»   » ಚಿತ್ರಗಳಲ್ಲಿ ದರ್ಶನ್ 'ಬುಲ್ ಬುಲ್' 50ರ ಸಂಭ್ರಮ

ಚಿತ್ರಗಳಲ್ಲಿ ದರ್ಶನ್ 'ಬುಲ್ ಬುಲ್' 50ರ ಸಂಭ್ರಮ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬುಲ್ ಬುಲ್ ಚಿತ್ರ ಯಶಸ್ವಿ ಐವತ್ತು ದಿನಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ 50ನೇ ದಿನದ ಸಂಭ್ರಮಾಚಾರಣೆಯನ್ನು ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಜುಲೈ 12ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ದರ್ಶನ್ ಅವರಿಗೆ ಹಾರ್ಲೆ ಡೆವಿಡ್ ಸನ್ ಬೈಕನ್ನು ಉಡುಗೊರೆಯಾಗಿ ನೀಡಲಾಯಿತು.

'ಬುಲ್ ಬುಲ್' ಚಿತ್ರ ರಾಜ್ಯದಾದ್ಯಂತ 99 ಚಿತ್ರಮಂದಿರಗಳಲ್ಲಿ ಅರ್ಧ ಸೆಂಚುರಿ ಪೂರೈಸಿದೆ. ಈ ಮೂಲಕ ಬುಲ್ ಬುಲ್ ಹೊಸ ದಾಖಲೆ ಬರೆದಿದೆ. ದರ್ಶನ್ ಅಭಿನಯದ ಸಾರಥಿ ಚಿತ್ರವು 94 ಚಿತ್ರಮಂದಿರಗಳಲ್ಲಿ ಅರ್ಧ ಸೆಂಚುರಿ ಪೂರೈಸಿತ್ತು.

ಚಿತ್ರದ ಗಳಿಕೆ ಹೀಗೆ ಮುಂದುವರಿದರೆ ಜುಲೈ ವೇಳೆಗೆ ಬುಲ್ ಬುಲ್ ಚಿತ್ರ ಸಾರಥಿ ದಾಖಲೆಯನ್ನು ಮುರಿಯಲಿದೆ ಎನ್ನುತ್ತವೆ ಮೂಲಗಳು. ಚಿತ್ರದ ಪಾತ್ರವರ್ಗದಲ್ಲಿದ್ದ ರೆಬೆಲ್ ಸ್ಟಾರ್ ಅಂಬರೀಶ್, ಅಶೋಕ್, ರಮೇಶ್ ಭಟ್, ಟೆನ್ನಿಸ್ ಕೃಷ್ಣ, ಸಾಧು ಕೋಕಿಲ, ವಿ ಹರಿಕೃಷ್ಣ, ಕವಿರಾಜ್ ಹಾಗೂ ಚಿತ್ರದ ನಿರ್ದೇಶಕ ಎಂ.ಡಿ.ಶ್ರೀಧರ್ ಅವರನ್ನು ಸನ್ಮಾನಿಸಲಾಯಿತು.

ಈ ವರ್ಷ ಅತಿಹೆಚ್ಚು ಗಳಿಸಿದ ಚಿತ್ರ ಬುಲ್ ಬುಲ್

ಇದು ತೆಲುಗಿನ ಆವರೇಜ್ ಹಿಟ್ ಸಿನಿಮಾ 'ಡಾರ್ಲಿಂಗ್' ರೀಮೇಕ್. ಕೌಟುಂಬಿಕ ಕಥಾವಸ್ತುವನ್ನು ಒಳಗೊಂಡಿರುವ ಈ ಚಿತ್ರಕ್ಕೆ ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವರ್ಷ ಅತಿಹೆಚ್ಚು ಹಣ ಗಳಿಸಿದ ಚಿತ್ರ ಎಂಬ ಖ್ಯಾತಿಗೂ ಪಾತ್ರವಾಗಿದೆ.

ಮೂರೇ ದಿನಗಳಲ್ಲಿ ರು.5 ಕೋಟಿ ಕಲೆಕ್ಷನ್

ಮೇ.10ರಂದು ಬಿಡುಗಡೆಯಾದ ಬುಲ್ ಬುಲ್ ಚಿತ್ರ ಮೂರೇ ದಿನಗಳಲ್ಲಿ ರು.5 ಕೋಟಿ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು.

