twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಕಾರು ಅಪಘಾತ ಪ್ರಕರಣ: 'ದಾಸ'ನ ಬೆನ್ನಿಗೆ ನಿಂತಿದ್ಯಾ ಖಾಕಿ ಪಡೆ.?

    By ಯಶಸ್ವಿನಿ.ಎಂ.ಕೆ
    |

    ಮೈಸೂರು, ಸೆಪ್ಟೆಂಬರ್ 25 : ನಿನ್ನೆ ಬೆಳಗಿನ ಜಾವ ಮೈಸೂರಿನ ಹಿನಕಲ್ ಬಳಿ ನಡೆದ ನಟ ದರ್ಶನ್ ಕಾರು ಅಪಘಾತ ಪ್ರಕರಣ ಇಂದು ಕೂಡ ಹೊಸ ತಿರುವು ಪಡೆದಿದೆ.

    Rash ಡ್ರೈವಿಂಗ್ ನಿಂದಾಗಿಯೇ ಅಪಘಾತ ಸಂಭವಿಸಿದೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಕಾರು ಚಲಾಯಿಸಿದ್ದ ರಾಯ್ ಆಂಟೋನಿ ನಿರ್ಲಕ್ಷ್ಯವೇ ಆಕ್ಸಿಡೆಂಟ್ ಆಗಲು ಕಾರಣ ಎಂದು ಎಫ್.ಐ.ಆರ್ ನಲ್ಲಿ ಬಿಂಬಿಸಲಾಗಿದೆ.

    ವಿಚಿತ್ರ ಅಂದ್ರೆ, ಆಕ್ಸಿಡೆಂಟ್ ಬಗ್ಗೆ ದರ್ಶನ್ ರವರ ಡ್ರೈವರ್ ಲಕ್ಷ್ಮಣ್ ದೂರು ನೀಡಿದ್ದಾರೆ ಹೊರತು ಗಾಯಳುಗಳಾದ ದರ್ಶನ್, ಪ್ರಜ್ವಲ್ ದೇವರಾಜ್ ಹಾಗೂ ದೇವರಾಜ್ ದೂರು ದಾಖಲಿಸಿಲ್ಲ. ಮಾತನಾಡುವ ಸ್ಥಿತಿಯಲ್ಲಿ ದರ್ಶನ್ ಇದ್ದರೂ, ಅವರ ಹೇಳಿಕೆಯನ್ನ ಪೊಲೀಸರು ಯಾಕೆ ಪಡೆದಿಲ್ಲ ಎಂಬ ಗುಮಾನಿ ಇದೀಗ ಶುರುವಾಗಿದೆ. ಮುಂದೆ ಓದಿರಿ...

    ದರ್ಶನ್ ರಿಂದ ಯಾಕೆ ಹೇಳಿಕೆ ಪಡೆದಿಲ್ಲ.?

    ದರ್ಶನ್ ರಿಂದ ಯಾಕೆ ಹೇಳಿಕೆ ಪಡೆದಿಲ್ಲ.?

    ಸದ್ಯ ಮಾತನಾಡುವ ಸ್ಥಿತಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದ್ದಾರೆ. ಆಸ್ಪತ್ರೆಯಿಂದಲೇ ದರ್ಶನ್ ತಮ್ಮ ಅಭಿಮಾನಿಗಳಿಗಾಗಿ ವಾಯ್ಸ್ ನೋಟ್ ಕಳುಹಿಸಿದ್ದಾರೆ. ಆದ್ರೆ, ಪೊಲೀಸರು ಮಾತ್ರ ಅಪಘಾತದ ಬಗ್ಗೆ ದರ್ಶನ್ ರಿಂದ ಮೌಖಿಕ ಹೇಳಿಕೆಯನ್ನು ಪಡೆದುಕೊಂಡಿಲ್ಲ.

    'ದಾಸ' ದರ್ಶನ್ ಅಪಘಾತದ ಸುತ್ತ ಹಲವು ಅನುಮಾನಗಳ ಹುತ್ತ.!'ದಾಸ' ದರ್ಶನ್ ಅಪಘಾತದ ಸುತ್ತ ಹಲವು ಅನುಮಾನಗಳ ಹುತ್ತ.!

    ಲಕ್ಷ್ಮಣ್ ದೂರು ಕೊಟ್ಟಿದ್ದು ಯಾಕೆ.?

    ಲಕ್ಷ್ಮಣ್ ದೂರು ಕೊಟ್ಟಿದ್ದು ಯಾಕೆ.?

    ಘಟನೆ ನಡೆದ 14 ಗಂಟೆಗಳ ಬಳಿಕ ನಟ ದರ್ಶನ್ ಕಾರ್ ಡ್ರೈವರ್ ಲಕ್ಷ್ಮಣ್ ಎಂಬುವವರು ರಾಯ್ ಆಂಟೋನಿ ವಿರುದ್ಧ ದೂರು ನೀಡಿದ್ದಾರೆ. ಕಂಪ್ಲೇಂಟ್ ಕಾಪಿಯಲ್ಲಿ ರಾಯ್ ಆಂಟೋನಿ ರನ್ನ ಬಲಿಪಶು ಮಾಡಲಾಗಿದೆ.

