For Quick Alerts
  ALLOW NOTIFICATIONS  
  For Daily Alerts

  ವಿಡಿಯೋ : ಅಭಿಮಾನಿಗಳ ಜೊತೆ ದರ್ಶನ್ ಹುಟ್ಟುಹಬ್ಬ ಆಚರಣೆ

  |
  ಅಭಿಮಾನಿಗಳ ಪ್ರೀತಿಗೆ ದರ್ಶನ್ ಏನಂದ್ರು ಗೊತ್ತಾ..? Filmibeat Kannada

  ಇಂದು ನಟ ದರ್ಶನ್ ಅವರ ಹುಟ್ಟುಹಬ್ಬದ ದಿನ. ಪ್ರತಿ ವರ್ಷದಂತೆ ಈ ವರ್ಷವೂ ಅಭಿಮಾನಿಗಳ ಜೊತೆಗೆ ದರ್ಶನ್ ಬರ್ತ್ ಡೇ ಆಚರಣೆ ಮಾಡಿಕೊಂಡಿದ್ದಾರೆ.

  ರೆಬಲ್ ಸ್ಟಾರ್ ಅಂಬರೀಶ್ ಅವರ ನಿಧನ ಹಾಗೂ ಯೋಧರ ಸಾವಿನ ಕಾರಣ ದರ್ಶನ್ ಅಭಿಮಾನಿಗಳು ಸರಳವಾಗಿ ಹುಟ್ಟುಹಬ್ಬದ ಸಂಭ್ರಮದಲ್ಲಿ ತೊಡಗಿದ್ದಾರೆ. ಅರ್ಥಪೂರ್ಣವಾಗಿ, ಒಂದೊಳ್ಳೆ ಕೆಲಸಕ್ಕಾಗಿ ದರ್ಶನ್ ಹುಟ್ಟುಹಬ್ಬ ಮಾಡಿಕೊಳ್ಳುತ್ತಿದ್ದಾರೆ.

  ಅಭಿಮಾನಿಗಳು ಉಡುಗೊರೆ ರೂಪದಲ್ಲಿ ಆಹಾರ ಧಾನ್ಯಗಳನ್ನು ನೀಡಿದ್ದು, ಅದನ್ನು ಸಿದ್ದಗಂಗಾ ಮಠ, ಅನಾಥ ಆಶ್ರಮ ಹಾಗೂ ವೃದ್ದಾಶ್ರಮಗಳಿಗೆ ಅದನ್ನು ನೀಡಲಾಗುತ್ತದೆ ಎಂದು ದರ್ಶನ್ ತಿಳಿಸಿದ್ದಾರೆ.

  ನಿನ್ನೆ ರಾತ್ರಿ 12 ಗಂಟೆಗೆ ಆರ್ ಆರ್ ನಗರದ ದರ್ಶನ್ ಮನೆ ಮುಂದೆ ಸಾಕಷ್ಟು ಅಭಿಮಾನಿಗಳ ಆಗಮಿಸಿದ್ದರು. ಬಂದ ಅಭಿಮಾನಿಗಳಿಗೆ ಕೈ ಕುಲುಕಿ, ಕೆಲವರಿಗೆ ಫೋಟೋ ನೀಡಿ ದರ್ಶನ್ ಕಳುಹಿಸಿದರು. ಇಂದು ಕೂಡ ದರ್ಶನ್ ಮನೆ ಮುಂದೆ ಅಭಿಮಾನಿಗಳ ಸಂಭ್ರಮಾಚರಣೆ ನಡೆಯಲಿದೆ.

  ದರ್ಶನ್ ನಟನೆಯ 'ಗಂಡುಗಲಿ ಮದಕರಿನಾಯಕ' ಸಿನಿಮಾ ಫಸ್ಟ್ ಲುಕ್ ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆಯಾಗಿದೆ. ಅವರ 'ಯಜಮಾನ' ಚಿತ್ರ ಮಾರ್ಚ್ 1 ರಂದು ಬಿಡುಗಡೆಯಾಗಲಿದೆ.

  English summary
  Kannada actor Darshan celebrated his 42th birthday with his fans in RR Nagara Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X