For Quick Alerts
  ALLOW NOTIFICATIONS  
  For Daily Alerts

  'ಸಪ್ಲೈಯರ್ ಮಾತ್ರವಲ್ಲ ಇನ್ನೊಬ್ಬ ವ್ಯಕ್ತಿಗೂ ಹಲ್ಲೆ, ಆತ ಕೋಮಾದಲ್ಲಿದ್ದ': ಇಂದ್ರಜಿತ್

  |

  25 ಕೋಟಿ ವಂಚನೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತವಾಗಿ ಮೂರ್ನಾಲ್ಕು ದಿನದಿಂದ ಸುದ್ದಿಯಲ್ಲಿದ್ದ ನಟ ದರ್ಶನ್ ವಿರುದ್ಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗುರುವಾರ ಬೆಳಗ್ಗೆ ಗಂಭೀರ ಆರೋಪ ಮಾಡಿದರು. ಮೈಸೂರು ಸಂದೇಶ್ ಹೋಟೆಲ್‌ನಲ್ಲಿ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದು, ಆತನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದು ದೂರಿದರು. ಈ ಸಂಬಂಧ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕ್ರಮ ಜರುಗಿಸುವಂತೆ ಮನವಿ ಮಾಡಿದರು.

  ಇದಾದ ಕೆಲವು ಗಂಟೆಗಳ ಬಳಿಕ ತಮ್ಮ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಇಂದ್ರಜಿತ ಲಂಕೇಶ್ ಮತ್ತೊಂದು ಹಲ್ಲೆ ಘಟನೆ ಬಿಚ್ಚಿಟ್ಟರು. ಹೋಟೆಲ್ ಸಪ್ಲೈಯರ್ ಮಾತ್ರವಲ್ಲ ಗೋಪಾಲ್ ರಾಜ್ ಎಂಬ ಸ್ನೇಹಿತನನ್ನು ಥಳಿಸಿದ್ದು, ಆತ ಕೋಮಾಗೆ ಹೋಗಿದ್ದ ಎಂದು ಬಾಂಬ್ ಸಿಡಿಸಿದರು. ಮುಂದೆ ಓದಿ....

  ಇಂದ್ರಜಿತ್ ಕೊಟ್ಟ ದೂರಿನಲ್ಲಿ ದರ್ಶನ್ ಹೆಸರೇ ಇಲ್ಲ: ಮನವಿ ಪತ್ರದಲ್ಲಿ ಏನಿದೆ?ಇಂದ್ರಜಿತ್ ಕೊಟ್ಟ ದೂರಿನಲ್ಲಿ ದರ್ಶನ್ ಹೆಸರೇ ಇಲ್ಲ: ಮನವಿ ಪತ್ರದಲ್ಲಿ ಏನಿದೆ?

  ಗೋಪಾಲ್ ರಾಜ್ ಮೇಲೆ ಡಿ ಬಾಸ್ ಹಲ್ಲೆ?

  ಗೋಪಾಲ್ ರಾಜ್ ಮೇಲೆ ಡಿ ಬಾಸ್ ಹಲ್ಲೆ?

  ಜುಲೈ 3 ರಂದು ಮೈಸೂರಿನಲ್ಲಿ ತಮ್ಮದೇ ಬಳಗದಲ್ಲಿದ್ದ ಗೋಪಾಲ್ ರಾಜ್ ಎಂಬ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದರು. ಅದರ ಪರಿಣಾಮ ಅವರು ಕೋಮಾಗೆ ಹೋಗಿದ್ದರು ಎಂದು ಇಂದ್ರಜಿತ್ ಲಂಕೇಶ್ ಪ್ರೆಸ್‌ಮೀಟ್‌ನಲ್ಲಿ ಆರೋಪಿಸಿದರು.

