ಎಂಪಿ ಆದ ಸುಮಲತಾ ಅವರನ್ನ ದರ್ಶನ್-ಯಶ್ ಏನಂತ ಕರೀತಾರೆ?

Recommended Video

ಗೆದ್ದಮೇಲೆ ವಿಭಿನ್ನವಾಗಿ ಸುಮಲತಾರನ್ನು ಕರೆದ ಜೋಡೆತ್ತುಗಳು

ಸುಮಲತಾ ಅಂಬರೀಶ್ ಕೊನೆಗೂ ಮಂಡ್ಯದಲ್ಲಿ ಗೆದ್ದು ಬೀಗಿದ್ದಾರೆ. ಭಾರಿ ಪೈಪೋಟಿಯ ಕ್ಷೇತ್ರವಾಗಿದ್ದ ಮಂಡ್ಯ ಇಡೀ ಇಂಡಿಯದಲ್ಲೆ ಸದ್ದು ಮಾಡಿತ್ತು. ಪ್ರಚಾರದ ವೇಳೆ ವಿರೋಧಿ ನಾಯಕರು ನಡೆದುಕೊಂಡ ರೀತಿ, ಹೇಳಿಕೆಗಳು ಭಾರಿ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು.

ಸುಮಲತಾ ಪರ ಇಬ್ಬರು ಸ್ಟಾರ್ ನಟರು ಅಖಾಡ ಪ್ರವೇಶಿಸುತ್ತಿದ್ದಂತೆ ಮಂಡ್ಯದ ರಾಜಕೀಯ ದಿಕ್ಕೆ ಬದಲಾಗಿ ಹೋಗಿತ್ತು. ವಿರೋಧಿಗಳಿಂದ ಹರಿದು ಬರುತ್ತಿದ್ದ ಟೀಕೆ, ಅವಮಾನಗಳ ಬಾಣವನ್ನು ಮೆಟ್ಟಿನಿಂತು ಯಾವುದಕ್ಕು ಜಗ್ಗದೆ, ತಲೆಕೆಡಿಸಿ ಕೊಳ್ಳದೆ ಧೈರ್ಯವಾಗಿಯೆ ಚುನಾವಣೆ ಎದುರಿಸಿದ ಕೀರ್ತಿ ಸುಮಲತಾ ಅವರದ್ದು.

ಸುಮಲತಾ ಅವರನ್ನು ಹೇಗಾದರು ಮಾಡಿ ಗೆಲ್ಲಿಸಲೇ ಬೇಕೆಂದು ತಿಂಗಳುಗಳ ಕಾಲ ಅವಿರತವಾಗಿ ಹೋರಾಟ ಮಾಡಿದ ಯಶ್ ಮತ್ತು ದರ್ಶನ್ ಅವರನ್ನು ಸದಾ ನೂತನ ಎಂಪಿ ಸುಮಲತಾ ಸದಾ ನೆನಪಿಸಿಕೊಳ್ಳುತ್ತಾರೆ. ಸುಮಲತಾ ಈಗ ಎಂಪಿ ಆಗಿದ್ದಾರೆ. ಎಂಪಿ ಸುಮಲತಾ ಅವರನ್ನು ದಚ್ಚು ಮತ್ತು ಯಶ್ ಇಬ್ಬರು ಪ್ರೀತಿಯಿಂದ ಏನಂತ ಕರೆಯುತ್ತಿದ್ದಾರೆ ಗೊತ್ತಾ? ಮುಂದೆ ಓದಿ..

ಎಂ ಪಿ ಮೇಡಮ್ ನಮಸ್ತೆ

ಎಂ ಪಿ ಮೇಡಮ್ ನಮಸ್ತೆ

ಸುಮಲತಾ ಮನೆ ಮಗನ ಹಾಗೆ ಇದ್ದವರು ರಾಕಿಂಗ್ ಸ್ಟಾರ್ ಯಶ್. ಸುಮಲತಾ ಪರವಾಗಿ, ಸುಮಲತಾ ನಿರ್ಧಾರಗಳ ಜೊತೆಯೆ ಇದ್ದು ಬೆಂಬಲಕ್ಕೆ ನಿಂತಿದ್ದ ಯಶ್ ಮಂಡ್ಯದಲ್ಲಿ ತಾನೆ ಚುನಾವಣೆಗೆ ನಿಂತಿದ್ದೀನಿ ಎನ್ನುವಷ್ಟು ಮಟ್ಟಕ್ಕೆ ಪ್ರಚಾರ ಮಾಡಿ ಸುಮಲತಾ ಅವರನ್ನು ಗೆಲ್ಲಿಸಿಕೊಟ್ಟಿದ್ದಾರೆ. ಈ ಖುಷಿಯಲ್ಲಿ ಈಗ ಎಂಪಿ ಆಗಿರುವ ಸುಮಲತಾ ಅವರನ್ನು ಯಶ್ ಎಂಪಿ ಮೇಡಮ್ ಎಂದು ಕೆರೆಯುತ್ತಿದ್ದಾರೆ. ಶುಭಾಶಯ ಹೇಳಲು ಮೊದಲು ಫೋನ್ ಕರೆ ಮಾಡಿದ್ದು ಯಶ್ ಅಂತೆ. ಫೋನ್ ಮಾಡಿ ಎಂ ಪಿ ಮೇಡಮ್ ನಮಸ್ತೆ ಎಂದು ಹೇಳಿದ್ದಾರಂತೆ.

