»   » ಕೌಟುಂಬಿಕ ಕಲಹ ; ದರ್ಶನ್ ಕಿವಿ ಹಿಂಡಿದ 'ಅಪ್ಪಾಜಿ' ಅಂಬರೀಶ್

ಕೌಟುಂಬಿಕ ಕಲಹ ; ದರ್ಶನ್ ಕಿವಿ ಹಿಂಡಿದ 'ಅಪ್ಪಾಜಿ' ಅಂಬರೀಶ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ಬೇಸರಗೊಂಡಿದ್ದಾರೆ. ಕೌಟುಂಬಿಕ ಕಲಹದಿಂದ ದರ್ಶನ್ ಮನನೊಂದಿದ್ದಾರೆ. ಪತ್ನಿ ಮೇಲಿನ ಸಿಟ್ಟಿನಿಂದ 'ದಾಸ'ನ ಸಹನೆಯ ಕಟ್ಟೆ ಒಡೆದಿದೆ.

ಕೋಪದ ಕೈಯಲ್ಲಿ ಬುದ್ಧಿ ಕೊಟ್ಟಿರುವ ದರ್ಶನ್, ಮಾಧ್ಯಮಗಳ ಮುಂದೆ ಪತ್ನಿ ವಿಜಯಲಕ್ಷ್ಮಿ ಮೇಲೆ ಗಂಭೀರ ಆರೋಪ ಮಾಡುತ್ತಿದ್ದಾರೆ. ದರ್ಶನ್ ಕೌಟುಂಬಿಕ ವಿಚಾರ ಬೀದಿ ಬೀದಿಯಲ್ಲಿ ಚರ್ಚೆ ಆಗುತ್ತಿದೆ. [ದರ್ಶನ್ 'ಸಂಸಾರ ಗಲಾಟೆ'ಯನ್ನು ನಾನು ಸರಿ ಮಾಡುತ್ತೇನೆ: ಅಂಬರೀಶ್]

ಈ ಮಧ್ಯೆ ದರ್ಶನ್ ಸಂಸಾರ ಸರಿ ಮಾಡುತ್ತೇನೆ ಅಂತ 'ದಾಸ' ಪ್ರೀತಿಯಿಂದ 'ಅಪ್ಪಾಜಿ' ಅಂತ ಕರೆಯುವ ಅಂಬರೀಶ್ ಮುಂದೆ ಬಂದಿದ್ದಾರೆ. ನಿನ್ನೆ ದರ್ಶನ್ ಮತ್ತು ವಿಜಯಲಕ್ಷ್ಮಿ ರವರಿಗೆ ಫೋನ್ ಮಾಡಿ ರಾಜಿ ಸಂಧಾನಕ್ಕೆ ಅಂಬರೀಶ್ ನಾಂದಿ ಹಾಡಿದ್ದಾರೆ. ಮುಂದೆ ಓದಿ....[ಸಂಥಿಂಗ್ ವಿತ್ ಶಾಮ್ ನಲ್ಲಿ ಮಲ್ಯ, ದರ್ಶನ್ ಬಗ್ಗೆ, ಕ್ಲಿಕ್ ಮಾಡಿ]

ಬುದ್ಧಿವಾದ ಹೇಳಿರುವ ನಟ ಅಂಬರೀಶ್

ನಟ ದರ್ಶನ್-ವಿಜಯಲಕ್ಷ್ಮಿ ಕೌಟುಂಬಿಕ ಕಲಹವನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸಿರುವ ವಸತಿ ಸಚಿವ ಹಾಗೂ ಹಿರಿಯ ನಟ ಅಂಬರೀಶ್, ನಿನ್ನೆ (ಶುಕ್ರವಾರ) ಇಬ್ಬರಿಗೂ ಕರೆ ಮಾಡಿ ಬುದ್ಧಿವಾದ ಹೇಳಿದ್ದಾರೆ. ['ಗಲಾಟೆ ಸಂಸಾರ'; ದರ್ಶನ್ ಬೆಟ್ಟು ಮಾಡುತ್ತಿರುವ 'ಅವರು' ಯಾರು?]

ಸದ್ಯದಲ್ಲೇ ಇಬ್ಬರ ಮುಖಾಮುಖಿ

ನಿನ್ನೆ ಫೋನ್ ನಲ್ಲಿ ಇಬ್ಬರ ಜೊತೆಗೂ ಪ್ರತ್ಯೇಕವಾಗಿ ಮಾತನಾಡಿರುವ ಅಂಬರೀಶ್ ಭಾನುವಾರದ ಹೊತ್ತಿಗೆ ದರ್ಶನ್-ವಿಜಯಲಕ್ಷ್ಮಿ ರವರನ್ನ ಖುದ್ದಾಗಿ ಭೇಟಿ ಮಾಡಿ, ರಾಜಿ ಸಂಧಾನ ಮಾಡುವ ಸಾಧ್ಯತೆ ಇದೆ. [ನಟ ದರ್ಶನ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪತ್ನಿ ವಿಜಯಲಕ್ಷ್ಮಿ]

