»   » ಕುರುಕ್ಷೇತ್ರದಲ್ಲಿ ದರ್ಶನ್ ದುರ್ಯೋಧನನ 'ಗದೆ' ಎಷ್ಟು ಕೆಜಿ ಇದೆ?

ಕುರುಕ್ಷೇತ್ರದಲ್ಲಿ ದರ್ಶನ್ ದುರ್ಯೋಧನನ 'ಗದೆ' ಎಷ್ಟು ಕೆಜಿ ಇದೆ?

Posted By:
Subscribe to Filmibeat Kannada
Kurukshetra, Kannada Movie : Interesting details about Darshan's costumes | Watch Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ 'ಕುರುಕ್ಷೇತ್ರ' ಚಿತ್ರ ಶೂಟಿಂಗ್ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಲೇ ಇದೆ.

ದುರ್ಯೋಧನ ಪಾತ್ರದಲ್ಲಿ ದರ್ಶನ್ ಕಂಗೊಳಿಸುತ್ತಿದ್ದು, ದಿನಕ್ಕೊಂದು ಗೆಟಪ್ ಬಿಡುಗಡೆಯಾಗುತ್ತಿದೆ. ದರ್ಶನ್ ಅವರ ವೇಷಭೂಷಣ, ಅವರ ಕೈಯಲ್ಲಿರುವ ಗದೆ, ಅವರು ಹಾಕಿಕೊಂಡಿರುವ ಚಪ್ಪಲಿ.. ಎಲ್ಲವೂ ಅದ್ಧೂರಿ ಮತ್ತು ಅಬ್ಬರದಿಂದ ಕೂಡಿದೆ.

ದುರ್ಯೋಧನ ದರ್ಶನ್ ಮೈಮೇಲೆ ಇಷ್ಟೆಲ್ಲಾ ಆಭರಣಗಳನ್ನ ನೋಡಿದ ಮೇಲೆ.. ದರ್ಶನ್ ಕೈಯಲ್ಲಿರುವ ಗದೆ ಎಷ್ಟು ಕೆ.ಜಿ ಇದೆ? ಆಭರಣಗಳು ಎಷ್ಟು ಕೆಜಿ ತೂಗಬಹುದು ಅಂತ ನಿಮ್ಗೆಲ್ಲಾ ಒಂದು ಕುತೂಹಲ ಕಾಡಿರುತ್ತೆ. ಈ ಕುತೂಹಲಕ್ಕೆ ಉತ್ತರ ಇಲ್ಲಿದೆ ನೋಡಿ.....

'ದುರ್ಯೋಧನ' ಏನೆಲ್ಲಾ ತೊಟ್ಟಿದ್ದಾರೆ?

'ದುರ್ಯೋಧನ'ನಿಗಾಗಿ ಡಿಸೈನ್ ಮಾಡಿಸಿರುವ ಕಚ್ಚೆ, ಮೈಮೇಲೆ ಹಾಕಿರುವ ಒಡವೆಗಳು, ತಲೆ ಮೇಲೆ ಕಿರೀಟ, ಕೈಯಲ್ಲಿ ಗದೆ, ಐದಾರು ಇಂಚು ಎತ್ತರದ ಗೋಲ್ಡ್ ಕಲರ್ ಚಪ್ಪಲಿ....ಇದನ್ನೆಲ್ಲ ದರ್ಶನ್ ಸದಾ ಹಾಕಿರಲೇ ಬೇಕು.

'ದುರ್ಯೋಧನ' ದರ್ಶನ್ ಜೊತೆಯಿರುವ ಈ ನಟ ಯಾರು?

ಒಟ್ಟು 40 ಕೆಜಿ ತೂಕ

ತಲೆ ಮೇಲಿನ ಕಿರೀಟ, ಕಾಸ್ಟ್ಯೂಮ್ ಎಲ್ಲವೂ ಸೇರಿ ಬರೋಬ್ಬರಿ 35 ರಿಂದ 40 ಕೆಜಿ ಭಾರವನ್ನ ದರ್ಶನ್ ಅವರು ಹೊರುತ್ತಿದ್ದಾರೆ.

'ಕುರುಕ್ಷೇತ್ರ' ಸೆಟ್ ಗೆ ಭೇಟಿ ಕೊಡಲಿರುವ ತೆಲುಗು 'ಸ್ಟಾರ್ ನಟ' ಯಾರು?

'ಕೌರವನ ಗದೆ' ಎಷ್ಟು ಕೆಜಿ ಇದೆ ?

ಇನ್ನು ದುರ್ಯೋಧನ ಕೈಯಲ್ಲಿರುವ ಗದೆ ತೂಕ ಸೇರಿದರೇ, 40 ಕೆಜಿಗಿಂತ ಹೆಚ್ಚು ತೂಕ ಆಗುತ್ತೆ. ಆದ್ರೆ, ಗದೆಯ ತೂಕ ಎಷ್ಟು ಎಂಬುದರ ಬಗ್ಗೆ ನಿಖಿರವಾದ ಮಾಹಿತಿ ಸಿಕ್ಕಿಲ್ಲ.

'ದುರ್ಯೋಧನ'ನನ್ನು ಮರುಳು ಮಾಡುವ 'ಮಾಯೆ' ಹರಿಪ್ರಿಯಾ

ಎರಡೂವರೆ ಗಂಟೆ ಮೇಕಪ್

ಇಷ್ಟೆಲ್ಲಾ ಆಭರಣಗಳು, ಕಾಸ್ಟ್ಯೂಮ್ ತೊಡಲು ಹಾಗೂ ಮೇಕಪ್ ಮಾಡಿಸಿಕೊಳ್ಳಲು ದರ್ಶನ್ ಗೆ ಸುಮಾರು ಎರಡು ಗಂಟೆ ಬೇಕಂತೆ. ಮೇಕಪ್ ಮುಗಿಸಿದ ನಂತರ ಬೆಳಿಗ್ಗೆ 11 ಗಂಟೆಯಿಂದ 6 ಗಂಟೆಯವರೆಗೂ ಚಿತ್ರೀಕರಣ ನಡೆಯುತ್ತೆ. ಅಲ್ಲಿಯವರೆಗೂ ದರ್ಶನ್ ಅವರು ಅದೇ ಗೆಟಪ್ ನಲ್ಲಿ ಇರಬೇಕು.

English summary
Here is the interesting detail about Challenging Star Darshan Costumes in Kannada Movie 'Kurukshetra'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada