಾರಕ್ಕೆ ತೊಡಗಿಕೊಂಡಿದ್ದಾರೆ. ಇಂದು ಜೋಡೆತ್ತುಗಳ ಎರಡನೇ ದಿನ ಪ್ರಚಾರ ಶುರು ಮಾಡಿದ್ದು, ಮಂಡ್ಯ ಅಖಾಡದಲ್ಲಿ ಧೂಳೆಬ್ಬಿಸುತ್ತಿದ್ದಾರೆ.

  ದರ್ಶನ್ ಬಂದ್ರು ಅಂತ ವೋಟ್ ಬರಲ್ಲ: 'ದಾಸ'ನಿಗೆ ಜಿಟಿ ದೇವೇಗೌಡ ಟಾಂಗ್

  ಹಾಗಿದ್ರೆ, ದರ್ಶನ್ ಮತ್ತು ಯಶ್ ಅವರ ಪ್ರಚಾರದ ವೇಳಾಪಟ್ಟಿ ಹೇಗಿದೆ? ಯಾವತ್ತು, ಎಲ್ಲೆಲ್ಲಿ ಪ್ರಚಾರಕ್ಕೆ ಹೋಗ್ತಾರೆ? ಇಬ್ಬರು ಒಂದೇ ಕಡೆ ಪ್ರಚಾರ ಮಾಡ್ತಾರಾ? ಜೋಡೆತ್ತುಗಳ ಕಂಪ್ಲೀಟ್ ಟೈಂ ಟೇಬಲ್ ಇಲ್ಲಿದೆ ನೋಡಿ. ಮುಂದೆ ಓದಿ.....

  11 ದಿನ ಡಿ-ಬಾಸ್ ಪ್ರಚಾರ

  11 ದಿನ ಡಿ-ಬಾಸ್ ಪ್ರಚಾರ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಒಟ್ಟು ಹನ್ನೊಂದು ದಿನಗಳ ಕಾಲ ಸುಮಲತಾ ಪರ ಪ್ರಚಾರ ಮಾಡುತ್ತಿದ್ದಾರೆ. ಏಪ್ರಿಲ್ 1 ಶ್ರೀರಂಗಪಟ್ಟಣ, ಏಪ್ರಿಲ್ 2 ಮಂಡ್ಯ, ಏಪ್ರಿಲ್ 3 ಕೆ ಆರ್ ಪೇಟೆ, ಏಪ್ರಿಲ್ 4 ನಾಗಮಂಗಲ, ಏಪ್ರಿಲ್ 10 ಕೆಆರ್ ನಗರ, ಏಪ್ರಿಲ್ 11 ಕೆಆರ್ ನಗರ ಮತ್ತು ಕೆಆರ್ ಪೇಟೆ, ಏಪ್ರಿಲ್ 12 ಮಳವಳ್ಳಿ, ಏಪ್ರಿಲ್ 13 ಶ್ರೀರಂಗಪಟ್ಟಣ, ಏಪ್ರಿಲ್ 14 ಮದ್ದೂರ್, ಏಪ್ರಿಲ್ 15 ಪಾಂಡವಪುರ ಹಾಗೂ ಏಪ್ರಿಲ್ 16 ಅಂತಿಮ ದಿನ ಜಾಥ ಹಮ್ಮಿಕೊಂಡಿದ್ದಾರೆ.

  ಪ್ರಚಾರದ ವೇಳೆ ದರ್ಶನ್ ಗೆ ಮಹಿಳಾ ಅಭಿಮಾನಿಯಿಂದ ಸರ್ಪ್ರೈಸ್

  13 ದಿನ ರಾಕಿಂಗ್ ಸ್ಟಾರ್

  13 ದಿನ ರಾಕಿಂಗ್ ಸ್ಟಾರ್

  ಏಪ್ರಿಲ್ 2 ಶ್ರೀರಂಗಪಟ್ಟಣ, ಏಪ್ರಿಲ್ 3 ಶ್ರೀರಂಗಪಟ್ಟಣ ಮತ್ತು ಪಾಂಡವಪುರ, ಏಪ್ರಿಲ್ 4 ಪಾಂಡವಪುರ, ಏಪ್ರಿಲ್ 5 ಮಳವಳ್ಳಿ, ಏಪ್ರಿಲ್ 8 ಮಳವಳ್ಳಿ, ಏಪ್ರಿಲ್ 9 ಮಂಡ್ಯ, ಏಪ್ರಿಲ್ 10 ಮಂಡ್ಯ ಮತ್ತು ಮದ್ದೂರ್, ಏಪ್ರಿಲ್ 11 ಮದ್ದೂರ್, ಏಪ್ರಿಲ್ 12 ನಾಗಮಂಗಲ, ಏಪ್ರಿಲ್ 13 ನಾಗಮಂಗಲ, ಏಪ್ರಿಲ್ 14 ಕೆಆರ್ ಪೇಟೆ, ಏಪ್ರಿಲ್ 15 ಕೆಆರ್ ಪೇಟೆ ಮತ್ತು ಮಂಡ್ಯ, ಅಂತಿಮ ದಿನ ಏಪ್ರಿಲ್ 16 ಬೃಹತ್ ಜಾಥದಲ್ಲಿ ಭಾಗಿಯಾಗಲಿದ್ದಾರೆ.

  ದರ್ಶನ್ ಪ್ರಚಾರ ಮಾಡುತ್ತಿರುವುದರ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿಖಿಲ್ ಹೇಳಿದ್ದು ಹೀಗೆ

  ಯುಗಾದಿ ಹಬ್ಬಕ್ಕೆ ವಿಶ್ರಾಂತಿ

  ಯುಗಾದಿ ಹಬ್ಬಕ್ಕೆ ವಿಶ್ರಾಂತಿ

  ಏಪ್ರಿಲ್ 6 ಮತ್ತು 7ಕ್ಕೆ ಯುಗಾದಿ ಹಬ್ಬವಿರುವ ಕಾರಣ, ದರ್ಶನ್ ಮತ್ತು ಯಶ್ ಇಬ್ಬರೂ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಈ ಎರಡು ದಿನ ಯಾವುದೇ ಪ್ರಚಾರವಿರುವುದಿಲ್ಲ. ಸುಮಲತಾ ಕೂಡ ಈ ಎರಡು ದಿನ ಪ್ರಚಾರ ಮಾಡುತ್ತಿಲ್ಲ.

  'ಡಿ ಬಾಸ್' ಒಬ್ಬರೇ ಯಾಕೆ ಸಿಎಂಗೆ ಟಾರ್ಗೆಟ್, ಅದರ ಹಿಂದಿರುವ ಕಾರಣಗಳೇ ಬೇರೆ.!

  ಅಂತಿಮ ದಿನ ಜಾಥ

  ಅಂತಿಮ ದಿನ ಜಾಥ

  ದರ್ಶನ್ ಮತ್ತು ಯಶ್ ಇಬ್ಬರು ಸುಮಲತಾ ಪರ ಸತತವಾಗಿ ಪ್ರಚಾರ ಮಾಡುತ್ತಿದ್ದು, ಏಪ್ರಿಲ್ 16 ರಂದು ಅಂತಿಮ ದಿನ ಜಾಥದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಅಲ್ಲಿಯವರೆಗೂ ಇವರಿಬ್ಬರು ಮುಖಾಮುಖಿಯಾಗಲ್ಲ.

  English summary
  Here is the election campaign time table of Kannada actor darshan and yash. both are campaigning for independent candidate sumalatha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X