    ದರ್ಶನ್ ಕಾರು ಅಪಘಾತ: ರಾಯ್ ಆಂಟೋನಿ ಬಲಿಪಶು.?ದರ್ಶನ್ ಕಾರು ಅಪಘಾತ: ರಾಯ್ ಆಂಟೋನಿ ಬಲಿಪಶು.?

    ಲಕ್ಷ್ಮಣ್ ಹೇಳಿಕೆ ನಂತರ ದೂರು ಏಕೆ.?

    ಲಕ್ಷ್ಮಣ್ ಹೇಳಿಕೆ ನಂತರ ದೂರು ಏಕೆ.?

    ಅಪಘಾತ ನಡೆದ 14 ಗಂಟೆಗಳ ಬಳಿಕ ಎಫ್.ಐ.ಆರ್ ದಾಖಲಿಸಲಾಗಿದೆ. ಮೊದಲೇ ದೂರು ದಾಖಲಿಸಿದ್ದರೆ ಸಾಕ್ಷ್ಯವನ್ನು ಹಾಗೂ ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಬಹುದಿತ್ತು. ಆದರೆ ಇಂತಹ ನಿಧಾನದ ನಿರ್ಧಾರ ಏಕೆ ಎಂಬುದು ಪ್ರಶ್ನೆಯಾಗಿದೆ.

    ದರ್ಶನ್ ಸ್ಥಿತಿ ಈಗ ಹೇಗಿದೆ?: ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಲ್ಲದರ್ಶನ್ ಸ್ಥಿತಿ ಈಗ ಹೇಗಿದೆ?: ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಲ್ಲ

    ಡ್ರೈವರ್ ಯಾರು.?

    ಡ್ರೈವರ್ ಯಾರು.?

    ಅಪಘಾತ ನಡೆದಾಗ ಡ್ರೈವರ್ ಸೀಟ್ ನಲ್ಲಿ ಇದ್ದವರು ಯಾರು ಎಂಬ ಪ್ರಶ್ನೆಗೆ ಇಲ್ಲಿಯವರೆಗೂ ಖಚಿತ ಮಾಹಿತಿ ಲಭಿಸಿಲ್ಲ. ಹೀಗಾಗಿ, ದರ್ಶನ್ ಬೆನ್ನಿಗೆ ಪೊಲೀಸರು ನಿಂತಿದ್ದಾರಾ ಎಂಬ ಅನುಮಾನ ಮೂಡಿದೆ.

    ಆಸ್ಪತ್ರೆಯಲ್ಲಿ ದರ್ಶನ್ ಫೋಟೋ ತೆಗೆದ ಅಭಿಮಾನಿಯ ಮೊಬೈಲ್ ಪುಡಿ ಪುಡಿ.!ಆಸ್ಪತ್ರೆಯಲ್ಲಿ ದರ್ಶನ್ ಫೋಟೋ ತೆಗೆದ ಅಭಿಮಾನಿಯ ಮೊಬೈಲ್ ಪುಡಿ ಪುಡಿ.!

    ಪ್ರತ್ಯಕ್ಷದರ್ಶಿಯಿಂದ ಹೇಳಿಕೆ ಪಡೆಯಲಿಲ್ಲ ಏಕೆ.?

    ಪ್ರತ್ಯಕ್ಷದರ್ಶಿಯಿಂದ ಹೇಳಿಕೆ ಪಡೆಯಲಿಲ್ಲ ಏಕೆ.?

    ಘಟನೆ ನಡೆದ ವೇಳೆ ಅಲ್ಲೇ ಇದ್ದ ಪ್ರತ್ಯಕ್ಷದರ್ಶಿಯಿಂದ ಹೇಳಿಕೆ ಪಡೆಯದೇ, ಘಟನೆಯ ಬಗ್ಗೆ ಅರಿವಿಲ್ಲದ ಲಕ್ಷ್ಮಣ್ ರ ಹೇಳಿಕೆ ಪಡೆದು ಮಾಹಿತಿ ಸಂಗ್ರಹಿಸಲಾಗಿದೆ. ಈ ಕುರಿತಾಗಿ ಪ್ರಶ್ನಿಸಿದರೆ ಪೊಲೀಸರಾಗಲೀ ಮತ್ತು ವೈದ್ಯ ಸಿಬ್ಬಂದಿಯಾಗಲೀ ಯಾವುದೇ ಉತ್ತರ ನೀಡುತ್ತಿಲ್ಲ. ಹೀಗಾಗಿ ಇಡೀ ಪ್ರಕರಣವೇ ಗೊಂದಲದ ಗೂಡಾದಂತೆ ಭಾಸವಾಗುತ್ತಿದೆ.

    English summary
    Kannada Actor Darshan Accident has raised many doubts.
    Tuesday, September 25, 2018, 18:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X