For Quick Alerts
  ALLOW NOTIFICATIONS  
  For Daily Alerts

  ಆತ್ಮೀಯ ಗೆಳೆಯನಿಗೆ, ನಟ ದರ್ಶನ್ ಹುಟ್ಟುಹಬ್ಬದ ಶುಭಾಶಯ ಕೋರಿದ್ದು ಹೀಗೆ

  |

  ಖ್ಯಾತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರ 45ನೇ ವರ್ಷದ ಹುಟ್ಟುಹಬ್ಬ ಇಂದು. ಹರಿಕೃಷ್ಣ ಅವರ ಹುಟ್ಟುಹಬ್ಬಕ್ಕೆ ಹಲವು ಚಿತ್ರೋದ್ಯಮದ ಗೆಳೆಯರು ಶುಭಾಶಯ ಕೋರಿದ್ದಾರೆ.

  ಹಲವು ವರ್ಷಗಳಿಂದ ಕನ್ನಡ ಸಿನಿಮಾ ಉದ್ಯಮದಲ್ಲಿರುವ ಹರಿಕೃಷ್ಣ ಅವರಿಗೆ ಹಲವಾರು ಮಂದಿ ಚಿತ್ರೋದ್ಯಮದ ಗೆಳೆಯರಿದ್ದಾರೆ. ಆದರೆ ಹರಿಕೃಷ್ಣ ಸಿನಿಮಾ ಉದ್ಯಮದಲ್ಲಿ ಹೊಂದಿರುವ ಪ್ರಮುಖ ಗೆಳೆಯ ನಟ ದರ್ಶನ್.

  ಕುರುಕ್ಷೇತ್ರ ಸಿನಿಮಾ ನಿರ್ಮಿಸುತ್ತೇನೆಂದಾಗ ಮುನಿರತ್ನರನ್ನು ಬೈದಿದ್ದರು ದರ್ಶನ್

  ಹೌದು, ನಟ ದರ್ಶನ್ ಅವರನ್ನು ಹರಿಕೃಷ್ಣ, ತಮ್ಮ ಗಾಡ್ ಫಾದರ್ ಎಂದೇ ನಂಬುತ್ತಾರೆ, ದರ್ಶನ್ ಬಗ್ಗೆ ಹಲವಾರು ಬಾರಿ ಹರಿಕೃಷ್ಣ ಮಾತನಾಡಿದ್ದಾರೆ. ಹರಿಕೃಷ್ಣ ಅವರಿಗೆ ವಿಶೇಷ ದಿನವಾದ ಇಂದು ನಟ ದರ್ಶನ್, ಹರಿಕೃಷ್ಣ ಅವರಿಗೆ ಟ್ವಿಟ್ಟರ್ ಮೂಲಕ ಶುಭಾಶಯ ಕೋರಿದ್ದಾರೆ.

  ಶುಭಾಶಯ ಕೋರಿರುವ ನಟ ದರ್ಶನ್

  ಶುಭಾಶಯ ಕೋರಿರುವ ನಟ ದರ್ಶನ್

  'ತನ್ನ ವೈವಿಧ್ಯಮಯ ಟ್ಯೂನುಗಳಿಂದ ಸಿನಿರಸಿಕರ ಮನಗೆದ್ದಿರುವ ಮ್ಯೂಸಿಕ್ ಮಾಂತ್ರಿಕ ಹರಿಕೃಷ್ಣಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ಇನ್ನು ಹೆಚ್ಚು ಕಲಾಸೇವೆ ಹರಿ ಇಂದ ಆಗಲಿ ಎಂದು ಆಶಿಸುತ್ತೇನೆ' ಎಂದಿದ್ದಾರೆ ನಟ ದರ್ಶನ್.