  ಹಲ್ಲೆ ನಿರಾಕರಿಸಿದರ ಗೋಪಾಲ್

  ಹಲ್ಲೆ ನಿರಾಕರಿಸಿದರ ಗೋಪಾಲ್

  ಗೋಪಾಲ್ ರಾಜ್ ಕೋಮಾದಲ್ಲಿದ್ದರು ಎಂದು ಇಂದ್ರಜಿತ್ ಲಂಕೇಶ್ ಆರೋಪಿಸಿದ ಕೆಲವೇ ಗಂಟೆಗಳಲ್ಲಿ ಆ ವ್ಯಕ್ತಿ ಟಿವಿ 9 ಸುದ್ದಿ ಮಾಧ್ಯಮದ ಎದುರು ಪ್ರತ್ಯಕ್ಷವಾದರು. ''ಇಂದ್ರಜಿತ್ ಹೇಳುವಂತೆ ಯಾವ ಘಟನೆಯೂ ನಡೆದಿಲ್ಲ, ನಾನು ಕೋಮಾಗೂ ಹೋಗಲಿಲ್ಲ. ಅದೆಲ್ಲ ಸುಳ್ಳು. ನಾವಿಬ್ಬರು ಚೆನ್ನಾಗಿಯೇ ಇದ್ದೇವೆ'' ಎಂದು ಸ್ಪಷ್ಟನೆ ಕೊಟ್ಟರು.

  ಅರುಣಾಕುಮಾರಿ ಪ್ರಕರಣ: ದರ್ಶನ್ ಮತ್ತು ಸ್ನೇಹಿತರ ವಿರುದ್ಧ ಸಿಡಿದೆದ್ದ ಇಂದ್ರಜಿತ್ಅರುಣಾಕುಮಾರಿ ಪ್ರಕರಣ: ದರ್ಶನ್ ಮತ್ತು ಸ್ನೇಹಿತರ ವಿರುದ್ಧ ಸಿಡಿದೆದ್ದ ಇಂದ್ರಜಿತ್

  ತೋಟದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ

  ತೋಟದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ

  ಮೈಸೂರಿನಲ್ಲಿರುವ ತಮ್ಮದೇ ತೋಟದಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿಯೂ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದರು ಎಂದು ಇಂದ್ರಜಿತ್ ಪ್ರೆಸ್‌ಮೀಟ್‌ ನಲ್ಲಿ ದೂರಿದ್ದಾರೆ. ನಂತರ ಆ ವ್ಯಕ್ತಿಯನ್ನು ಕೆಲಸದಿಂದ ತೆಗೆದು ಹಾಕಿದರು ಎಂದು ಹೇಳಿದ್ದಾರೆ.

  ದೊಡ್ಡವರ ಮಾತು ಕಥೆ, ಸತ್ಯ ಯಾವ್ದು..? ಸುಳ್ಳು ಯಾವ್ದು..? | Indrajit Lankesh vs Darshan | Filmibeat Kannada
  ಸಂದೇಶ್ ಹೋಟೆಲ್ ಸಪ್ಲೈಯರ್ ಪಂಜಾಬಿ ಅಲ್ಲ

  ಸಂದೇಶ್ ಹೋಟೆಲ್ ಸಪ್ಲೈಯರ್ ಪಂಜಾಬಿ ಅಲ್ಲ

  ದರ್ಶನ್ ಗಲಾಟೆ ಮಾಡಿದ ಸಂದರ್ಭದಲ್ಲಿದ್ದ ವೇಟರ್ ಕನ್ನಡದವನ್ನಲ್ಲ, ಆತನ ಪಂಜಾಬಿ ಮೂಲದವನು ಎಂದು ಮಾಲೀಕ ಸಂದೇಶ್ ತಿಳಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಇಂದ್ರಜಿತ್ ಲಂಕೇಶ್ ''ಆತ ಪಂಜಾಬಿಯಲ್ಲ, ಗಂಗಾಧರ್ ಎನ್ನುವ ಕನ್ನಡದವನೇ, ಆತನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ'' ಎಂದು ತಿರುಗೇಟು ಕೊಟ್ಟು ತನಿಖೆ ಮಾಡಲಿ ಸತ್ಯ ಹೊರಬರುತ್ತದೆ ಎಂದಿದ್ದಾರೆ.

  English summary
  Challenging star Darshan Assualt on his freind Gopal Raj alleges Indrajith Lankesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X