ಅಪ್ಪಾಜಿ ದರ್ಶನಕ್ಕಾಗಿ ಸ್ವೀಡನ್ ನಿಂದ ಬಂದಿದ್ದು ದರ್ಶನ್ ಒಬ್ಬರೇ

Recommended Video

Ambareesh : ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದೆ ದರ್ಶನ್ | Oneindia Kannada

ಅಂಬರೀಶ್ ಅವರ ಅಂತಿಮ ದರ್ಶನಕ್ಕಾಗಿ ಸ್ವೀಡನ್ ನಿಂದ ಬರುತ್ತಿದ್ದ ನಟ ದರ್ಶನ್ ಇಂದು ಬೆಳಿಗ್ಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಅಲ್ಲಿಂದ ನೇರವಾಗಿ ಮಂಡ್ಯಕ್ಕೆ ತೆರಳಲಿದ್ದಾರೆ ಎನ್ನಲಾಗಿತ್ತು. ಆದ್ರೆ, ಮಂಡ್ಯದಿಂದ ಅಂಬಿ ಪಾರ್ಥಿವ ಶರೀರವನ್ನ ಬೆಂಗಳೂರಿಗೆ ವಾಪಸ್ ತರಲಾಗುತ್ತಿದೆ. ಹಾಗಾಗಿ, ದರ್ಶನ್ ಕಂಠೀರವ ಸ್ಟೇಡಿಯಂನಲ್ಲೇ ದರ್ಶನ ಪಡೆಯಬಹುದು.

ಅಂಬರೀಶ್ ನಿಧನ ಸುದ್ದಿ ಕೇಳಿದ ಕೂಡಲೇ ಸ್ಪೀಡನ್ ನಲ್ಲಿ ನಡೆಯುತ್ತಿದ್ದ 'ಯಜಮಾನ' ಚಿತ್ರೀಕರಣವನ್ನ ನಿಲ್ಲಿಸಿ, ತಕ್ಷಣ ಬೆಂಗಳೂರಿಗೆ ಬರುತ್ತಿರುವುದಾಗಿ ಸ್ವತಃ ನಟ ದರ್ಶನ್ ಟ್ವೀಟ್ ಮಾಡಿದ್ದರು. ಈಗಾಗಲೇ ದರ್ಶನ್ ಬೆಂಗಳೂರಿಗೆ ಆಗಮಿಸಿದ್ದು, ಅಂಬಿ ಅಪ್ಪಾಜಿಯ ಅಂತಿಮ ದರ್ಶನ ಪಡೆಯಲಿದ್ದಾರೆ.

ಅಂದ್ಹಾಗೆ, ಸ್ವೀಡನ್ ನಿಂದ ಭಾರತಕ್ಕೆ ಎರಡು ದಿನದಲ್ಲಿ ಬರುವುದು ಸಾಮನ್ಯ ವಿಷ್ಯವಲ್ಲ. ಅದರಲ್ಲೂ ಸರಿಯಾದ ಸಮಯಕ್ಕೆ ವಿಮಾನ ಸಿಕ್ಕಿ, ಅದಕ್ಕೆ ಟಿಕೆಟ್ ಬುಕ್ ಮಾಡಿ ಬರಬೇಕು. ಬಟ್, ಈ ಎಲ್ಲಾ ಸಾಹಸಗಳನ್ನ ಮೀರಿ ಡಿ-ಬಾಸ್ ಬೆಂಗಳೂರಿಗೆ ಬಂದಿದ್ದಾರೆ.. ಅಷ್ಟಕ್ಕೂ, ದರ್ಶನ್ ಸ್ವೀಡನ್ ನಿಂದ ಬೆಂಗಳೂರಿಗೆ ಬರುವ ಮಧ್ಯೆ ಎದುರಾದ ಕಷ್ಟಗಳೇನು.? ಮುಂದೆ ಓದಿ.....

7000ಕ್ಕೂ ಅಧಿಕ ಕಿ.ಮೀ ಪ್ರಯಾಣ

7000ಕ್ಕೂ ಅಧಿಕ ಕಿ.ಮೀ ಪ್ರಯಾಣ

ಭಾರತ ಮತ್ತು ಸ್ವೀಡನ್ ದೇಶಕ್ಕೆ ನೇರವಾಗಿ ವಿಮಾನವಿಲ್ಲ. ದುಬೈ ಮೂಲಕ ಭಾರತಕ್ಕೆ ಪ್ರಯಾಣ ಮಾಡಬೇಕು. ಸ್ವೀಡನ್ ನಿಂದ ಭಾರತಕ್ಕೆ ಅಂದಾಜು 7000 ಕಿಲೋ ಮೀಟರ್ ಗಳಷ್ಟು ವಿಮಾನದಲ್ಲಿ ಪ್ರಯಾಣ ಮಾಡಬೇಕಾಗಿದೆ. ಸ್ವೀಡನ್ ನಿಂದ ದುಬೈ, ದುಬೈನಿಂದ ಬೆಂಗಳೂರು ಮಾರ್ಗವಾಗಿ ದರ್ಶನ್ ಬಂದಿದ್ದಾರೆ..

