»   » ಮರಿ ಟೈಗರ್ ಗೆ ಸಾಥ್ ನೀಡಿದ ಚಾಲೆಂಜಿಂಗ್ ಸ್ಟಾರ್

ಮರಿ ಟೈಗರ್ ಗೆ ಸಾಥ್ ನೀಡಿದ ಚಾಲೆಂಜಿಂಗ್ ಸ್ಟಾರ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಮರಿ ಟೈಗರ್ ಅನ್ನೋದಕ್ಕಿಂತ ಇತ್ತೀಚಿಗೆ ಇವರು ಚಂದನವನದ ಅರ್ನಾಲ್ಡ್ ಅಂತಾನೇ ಫೇಮಸ್ ಆಗಿದ್ದಾರೆ. ಅದಕ್ಕೆ ಕಾರಣ ವಿನೋದ್ ಪ್ರಭಾಕರ್ ಅವರ ಶ್ರಮ ಹಾಗೂ ವೃತಿ ಮೇಲಿರುವ ಶ್ರದ್ಧೆ. ಚಿತ್ರರಂಗಕ್ಕೆ ಬಂದು 15 ವರ್ಷದ ನಂತರ ವಿನೋದ್ ಪ್ರಭಾಕರ್ ಬೇರೆಯದ್ದೇ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ವಿನೋದ್ ಅವರ ಫೋಟೋಗಳನ್ನ ನೊಡಿ ಗಾಂಧಿನಗರದ ನಿರ್ದೇಶಕರು ಆಶ್ಚರ್ಯ ಪಟ್ಟಿದ್ದರು. ಅಷ್ಟರ ಮಟ್ಟಿಗೆ ವಿನೋದ್ ಬದಲಾಗಿದ್ದರು. ಇದೇ ಕಾರಣದಿಂದ ವಿನೋದ್ ಪ್ರಭಾಕರ್ ಅವರಿಗೆ ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

ಅಪ್ಪನ ಕನಸು ನನಸು ಮಾಡಲು ಪಣತೊಟ್ಟ ಮರಿ ಟೈಗರ್

ಸದ್ಯ ವಿನೋದ್ ಪ್ರಭಾಕರ್ ಹೊಸ ಸಿನಿಮಾದಲ್ಲಿ ಅಭಿನಯಿಸುತಿದ್ದು ಚಿತ್ರಕ್ಕೆ ದರ್ಶನ್ ಸಾಥ್ ನೀಡಿರುವುದು ವಿಶೇಷ. ವಿನೋದ್ ಅಭಿನಯ ಮಾಡುತ್ತಿರುವ ಹೊಸ ಚಿತ್ರ ಯಾವುದು? ದರ್ಶನ್ ವಿನೋದ್ ಪ್ರಭಾಕರ್ ಗೆ ಸಾಥ್ ನೀಡುತ್ತಿರುವುದು ಯಾಕೆ? ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ಹೊಸ ಚಿತ್ರದಲ್ಲಿ ವಿನೋದ್ ಪ್ರಭಾಕರ್

ಚಿತ್ರರಂಗದಲ್ಲಿ ಮರಿ ಟೈಗರ್ ಅಂತಾನೆ ಪ್ರಖ್ಯಾತಿ ಪಡೆದಿರುವ ವಿನೋದ್ ಪ್ರಭಾಕರ್ ಅಭಿನಯದ ಹೊಸ ಸಿನಿಮಾ ಇಂದು ಸೆಟ್ಟೇರಿದೆ. ಚಿತ್ರವನ್ನ ಪೂರಿ ಜಗನ್ನಾಥ್ ಶಿಷ್ಯ ರವಿ ಗೌಡ ನಿರ್ದೇಶನ ಮಾಡುತ್ತಿದ್ದಾರೆ.

ಶುಭ ಕೋರಿದ ದರ್ಶನ್

ಬಹುತೇಕ ವಿನೋದ್ ಪ್ರಭಾಕರ್ ಅಭಿನಯದ ಚಿತ್ರಗಳಿಗೆ ದರ್ಶನ್ ಕ್ಲಾಪ್ ಮಾಡುತ್ತಾರೆ. ವಿನೋದ್ ಸಹಾಯಕ್ಕೆ ಡಿ ಬಾಸ್ ಎಂದಿಗೂ ನಿಂತಿರುತ್ತಾರೆ. ಅದಕ್ಕೂ ಹೆಚ್ಚಾಗಿ ಇವರಿಬ್ಬರ ಸ್ನೇಹ ಬಾಂದವ್ಯಕ್ಕೆ ಬೆಲೆ ಕೊಟ್ಟು ದರ್ಶನ್, ವಿನೋದ್ ಪ್ರಭಾಕರ್ ಚಿತ್ರದ ಮಹೂರ್ತಕ್ಕೆ ಬಂದು ಶುಭಾಶಯ ಹೇಳಿದ್ದಾರೆ.

ಸಿ ಎಂ ಆಗುತ್ತಾರಾ ವಿನೋದ್

ಸದ್ಯ ಮುಹೂರ್ತ ಮುಗಿಸಿರುವ ಚಿತ್ರತಂಡ ಸಿನಿಮಾ ಟೈಟಲ್ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಮೂಲಗಳ ಪ್ರಕಾರ ಚಿತ್ರತಂಡ ವಿನೋದ್ ಪ್ರಭಾಕರ್ ಅಭಿನಯದ ಸಿನಿಮಾಗೆ ಸಿಎಂ ಎನ್ನುವ ಶೀರ್ಷಿಕೆ ಇಡಬೇಕೆಂದು ನಿರ್ಧರಿಸಿದೆಯಂತೆ. ಆದರೆ ಸಿಎಂ ಎನ್ನುವ ಟೈಟಲ್ ರಿಯಲ್ ಸ್ಟಾರ್ ಬಳಿ ಇದೆ.

ಪಕ್ಕಾ ಮಾಸ್ ಸಿನಿಮಾ

ವಿನೋದ್ ಪ್ರಭಾಕರ್ ಅಭಿನಯಿಸುತ್ತಿರುವ ಹೊಸ ಚಿತ್ರದಲ್ಲಿ ಐದು ಅದ್ಧೂರಿ ಫೈಟ್ಸ್ ಗಳು ಇರಲಿವೆಯಂತೆ. ಇದೊಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಚಿತ್ರವಾಗಿದ್ದು ಟಾಲಿವುಡ್ ನಾಯಕಿ ವಿನೋದ್ ಪ್ರಭಾಕರ್ ಜೋಡಿಯಾಗಿ ಅಭಿನಯಿಸುತ್ತಾರಂತೆ, ಉಳಿದಂತೆ ಮನೋಹರ್​ ಜೋಶಿ ಛಾಯಾಗ್ರಹಣ, ಅಚು ಸಂಗೀತ ಚಿತ್ರಕ್ಕಿರಲಿದೆ.

ವಿನೋದ್ ಪ್ರಭಾಕರ್ 'ಸಿ ಎಂ' ಆಗೋದಕ್ಕೆ ಬೇಕಿದೆ ಉಪ್ಪಿ ಪರ್ಮಿಷನ್

English summary
Kannada actor Darshan claped to the untitled movie of Kannada actor Vinod Prabhakar. The worship of the film has taken place at the Dodda Ganapati temple.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X