For Quick Alerts
  ALLOW NOTIFICATIONS  
  For Daily Alerts

  ಡಿ ಬಾಸ್ ಬರ್ತಡೇ 'ರಾಬರ್ಟ್' ನಾಯಕಿಗೂ ವಿಶೇಷವಾಗಿತ್ತು ಏಕೆ?

  |
  ದರ್ಶನ್ ಹುಟ್ಟುಹಬ್ಬದ ದಿನ ಆಶಾ ಭಟ್ ಫುಲ್ ಹ್ಯಾಪಿ.

  ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ರಾಜ್ಯದ ಮೂಲೆ ಮೂಲೆಯಿಂದಲೂ ಅಭಿಮಾನಿಗಳು ಬಂದ ಡಿ ಬಾಸ್ ಗೆ ವಿಶ್ ಮಾಡಿದರು.

  ಪ್ರತಿವರ್ಷದಂತೆ ಕೇಕ್ ಕಟ್ಟಿಂಗ್, ಹಾರ, ಪಟಾಕಿ, ಆಡಂಬರದ ಹುಟ್ಟುಹಬ್ಬ ಈ ವರ್ಷ ಕಾಣಿಸಿಲಿಲ್ಲ. ಅದರ ಬದಲಾಗಿ, ದವಸ ಧಾನ್ಯಗಳ ಉಡುಗೊರೆ ದಾಸನ ಮನೆ ತುಂಬಿತ್ತು. ಅಭಿಮಾನಿಗಳು ತಂದು ಕೊಟ್ಟ ದವಸ ಧಾನ್ಯವನ್ನು ಅನಾಥಾಶ್ರಮಗಳಿಗೆ ಹಂಚಲಾಯಿತು.

  ಹೀಗೆ, ದರ್ಶನ್ ಮತ್ತು ದರ್ಶನ್ ಅಭಿಮಾನಿಗಳ ಪಾಲಿಗೆ ವಿಶೇಷವಾಗಿದ್ದ ಈ ಹುಟ್ಟುಹಬ್ಬ ರಾಬರ್ಟ್ ಚಿತ್ರದ ನಾಯಕಿ ಆಶಾ ಭಟ್ ಗೂ ವಿಶೇಷವಾಗಿತ್ತು. ಯಾವ ಕಾರಣಕ್ಕೆ? ಮುಂದೆ ಓದಿ....

  ದರ್ಶನ್ ಗೆ ವಿಶ್ ಮಾಡಿದ ಆಶಾ ಭಟ್

  ದರ್ಶನ್ ಗೆ ವಿಶ್ ಮಾಡಿದ ಆಶಾ ಭಟ್

  ''ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಬಾಸ್. ರಾಬರ್ಟ್ ಚಿತ್ರದಲ್ಲಿ ನಟಿಸಿದ್ದು ಒಂದು ಅದ್ಭುತ ಜರ್ನಿ. ನಿಮ್ಮ ಜೊತೆ ನಟಿಸಿದ್ದು ಖುಷಿ ನೀಡಿದೆ. ಅತ್ಯದ್ಭುತವಾದ ಸಹನಟ, ಸಲಹೆಗಾರ ಅದು ದರ್ಶನ್ ಒಬ್ಬರೇ.'' ಎಂದು ಶುಭಕೋರಿದ್ದಾರೆ.

  ಡಿ ಬಾಸ್ ಹುಟ್ಟುಹಬ್ಬಕ್ಕೆ ಸ್ಟಾರ್ ಗಳ ಶುಭಾಶಯ: ಯಾರ್ಯಾರ ವಿಶ್ ಹೇಗಿದೆ?ಡಿ ಬಾಸ್ ಹುಟ್ಟುಹಬ್ಬಕ್ಕೆ ಸ್ಟಾರ್ ಗಳ ಶುಭಾಶಯ: ಯಾರ್ಯಾರ ವಿಶ್ ಹೇಗಿದೆ?