  ಹರಿಕೃಷ್ಣ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ

  ಹರಿಕೃಷ್ಣ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ

  ಹರಿಕೃಷ್ಣ ಅವರೊಟ್ಟಿಗೆ ಆತ್ಮೀಯ ಕ್ಷಣಗಳ ಚಿತ್ರಗಳನ್ನು ಸಹ ನಟ ದರ್ಶನ್, ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದರ್ಶನ್ ಅವರ ಶುಭಾಶಯದ ಟ್ವೀಟ್‌ಗೆ ಸಾವಿರಾರು ಲೈಕ್‌ಗಳು ಬಂದಿವೆ.

  ದರ್ಶನ್ ಗೆ ಅಂಕಲ್ ಎಂದು ಹೆಸರಿಟ್ಟಿದ್ದು ನಟಿ ಅಮೂಲ್ಯ!

  ಮೊದಲು ಅವಕಾಶ ಕೊಟ್ಟಿದ್ದು ದರ್ಶನ್

  ಮೊದಲು ಅವಕಾಶ ಕೊಟ್ಟಿದ್ದು ದರ್ಶನ್

  ಹಂಸಲೇಖ, ಗುರುಕಿರಣ್, ರವಿಚಂದ್ರನ್ ಅವರ ಬಳಿ ಅಸಿಸ್ಟೆಂಟ್ ಆಗಿ ದುಡಿದಿದ್ದ ಹರಿಕೃಷ್ಣ ಅವರಿಗೆ ಮೊದಲ ಅವಕಾಶ ನೀಡಿದ್ದು ದರ್ಶನ್. ತಮ್ಮ ನಿರ್ಮಾಣದ, ನಟ ಪ್ರೇಮ್ ನಟಿಸಿದ್ದ, ದಿನಕರ್ ತೂಗುದೀಪ್ ನಿರ್ದೇಶಿಸಿದ್ದ 'ಜೊತೆ ಜೊತೆಯಲಿ' ಸಿನಿಮಾದಲ್ಲಿ ಸಂಗೀತ ನಿರ್ದೇಶನ ಮಾಡಲು ಅವಕಾಶ ಕೊಟ್ಟಿದ್ದರು ದರ್ಶನ್.

  ಆತ್ಮೀಯ ಗೆಳೆಯನಿಗೆ ವಿಶ್ ಮಾಡಿದ D Boss | Filmibeat Kannada
  ಆಡಿಯೋ ಸಂಸ್ಥೆಗೆ ಡಿ-ಬೀಟ್ಸ್ ಎಂದು ಹೆಸರಿಟ್ಟಿದ್ದಾರೆ

  ಆಡಿಯೋ ಸಂಸ್ಥೆಗೆ ಡಿ-ಬೀಟ್ಸ್ ಎಂದು ಹೆಸರಿಟ್ಟಿದ್ದಾರೆ

  ಹರಿಕೃಷ್ಣ ಅವರ ಸಂಗೀತ ಸಂಸ್ಥೆಯೊಂದನ್ನು ಪ್ರಾರಂಭಿಸಿದ್ದು, ದರ್ಶನ್ ಸಹಾಯವನ್ನು ಸ್ಮರಿಸಿ, ಆಡಿಯೋ ಸಂಸ್ಥೆಗೆ ಡಿ-ಬೀಟ್ಸ್ ಎಂದು ಹೆಸರಿಟ್ಟಿದ್ದಾರೆ ಹರಿಕೃಷ್ಣ. 100 ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿರುವ ಹರಿಕೃಷ್ಣ ಸಿನಿಮಾ ನಿರ್ಮಾಣವನ್ನೂ ಮಾಡಿದ್ದಾರೆ.

  ದರ್ಶನ್ ಮಗನ ಹುಟ್ಟುಹಬ್ಬ, ಅಮ್ಮ ವಿಜಯಲಕ್ಷ್ಮಿ ವಿಶ್ ಮಾಡಿದ್ದು ಹೀಗೆ

  English summary
  Music director V Harikrishna celebrating his 45th birthday. Actor Darshan wished him through twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X