For Quick Alerts
  ALLOW NOTIFICATIONS  
  For Daily Alerts

  ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ದರ್ಶನ್ ಹೇಳಿದ್ದೇನು?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನಾರೋಗ್ಯದ ಹಿನ್ನಲೆ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದ ದರ್ಶನ್ ಡಿಸ್ಚಾರ್ಜ್ ಆಗಿದ್ದಾರೆ. ತೀವ್ರತರದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ದರ್ಶನ್ ನಿನ್ನೆ ಬೆಳಗ್ಗೆ 4 ಗಂಟೆಗೆ ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿದ್ದರು.

  ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ್ಮೇಲೆ ಡಿ ಬಾಸ್ ಹೇಳಿದ್ದೇನು ಗೊತ್ತಾ..? | Darshan | Discharged | DBOSS

  ಚಿಕಿತ್ಸೆ ಬಳಿಕ ದರ್ಶನ್ ಅವರನ್ನು ಸಂಜೆ ಡಿಸ್ಚಾರ್ಜ್ ಮಾಡಲಾಗಿದೆ. ಡಿಸ್ಚಾರ್ಜ್ ಆಗಿ ಹೊರಬರುತ್ತಿದ್ದಂತೆ ಮಾಧ್ಯಮದವರ ಜೊತೆ ಮಾತನಾಡಿದ ದರ್ಶನ್ ಏನೂ ಆಗಿಲ್ಲ. ನಾನು ಫಸ್ಟ್ ಕ್ಲಾಸ್ ಆಗಿದ್ದೀನಿ. ಸ್ವಲ್ಪ ಗ್ಯಾಸ್ಟ್ರಿಕ್ ಸಮಸ್ಯೆ ಆಗಿತ್ತು ಅಷ್ಟೆ ಎಂದಿದ್ದಾರೆ. ಇನ್ನು ಸರಿಯಾದ ಸಮಯಕ್ಕೆ ಊಟ ತಿಂಡಿ ಸರಿಯಾಗಿ ನೋಡಿಕೊಳ್ಳದ ಕಾರಣಕ್ಕೆ ಗ್ಯಾಸ್ಟ್ರಿಕ್ ಆಗಿತ್ತು. ಡಾಕ್ಟರ್ ಅಜಯ್ ಹೆಗಡೆ ಇದಾರೆ ನೋಡಿಕೊಂಡಿದ್ದಾರೆ. ಈಗ ಆರಾಮಾಗಿ ಇದ್ದೀನಿ ಎಂದಿದ್ದಾರೆ.

  ಅನಾರೋಗ್ಯದ ಹಿನ್ನಲೆ ನಟ ದರ್ಶನ್ ಆಸ್ಪತ್ರೆಗೆ ದಾಖಲುಅನಾರೋಗ್ಯದ ಹಿನ್ನಲೆ ನಟ ದರ್ಶನ್ ಆಸ್ಪತ್ರೆಗೆ ದಾಖಲು

  ಗ್ಯಾಸ್ಟ್ರೋ ಎಂಟರಾಲಜಿಸ್ಟ್ ತಜ್ಞರಾದ ಡಾ.ಅನೂಪ್ ಆಳ್ವಾ ದರ್ಶನ್ ಅವರಿಗೆ ಚಿಕಿತ್ಸೆ ನೀಡಿ ಆರೋಗ್ಯ ಸ್ಥಿರವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ದರ್ಶನ್ ಒಂದು ದಿನ ಆಸ್ಪತ್ರೆಯಲ್ಲಿಯೆ ಇರಲಿದ್ದಾರೆ ಎಂದು ಹೇಳಾಗಿತ್ತು. ಆರೋಗ್ಯ ಸುಧಾರಿಸಿದ ಹಿನ್ನಲೆ ಸಂಜೆಯೆ ಡಿಸ್ಚಾರ್ಜ್ ಮಾಡಲಾಗಿದೆ.

  ದರ್ಶನ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗುತ್ತಿದಂತೆ ಅಭಿಮಾನಿಗಳು ಆತಂಕಪಟ್ಟುಕೊಂಡಿದ್ದರು. ಆದರೆ ಕೆಲವೆ ಕ್ಷಣದಲ್ಲಿ ದರ್ಶನ್ ಆರೋಗ್ಯವಾಗಿದ್ದಾರೆ, ಗ್ಯಾಸ್ಟ್ರಿಕ್ ಇಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಗೊತ್ತಾದ ಮೇಲೆ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.

  ದರ್ಶನ್ ಸದ್ಯ ಮದಕರಿ ನಾಯಕ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ರಾಬರ್ಟ್ ಚಿತ್ರದ ಪ್ರಮುಖ ಹಾಡಿನ ಚಿತ್ರೀಕರಣ ಕೂಡ ಬಾಕಿ ಉಳಿದಿದೆ. ರಾಬರ್ಟ್ ಹಾಡಿನ ಚಿತ್ರೀಕರಣಕ್ಕಾಗಿ ದರ್ಶನ್ ಮತ್ತು ತಂಡ ವಿದೇಶಕ್ಕೆ ತೆರಳಬೇಕಿತ್ತು, ಆದರೆ ಕೊರೊನಾ ವೈರಸ್ ಭೀತಿಯ ಹಿನ್ನಲೆ ವಿದೀಶಿ ಚಿತ್ರೀಕರಣ ರದ್ದು ಗೊಳಿಸಿದ್ದಾರೆ. ಹೈದರಾಬಾದ್ ನಲ್ಲಿ ನಡೆಯಲಿರುವ ಮದಕರಿನಾಯಕ ಚಿತ್ರೀಕರಣದಲ್ಲಿ ದರ್ಶನ್ ಭಾಗಿಯಾಗಲಿದ್ದಾರೆ.

  English summary
  Kannada Actor Darshan discharged from hospital after treatment for gastric.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X