For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳ ಪರವಾಗಿ ಜಗ್ಗೇಶ್ ಕ್ಷಮೆ ಕೇಳಿದ ದರ್ಶನ್

  |

  ಜಗ್ಗೇಶ್ ಹಾಗೂ ದರ್ಶನ್ ಅಭಿಮಾನಿಗಳ ನಡುವಿನ ಜಗಳಕ್ಕೆ ಸುಖಾಂತ್ಯ ದೊರಕಿದಂತಿದೆ. ಟಿವಿ9 ಸಂದರ್ಶನದಲ್ಲಿ ಮಾತನಾಡಿದ ನಟ ದರ್ಶನ್, ಅಭಿಮಾನಿಗಳ ಪರವಾಗಿ ಜಗ್ಗೇಶ್ ಅವರ ಕ್ಷಮೆ ಕೇಳಿದ್ದಾರೆ.

  ನನ್ನ ಸೆಲೆಬ್ರಿಟಿಗಳಿಂದ ತಪ್ಪಾಗಿದೆ ಪ್ಲೀಸ್ ಕ್ಷಮಿಸಿ ಜಗ್ಗಣ್ಣ | Darshan Apologize to Jaggesh

  ಕೆಲವು ದಿನಗಳ ಹಿಂದಷ್ಟೆ ಜಗ್ಗೇಶ್ ಅವರು ದರ್ಶನ್ ಅಭಿಮಾನಿಗಳ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಹರಿದಾಡಿತ್ತು, ಇದಕ್ಕೆ ಸಂಬಂಧಿಸಿದಂತೆ ದರ್ಶನ್ ಅಭಿಮಾನಿಗಳು ಜಗ್ಗೇಶ್ ಅವರ ಮೇಲೆ ಮೈಸೂರಿನ ಬನ್ನೂರಿನಲ್ಲಿ ಮುತ್ತಿಗೆ ಹಾಕಿದ್ದರು. ಇದನ್ನು ಜಗ್ಗೇಶ್ ಅವರು ಖಂಡಿಸಿದ್ದರು.

  ಇದೀಗ ನಟ ದರ್ಶನ್ ಅವರು ಟಿವಿ9 ವಾಹಿನಿಗೆ ನೀಡಿದ ಸಂದರ್ಶನದಲ್ಲಿ, 'ಜಗ್ಗೇಶ್ ಅವರು ನಮ್ಮ ಹಿರಿಯರು, ಎಂದಿಗೂ ಅವರು ಮುಂದೆ, ನಾವು ಅವರ ಹಿಂದೆ. ನಮ್ಮ ಸೆಲೆಬ್ರಿಟಿಗಳಿಂದ (ಅಭಿಮಾನಿಗಳನ್ನು ದರ್ಶನ್ ಅವರು ಹೀಗೆಯೇ ಸಂಭೋದಿಸುತ್ತಾರೆ) ಆಗಿರುವ ತಪ್ಪಿಗೆ ಕ್ಷಮೆ ಕೇಳುತ್ತಿದ್ದೇನೆ' ಎಂದು ಹೇಳಿದರು.

  'ಆಡಿಯೋ ವಿಷಯ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ'

  'ಆಡಿಯೋ ವಿಷಯ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ'

  'ಆಡಿಯೋ ರಿಲೀಸ್ ಆದಾಗ ನಾನು ಊರಿನಲ್ಲಿ ಇರಲಿಲ್ಲ ತಿರುಪತಿಯಲ್ಲಿದ್ದೆ. ಮೊದಲಿಗೆ ನಿರ್ಮಾಪಕ ವಿಖ್ಯಾತ ಕರೆ ಮಾಡಿದ್ದ, ಅನೂಪ್ ಎಂಬುವರು ಕರೆ ಮಾಡಿದ್ದರು. ನಾನು ಅಂದು ತಡರಾತ್ರಿ ಮನೆಗೆ ಬಂದೆ ನನಗೆ ವಿಷಯ ಗೊತ್ತಾಗಿದ್ದು ಮಾರನೇಯ ದಿನವಷ್ಟೆ. ಅದನ್ನೂ ನಾನೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ, ಹಿರಿಯರು ಏನೋ ಮಾತನಾಡಿದ್ದಾರೆ ಬಿಡು ಎಂದು ಸುಮ್ಮನಾಗಿದ್ದೆ' ಎಂದರು ದರ್ಶನ್.

  ಮುತ್ತಿಗೆ ಹಾಕಿದ ದಿನ ನಾನು ಊರಿನಲ್ಲಿರಲಿಲ್ಲ: ದರ್ಶನ್

  ಮುತ್ತಿಗೆ ಹಾಕಿದ ದಿನ ನಾನು ಊರಿನಲ್ಲಿರಲಿಲ್ಲ: ದರ್ಶನ್

  ಜಗ್ಗೇಶ್ ಅವರಿಗೆ ಮುತ್ತಿಗೆ ಹಾಕಿದ ದಿನವೂ ಸಹ ನಾನು ಊರಿನಲ್ಲಿರಲಿಲ್ಲ. ಅಂದು ಯಾವುದೋ ಕಾಡಿನಲ್ಲಿದ್ದೆ. ಈ ಹುಡುಗರು ಯಾರಿಗೂ ಗೊತ್ತಿಲ್ಲದಂತೆ ಶೂಟಿಂಗ್ ಸ್ಪಾಟ್‌ಗೆ ಹೋಗಿ ಅಲ್ಲಿಂದ ಮುಖ್ಯವಾದ ಇಬ್ಬರು ಹುಡುಗರಿಗೆ ಕರೆ ಮಾಡಿದ್ದಾರೆ. ಅವರು ಕೂಡಲೇ ಸ್ಥಳಕ್ಕೆ ಹೋಗಿದ್ದಾರೆ. ನಾನು ಆ ನಂತರ ಅವರಿಗೆ ಕರೆ ಮಾಡಿ ಚೆನ್ನಾಗಿ ಬೈದೆ, ಏನಾದರೂ ಹೆಚ್ಚುಕಮ್ಮಿ ಆದರೆ ಸುಮ್ಮನೆ ಬಿಡುವುದಿಲ್ಲವೆಂದು ಹೇಳಿ ಎಚ್ಚರಿಕೆ ನೀಡಿದೆ' ಎಂದರು ಜಗ್ಗೇಶ್.

  ಜಗ್ಗೇಶ್ ಗೆ ಕರೆ ಮಾಡುವ ಪ್ರಯತ್ನ ಮಾಡಿದೆ: ದರ್ಶನ್

  ಜಗ್ಗೇಶ್ ಗೆ ಕರೆ ಮಾಡುವ ಪ್ರಯತ್ನ ಮಾಡಿದೆ: ದರ್ಶನ್

  ನಾನೂ ಸಹ ಜಗ್ಗೇಶ್ ಅವರಿಗೆ ಕರೆ ಮಾಡುವ ಯತ್ನ ಮಾಡಿದೆ, ಅವರು ಕನೆಕ್ಟ್ ಆಗಲಿಲ್ಲ. ಆಗಿದ್ದಿದ್ರೆ ನಾನೇ ಮಾತನಾಡಿ ಎಲ್ಲವೂ ಸೆಟಲ್ ಮಾಡಿಬಿಡ್ತಿದ್ದೆ. ಮೊದಲ ದಿನವೇ ನಾನು ಜಗ್ಗೇಶ್‌ ಅವರಿಗೆ ಕರೆ ಮಾಡಿದೆ. ''ಏನು ವಿಷಯ ಹೇಳಿ ಅಣ್ಣ, ನಾನೆ ಮಾಧ್ಯಮದವರಿಗೆ ಕ್ಲಾರಿಫಿಕೇಶನ್ ಕೊಡುತ್ತೇನೆ'' ಎಂದು ಕೇಳುವ ಉದ್ದೇಶಕ್ಕೆ ಕರೆ ಮಾಡಿದ್ದೆ ಆದರೆ ಕನೆಕ್ಟ್ ಆಗಲಿಲ್ಲ' ಎಂದರು ದರ್ಶನ್.

  ಇಂದು ಸುದ್ದಿಗೋಷ್ಠಿ ನಡೆಸಿದ ಜಗ್ಗೇಶ್

  ಇಂದು ಸುದ್ದಿಗೋಷ್ಠಿ ನಡೆಸಿದ ಜಗ್ಗೇಶ್

  ಜಗ್ಗೇಶ್ ಅವರು ಇಂದು ಸಹ ಸುದ್ದಿಗೋಷ್ಠಿ ನಡೆಸಿ, 'ದರ್ಶನ್ ನನಗೆ ಒಂದು ಕರೆ ಮಾಡಬಹುದಿತ್ತು, ನನ್ನೊಂದಿಗೆ ಒಮ್ಮೆ ಮಾತನಾಡಿದ್ದಿದ್ದರೆ ಸಮಸ್ಯೆ ಬಗೆಹರಿದಿರುತ್ತಿತ್ತು' ಎಂದು ಹೇಳಿದ್ದಾರೆ. ತಾವು ದರ್ಶನ್‌ಗೆ ಮಾಡಿದ ಸಹಾಯವನ್ನೂ ಜಗ್ಗೇಶ್ ಇಂದು ನೆನಪಿಸಿಕೊಂಡರು.

  English summary
  Darshan Apologies to Jaggesh in behalf of his fans After His Fans Attacked Him on Audio Leak case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X