For Quick Alerts
  ALLOW NOTIFICATIONS  
  For Daily Alerts

  'ಡಿ' ಅಂದ್ರೆ ಡೆಡಿಕೇಷನ್: ಬರ್ತಡೇ ದಿನವೂ ವೃತ್ತಿಪರತೆ ಮೆರೆದ ಡಿ-ಬಾಸ್ ದರ್ಶನ್.!

  |

  ಅಭಿಮಾನಿಗಳಿಗೆ ಪ್ರೀತಿಯ 'ದಾಸ' ಮತ್ತು ನಿರ್ಮಾಪಕರ ಪಾಲಿನ 'ಯಜಮಾನ' ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್. ''ಸಿನಿಮಾ ಬಿಟ್ಟು ನಮಗೆ ಬೇರೇನೂ ಗೊತ್ತಿಲ್ಲ'' ಅಂತ ಹೇಳಿಕೊಳ್ಳುವ ದರ್ಶನ್, ಪ್ರತಿ ದಿನ ತಮ್ಮ ಸಿನಿಮಾಗಳ ಬಗ್ಗೆ ಮತ್ತು ಪಾತ್ರಗಳ ಬಗ್ಗೆ ತಯಾರಿಯಲ್ಲಿ ತೊಡಗಿರುತ್ತಾರೆ.

  ನಂಬಿದ ನಿರ್ಮಾಪಕರನ್ನು ದರ್ಶನ್ ಯಾವತ್ತೂ ಕೈಬಿಟ್ಟಿಲ್ಲ. ಅಷ್ಟು ಜವಾಬ್ದಾರಿ ಮತ್ತು ಡೆಡಿಕೇಷನ್ ದರ್ಶನ್ ಗಿದೆ. ಅದಕ್ಕೆ ಉತ್ತಮ ನಿದರ್ಶನ ಇಲ್ಲಿದೆ.

  ನಿನ್ನೆಯಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ನಿಮಗೆಲ್ಲಾ ಗೊತ್ತೇ ಇದೆ. ನಿನ್ನೆ ಮಧ್ಯರಾತ್ರಿ 12 ಗಂಟೆಯಿಂದಲೂ, ಅಭಿಮಾನಿಗಳ ಜೊತೆಯಿದ್ದು, ತಮ್ಮ ಬರ್ತಡೇಯನ್ನ ದರ್ಶನ್ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಇದೇ ಗ್ಯಾಪ್ ನಲ್ಲಿ 'ರಾಬರ್ಟ್' ಚಿತ್ರಕ್ಕೂ ಡಬ್ಬಿಂಗ್ ಮಾಡಿ ಬಂದಿದ್ದಾರೆ ನಟ ದರ್ಶನ್. ಮುಂದೆ ಓದಿರಿ...

  ಅಭಿಮಾನಿಗಳಿಗೂ, ಸಿನಿಮಾಗೂ ಸಮಯ ಮೀಸಲು.!

  ಅಭಿಮಾನಿಗಳಿಗೂ, ಸಿನಿಮಾಗೂ ಸಮಯ ಮೀಸಲು.!

  ಜನ್ಮದಿನದಂದು ನೆಚ್ಚಿನ ನಟನಿಗೆ ಶುಭ ಕೋರಬೇಕು ಎಂದು ಬರುವ ಅಭಿಮಾನಿಗಳಿಗೆ ನಿರಾಸೆ ಆಗಬಾರದು ಎಂಬ ಕಾರಣಕ್ಕೆ ಪ್ರತಿಯೊಬ್ಬ ಅಭಿಮಾನಿಯ ಜೊತೆಗೂ ನಿನ್ನೆ ನಟ ದರ್ಶನ್ ಶೇಕ್ ಹ್ಯಾಂಡ್ ಮಾಡಿದರು. ಇದರ ಮಧ್ಯೆ ತಮ್ಮ ಸಿನಿಮಾಗೂ ಕೊಂಚ ಸಮಯವನ್ನು ದರ್ಶನ್ ಮೀಸಲಿಟ್ಟಿದ್ದರು.

  ದರ್ಶನ್ ಬರ್ತಡೇ ಕಿರಿಕ್: ಪೊಲೀಸ್ ಠಾಣೆ ಮೆಟ್ಟಿಲೇರಿದ ಅಕ್ಕ-ಪಕ್ಕದ ನಿವಾಸಿಗಳು.!ದರ್ಶನ್ ಬರ್ತಡೇ ಕಿರಿಕ್: ಪೊಲೀಸ್ ಠಾಣೆ ಮೆಟ್ಟಿಲೇರಿದ ಅಕ್ಕ-ಪಕ್ಕದ ನಿವಾಸಿಗಳು.!