ಮದರ್ ಇಂಡಿಯಾ ಎಂಪಿ

ಮದರ್ ಇಂಡಿಯಾ ಎಂಪಿ

ದರ್ಶನ್ ಸುಮಲತಾ ಅವರನ್ನು ಯಾವಾಗಲು ಮದರ್ ಇಂಡಿಯಾ ಅಂತಾನೆ ಕರೆಯುವುದು. ಮದರ್ ಇಂಡಿಯ ಗೆಲುವಿಗೆ ಹಗಲು ರಾತ್ರಿ ಶ್ರಮಿಸಿರುವ ದರ್ಶನ್ ಗೆ ಸುಮಲತಾ ಗೆಲುವು ಹೇಳಲಾರದಷ್ಟು ಸಂತಸ ತಂದಿದೆ. 'ರಾಬರ್ಟ್' ಚಿತ್ರದ ಚಿತ್ರೀಕರಣದಲ್ಲಿರುವ ದರ್ಶನ್ ಸುಮಲತಾ ಗೆಲುವು ಸಾಧಿಸುತ್ತಿದಂತೆ ಫೋನ್ ಮಾಡಿದ್ದಾರಂತೆ. ಯಾವಾಗಲು ಮದರ್ ಇಂಡಿಯಾ ಅಂತ ಕರೆಯುತ್ತಿದ್ದ ದರ್ಶನ್ ಎಂಪಿ ಆದ ನಂತರ ಮದರ್ ಇಂಡಿಯಾ ಎಂಪಿ ಎಂದು ಕರೆಯುತ್ತೇನೆ ಅಂತ ಹೇಳಿದ್ದಾರೆ.

ಶುಭಾಶಯ ಹೇಳಿದ ಚಿರಂಜೀವಿ

ಶುಭಾಶಯ ಹೇಳಿದ ಚಿರಂಜೀವಿ

ಅಂಬರೀಶ್ ದಕ್ಷಿಣ ಭಾರತೀಯ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ಅದೆ ಬಾಂಧವ್ಯವನ್ನು ಸುಮಲತಾ ಕೂಡ ಮುಂದುವರೆಸಿಕೊಂಡು ಬಂದಿದ್ದಾರೆ. ಚುನಾವಣೆ ಅಖಾಡಕ್ಕೆ ಎಂಟ್ರಿ ಕೊಟ್ಟ ಸುಮಲತಾ ಅವರಿಗೆ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಒಳ್ಳೆಯದಾಗಲೆ ಎಂದು ಹಾರೈಸಿದ್ರಂತೆ. ಈಗ ಭರ್ಜರಿ ಗೆಲುವು ಸಾಧಿಸಿರುವ ಸುಮಲತಾ ಅವರಿಗೆ ಫೋನ್ ಮಾಡಿ ಶುಭಹಾರೈಸಿದ್ದಾರಂತೆ.

ಅಭಿನಂದನೆಗಳ ಮಹಾಪೂರವೆ ಬರುತ್ತಿದೆ.

ಅಭಿನಂದನೆಗಳ ಮಹಾಪೂರವೆ ಬರುತ್ತಿದೆ.

ನೂತನ ಎಂ ಪಿ ಆಗಿ ಆಯ್ಕೆ ಆಗಿರುವ ಸುಮಲತಾ ಅವರಿಗೆ ಕೇವಲ ಕರ್ನಾಕದಿಂದ ಮಾತ್ರವಲ್ಲದೆ ದೇಶದ ಬೇರೆ ಬೇರೆ ಕಡೆಯಿಂದನು ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆಯಂತೆ. ಚೆನ್ನೈ, ಹೈದಾರಾಬಾದ್, ದೆಹಲಿ ಸೇರಿದಂತೆ ಅನೇಕ ಕಡೆಯಿಂದ ಗಣ್ಯರು ವಿಶ್ ಮಾಡುತ್ತಿದ್ದಾರಂತೆ. ಕೇವಲ ಸಿನಿಮಾ ಸ್ಟಾರ್ ಗಳು ಮಾತ್ರವಲ್ಲದೆ ರಾಜಕೀಯ ಗಣ್ಯರು ಶುಭಹಾರೈಸಿ ಅನೇಕರು 'ನಾವು ಕೂಡ ನಿಮ್ಮ ಗೆಲುವಿನ ಆಸೆಯಲ್ಲಿದ್ದೆವು' ಎಂದು ಹೇಳುತ್ತಿದ್ದಾರಂತೆ.

More from Filmibeat

English summary
Chalenging star Darshan and rocking star Yash have been called by MP as Sumalatha after won the Mandya Lok Sabha Election.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X