  ಗ್ರೀನ್ ಸಿಗ್ನಲ್ ಸಿಕ್ಕಿದ್ದು ಖುಷಿ

  ಗ್ರೀನ್ ಸಿಗ್ನಲ್ ಸಿಕ್ಕಿದ್ದು ಖುಷಿ

  ರಾಬರ್ಟ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದ ಕ್ಷಣದಿಂದ ಆಶಾ ಭಟ್ ಮತ್ತು ದರ್ಶನ್ ಒಟ್ಟಿಗೆ ಕಾಣಿಸಿಕೊಂಡಿದ್ದು ಯಾವುದೇ ಫೋಟೋ ಹಂಚಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ಡಿ ಬಾಸ್ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ ಆಶಾ ಭಟ್. ಅದಕ್ಕಾಗಿ ಅನುಮತಿ ಸಿಕ್ಕಿದೆ ಎಂದು ವಿಶೇಷವಾಗಿ ಪೋಸ್ಟ್ ಮಾಡಿದ್ದಾರೆ.

  'ರಾಬರ್ಟ್' ನಾಯಕಿಯ ಟ್ವಿಟ್ಟರ್-ಇನ್ಸ್ಟಾಗ್ರಾಮ್ ಹ್ಯಾಕ್ ಮಾಡಿದ ಟರ್ಕಿ ತಂಡ'ರಾಬರ್ಟ್' ನಾಯಕಿಯ ಟ್ವಿಟ್ಟರ್-ಇನ್ಸ್ಟಾಗ್ರಾಮ್ ಹ್ಯಾಕ್ ಮಾಡಿದ ಟರ್ಕಿ ತಂಡ

  ಬಾಸ್ ಜೊತೆ ಫೋಟೋ ಹಂಚಿದ್ದು ಸಂತಸ

  ಬಾಸ್ ಜೊತೆ ಫೋಟೋ ಹಂಚಿದ್ದು ಸಂತಸ

  ದರ್ಶನ್ ಜೊತೆ ಸೆಟ್ ನಲ್ಲಿ ಇದ್ದಿದ್ದು ಆಗಲಿ ಅಥವಾ ಪೋಸ್ಟರ್ ಆಗಲಿ, ಅವರ ಜೊತೆ ಪೋಸ್ ಕೊಟ್ಟಿ ಯಾವ ಫೋಟೋವನ್ನು ಇದುವರೆಗೂ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರಲಿಲ್ಲ. ಡಿ ಬಾಸ್ ಬರ್ತಡೇ ಪ್ರಯುಕ್ತ ಫೋಟೋ ಶೇರ್ ಮಾಡಿದ್ದಕ್ಕೆ ಆಶಾ ಭಟ್ ವೈಯಕ್ತಿಕವಾಗಿ ಖುಷಿಯಾಗಿದ್ದಾರೆ.

  Interview: ಮಾತೃ ಭಾಷೆಯಲ್ಲಿ ದರ್ಶನ್ ಜೊತೆ ನಟಿಸುವುದು ಬಂಪರ್ ಖುಷಿInterview: ಮಾತೃ ಭಾಷೆಯಲ್ಲಿ ದರ್ಶನ್ ಜೊತೆ ನಟಿಸುವುದು ಬಂಪರ್ ಖುಷಿ

  ಚೊಚ್ಚಲ ಸಿನಿಮಾ

  ಚೊಚ್ಚಲ ಸಿನಿಮಾ

  ಮೂಲತಃ ಕರ್ನಾಟಕದವರೇ ಆಗಿರುವ ಆಶಾ ಭಟ್ ಗೆ ಇದು ಮೊದಲ ಕನ್ನಡ ಸಿನಿಮಾ. ಚೊಚ್ಚಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಿರುವ ಆಶಾ ಭಟ್, ದರ್ಶನ್ ಜೊತೆ ತೆರೆಹಂಚಿಕೊಂಡಿರುವುದು ವಿಶೇಷ. ತರುಣ್ ಸುಧೀರ್ ಈ ಚಿತ್ರ ನಿರ್ದೇಶನ ಮಾಡಿದ್ದು, ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದಾರೆ.

  English summary
  Robert movie heroine Asha bhat has wish to Challenging star darshan. she is very happy for sharing beautiful pic of dboss.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X