  'ರಾಬರ್ಟ್' ಚಿತ್ರಕ್ಕೆ ಡಬ್ಬಿಂಗ್.!

  'ರಾಬರ್ಟ್' ಚಿತ್ರಕ್ಕೆ ಡಬ್ಬಿಂಗ್.!

  ಬರ್ತಡೇ ಸೆಲೆಬ್ರೇಟ್ ಮಾಡುವ ಕಾರಣಕ್ಕೆ ಕೆಲಸದಿಂದ ಬ್ರೇಕ್ ತೆಗೆದುಕೊಳ್ಳುವುದು ಸಾಮಾನ್ಯ. ಆದ್ರೆ, ಅದನ್ನೇ ನೆಪವಾಗಿ ಪರಿಗಣಿಸದೆ.. ಹುಟ್ಟುಹಬ್ಬ ಇದ್ದರೂ, ಸಿಕ್ಕಾಪಟ್ಟೆ ಬಿಜಿಯಿದ್ದರೂ.. 'ರಾಬರ್ಟ್' ಚಿತ್ರದ ಡಬ್ಬಿಂಗ್ ನಲ್ಲಿ ದರ್ಶನ್ ಪಾಲ್ಗೊಂಡಿದ್ದಾರೆ.

  ಡಿ ಬಾಸ್ ಜನ್ಮದಿನ: ಕೇಕ್ ಕಟ್ ಮಾಡದೆ ಹುಟ್ಟುಹಬ್ಬ ಆಚರಿಸಿಕೊಂಡ ದರ್ಶನ್.!ಡಿ ಬಾಸ್ ಜನ್ಮದಿನ: ಕೇಕ್ ಕಟ್ ಮಾಡದೆ ಹುಟ್ಟುಹಬ್ಬ ಆಚರಿಸಿಕೊಂಡ ದರ್ಶನ್.!

  ಟೈಮ್ ವೇಸ್ಟ್ ಮಾಡುತ್ತಿಲ್ಲ.!

  ಟೈಮ್ ವೇಸ್ಟ್ ಮಾಡುತ್ತಿಲ್ಲ.!

  'ರಾಬರ್ಟ್' ಚಿತ್ರದ ಡಬ್ಬಿಂಗ್ ಕಾರ್ಯಕ್ಕೆ ಈಗಾಗಲೇ ಚಾಲನೆ ಕೊಟ್ಟಾಗಿದೆ. ಅತ್ತ 'ರಾಜವೀರ ಮದಕರಿ ನಾಯಕ' ಚಿತ್ರದ ಶೂಟಿಂಗ್ ಕೂಡ ನಡೆಯುತ್ತಿದೆ. ಹೀಗಾಗಿ, ಸ್ವಲ್ಪವೂ ಟೈಮ್ ವೇಸ್ಟ್ ಮಾಡದೆ ನಿನ್ನೆ 'ರಾಬರ್ಟ್' ಚಿತ್ರಕ್ಕಾಗಿ ಡಬ್ಬಿಂಗ್ ಮಾಡಿದ್ದಾರೆ ನಟ ದರ್ಶನ್.

  ಏಪ್ರಿಲ್ ನಲ್ಲಿ 'ರಾಬರ್ಟ್' ಬಿಡುಗಡೆ

  ಏಪ್ರಿಲ್ ನಲ್ಲಿ 'ರಾಬರ್ಟ್' ಬಿಡುಗಡೆ

  ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ 'ರಾಬರ್ಟ್' ಚಿತ್ರತಂಡ ಬಿಜಿಯಾಗಿದೆ. ನಿನ್ನೆಯಷ್ಟೇ ಬಿಡುಗಡೆಯಾದ 'ರಾಬರ್ಟ್' ಚಿತ್ರದ ಟೀಸರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ತರುಣ್ ಸುಧೀರ್ ನಿರ್ದೇಶನದ 'ರಾಬರ್ಟ್' ಚಿತ್ರ ಏಪ್ರಿಲ್ ನಲ್ಲಿ ರಿಲೀಸ್ ಆಗಲಿದೆ.

  English summary
  Kannada Actor Darshan continues to dub for Roberrt on his birthday as well.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X