ನಾಲ್ಕೈದು ದೇಶಗಳನ್ನ ದಾಟಿ ಬರಬೇಕು

ನಾಲ್ಕೈದು ದೇಶಗಳನ್ನ ದಾಟಿ ಬರಬೇಕು

ಸ್ವೀಡನ್ ನಿಂದ ಭಾರತಕ್ಕೆ ಬರುವ ಮಾರ್ಗದಲ್ಲಿ ಹಲವು ದೇಶಗಳನ್ನ ದಾಟಿ ಬರಬೇಕು. ಪ್ರಮುಖ ದೇಶಗಳನ್ನ ಗಮನಿಸುವುದಾದರೇ, ಭಾರತದಿಂದ ದುಬೈ, ಟರ್ಕಿ, ಇರಾಕ್, ರೋಮೆನಿಯಾ, ಪೋಲೆಂಡ್ ಸೇರಿದಂತೆ ಇನ್ನು ಹಲವು ದೇಶಗಳನ್ನ ದಾಟಿ ಸ್ವೀಡನ್ ಗೆ ಹೋಗಿದ್ದರು. ಈಗ ಅಲ್ಲಿಂದ ವಾಪಸ್ ಬಂದಿರುವುದು ನಿಜಕ್ಕೂ ದೊಡ್ಡ ಶ್ರಮ ತೆಗೆದುಕೊಂಡಂತೆ.

ಟಿಕೆಟ್ ಪಡೆಯುವಲ್ಲಿ ಹರಸಾಹಸ

ಟಿಕೆಟ್ ಪಡೆಯುವಲ್ಲಿ ಹರಸಾಹಸ

ಆರಂಭದಲ್ಲಿ ದರ್ಶನ್, ರಶ್ಮಿಕಾ ಮಂದಣ್ಣ, ಸೇರಿದಂತೆ ಇಡೀ ತಂಡ ಬರಲಿದ್ದಾರೆ ಎನ್ನಲಾಗಿತ್ತು. ಆದ್ರೀಗ ಅಂತಿಮವಾಗಿ ದರ್ಶನ್ ಒಬ್ಬರೇ ಬೆಂಗಳೂರಿಗೆ ಬಂದಿದ್ದಾರೆ. ಇನ್ನು ದಿಢೀರ್ ಅಂತ ಟಿಕೆಟ್ ಪಡೆಯುವಲ್ಲಿ ತುಂಬಾ ಕಷ್ಟಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಮತ್ತು ವಿಮಾನಕ್ಕಾಗಿ ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿ ಕಾದು ಕುಂತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಅಂಬಿಯ ಮಗನಂತಿದ್ದ ದರ್ಶನ್

ಅಂಬಿಯ ಮಗನಂತಿದ್ದ ದರ್ಶನ್

ನಟ ದರ್ಶನ್ ಮತ್ತು ಅಂಬರೀಶ್ ಅವರ ಸಂಬಂಧ ಒಂದು ರೀತಿ ತಂದೆ-ಮಗನಂತೆ ಇತ್ತು. ದರ್ಶನ್ ಕೂಡ ಅಂಬಿಯ ಮಾತನ್ನ ಎಲ್ಲಿಯೂ ಅಲ್ಲೆಗಳೆದಿಲ್ಲ. ಅಂಬಿ ಮಾತು ಅಂದ್ರೆ, ದಾಸ ಬಹಳ ಅಚ್ಚುಕಟ್ಟಾಗಿ ನಡೆದುಕೊಳ್ಳುತ್ತಿದ್ದರು. ಅಂಬರೀಶ್ ಅವರ ಪ್ರತಿಯೊಂದು ಬರ್ತಡೇಗೂ ಮೊದಲ ಕೇಕ್ ದರ್ಶನ್ ತರುತ್ತಿದ್ದರು. ಇಂತಹ ಸಂಬಂಧ ಹೊಂದಿದ್ದ ದರ್ಶನ್, ಅಂಬರೀಶ್ ಅವರನ್ನ ಕಳೆದುಕೊಂಡಿರುವುದು ಅವರಿಗೆ ಹೆಚ್ಚು ನೀಡಿದೆ.

More from Filmibeat

English summary
Kannada actor challenging star darshan arrived bangalore from sweden. now he going to madya for ambareesh last rites.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X