ಎಲ್ಲಾ ಕೇಂದ್ರಗಳಲ್ಲೂ ಹೌಸ್ ಫುಲ್

ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಂಡಿರುವುದು ಬುಲ್ ಬುಲ್ ಚಿತ್ರದ ಇನ್ನೊಂದು ವಿಶೇಷ.

ಗಲ್ಲಾಪೆಟ್ಟಿಗೆ ಘಲ್ ಘಲ್ ಎನ್ನಿಸಿದ ಚಿತ್ರ

ಓಪನಿಂಗ್ ವೀಕ್ ಎಂಡ್ ನಲ್ಲಿ 'ಬುಲ್ ಬುಲ್' ಗಲ್ಲಾಪೆಟ್ಟಿಗೆ ಘಲ್ ಘಲ್ ಎನ್ನಿಸಿತ್ತು.

ದರ್ಶನ್ ಗೆ ಹಾರ್ಲೆ ಡೇವಿಡ್ ಸನ್ ಗಿಫ್ಟ್

ಸುಮಾರು ರು.20 ಲಕ್ಷ ಬೆಲೆ ಬಾಳುವ ಹಾರ್ಲೆ ಡೇವಿಡ್ಸನ್ ಬೈಕನ್ನು ಗಿಫ್ಟ್ ಕೊಡಲಿದ್ದಾರೆ ನಿರ್ಮಾಪಕರು.

ಹಲವರು ಸೇರಿ ನಿರ್ಮಿಸಿದ ಚಿತ್ರ ಬುಲ್ ಬುಲ್

'ಬುಲ್ ಬುಲ್' ಚಿತ್ರವನ್ನು ವಿ.ಹರಿಕೃಷ್ಣ, ಎಂಡಿ ಶ್ರೀಧರ್, ಕೃಷ್ಣಕುಮಾರ್, ಕವಿರಾಜ್ ಹಾಗೂ ದಿನಕರ್ ತೂಗುದೀಪ ಅವರು ಸೇರಿ ನಿರ್ಮಿಸಿದ್ದರು.

ಎಂಡಿ ಶ್ರೀಧರ್ ಆಕ್ಷನ್ ಕಟ್ ನಲ್ಲಿ ಬಂದ ಚಿತ್ರ

ಫ್ರೆಂಡ್ಸ್, ಪೊರ್ಕಿ, ಚೆಲ್ಲಾಟ, ಕೃಷ್ಣ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಎಂ.ಡಿ. ಶ್ರೀಧರ್ ಆಕ್ಷನ್ ಕಟ್ ನಲ್ಲಿ ಚಿತ್ರ ಮೂಡಿಬಂದಿದೆ.

ರು.8ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ಚಿತ್ರ

ಬೆಂಗಳೂರು, ಗೋವಾ ಹಾಗೂ ಮೈಸೂರಿನಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಸರಿಸುಮಾರು ರು.8 ಕೋಟಿ ಬಜೆಟ್ ನಲ್ಲಿ ಬುಲ್ ಬುಲ್ ಚಿತ್ರವನ್ನು ನಿರ್ಮಿಸಲಾಗಿದೆ.

ಚಿತ್ರದ ಸ್ಯಾಟಲೈಟ್ ರೈಟ್ಸ್ ಗೆ ರು.4.15 ಕೋಟಿ

ಈಗಾಗಲೆ ಚಿತ್ರದ ಸ್ಯಾಟಲೈಟ್ ರೈಟ್ಸ್ ರು.4.15 ಕೋಟಿಗೆ ಮಾರಾಟವಾಗಿವೆ.

ಹೈಯೆಸ್ಟ್ ಕಲೆಕ್ಷನ್ ಮಾಡ್ತಿರೋ ಸಿನಿಮಾ

ಕಳೆದ ಆರು ತಿಂಗಳಲ್ಲಿ ಒಟ್ಟು 6 ಸಿನಿಮಾಗಳು ಬಿಡುಗಡೆಯಾಗಿವೆ. ಅದ್ರಲ್ಲಿ ಬುಲ್ ಬುಲ್ ಹೈಯೆಸ್ಟ್ ಕಲೆಕ್ಷನ್ ಮಾಡ್ತಿರೋ ಸಿನಿಮಾ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

English summary
Challenging Star Darshan's Bulbul, which was released on May 10, completed its fifty-day run recently. To celebrate the occasion, the makers of the movie had organised a special event at the main theatre, Prasanna. ಚಿತ್ರಗಳಲ್ಲಿ ದರ್ಶನ್ 'ಬುಲ್ ಬುಲ್' 50ರ ಸಂಭ್ರಮ
Please Wait while comments are loading...