ದರ್ಶನ್ ಗೆ ಕಿವಿ ಮಾತು

ಆಗಿರುವುದನ್ನೆಲ್ಲಾ ಮರೆತು, ಭಿನ್ನಾಭಿಪ್ರಾಯ ಬದಿಗಿಟ್ಟು, ಜೊತೆಯಾಗಿ ಸುಖ ಸಂಸಾರ ನಡೆಸುವಂತೆ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿಗೆ ಅಂಬರೀಶ್ ಹೇಳಿದ್ದಾರೆ. [ಹೆಂಡತಿಯನ್ನು ಕೀಳು ಭಾಷೆಯಲ್ಲಿ ನಿಂದಿಸುವ "ದರ್ಶನ್" ಆಡಿಯೋ ಕ್ಲಿಪ್]

ದರ್ಶನ್ ಕಿವಿ ಹಿಂಡಿದ ಅಂಬರೀಶ್

ಮಾಧ್ಯಮಗಳ ಮುಂದೆ ಆರೋಪ-ಪ್ರತ್ಯಾರೋಪ ಮಾಡದೆ, ಸಾರ್ವಜನಿಕವಾಗಿ ಜಗಳ ಮಾಡಿಕೊಳ್ಳದೆ, ಮೌನವಾಗಿ ಇರುವಂತೆ ದರ್ಶನ್ ಮತ್ತು ವಿಜಯಲಕ್ಷ್ಮಿ ಕಿವಿ ಹಿಂಡಿದ್ದಾರೆ ನಟ ಅಂಬರೀಶ್. [ಬ್ರೇಕಿಂಗ್ ನ್ಯೂಸ್ - ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ರಾ ದರ್ಶನ್?]

ಅಂಬರೀಶ್ ಮಾತನ್ನ ದರ್ಶನ್ ಪಾಲಿಸ್ತಾರಾ?

ಇದುವರೆಗೂ ಅಂಬರೀಶ್ ಹಾಕಿದ ಗೆರೆಯನ್ನ ದರ್ಶನ್ ಎಂದೂ ದಾಟಿಲ್ಲ. ಕಳೆದ ಬಾರಿ ದರ್ಶನ್ ಕೌಟುಂಬಿಕ ಕಲಹ ಬೀದಿಗೆ ಬಂದಾಗ, ಇದೇ 'ಅಪ್ಪಾಜಿ' ಅಂಬಿ ನೇತೃತ್ವದಲ್ಲಿ ದರ್ಶನ್-ವಿಜಯಲಕ್ಷ್ಮಿ ರಾಜಿಯಾಗಿದ್ದರು. [ಬಾಯ್ ಫ್ರೆಂಡ್ ಇದ್ದಾನಾ? ದರ್ಶನ್ ಪತ್ನಿ ವಿಜಯಲಕ್ಷ್ಮಿ ಏನಂದ್ರು ಗೊತ್ತಾ?]

ಈ ಬಾರಿಯೂ ಅಂಬಿ ನುಡಿದಂತೆ ನಡೆಯುತ್ತಾರಾ ದರ್ಶನ್?

ಮೂಲಗಳ ಪ್ರಕಾರ, ಅಂಬರೀಶ್ ನುಡಿದಂತೆ ನಡೆಯುವುದಾಗಿ ದರ್ಶನ್ ಮಾತು ಕೊಟ್ಟಿದ್ದಾರೆ. [ನನ್ನ ಹೆಂಡ್ತಿ ವಿಜಯಲಕ್ಷ್ಮಿಗೆ ಪ್ರಿಯಕರನಿದ್ದಾನೆ ಎಂದ ದರ್ಶನ್ ]

ಅಂಬರೀಶ್ ಹೇಳಿದಿಷ್ಟು.!

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಂಬರೀಶ್ - ''ಗಲಾಟೆ ಮಾಡಿಕೊಳ್ಳಬೇಡಿ ಎಂದಿದ್ದೇನೆ. ಮಾಧ್ಯಮಗಳ ಮುಂದೆ ಮಾತನಾಡದೆ ಮೌನವಾಗಿರುವಂತೆ ಸೂಚಿಸಿದ್ದೇನೆ. ಅದಕ್ಕೆ ಇಬ್ಬರೂ ಒಪ್ಪಿಕೊಂಡಿದ್ದಾರೆ. ಸತಿ-ಪತಿಯನ್ನ ಒಟ್ಟಿಗೆ ಕೂರಿಸಿ ಬುದ್ಧಿ ಹೇಳುತ್ತೇನೆ'' ಎಂದರು.

ದರ್ಶನ್ ಎಲ್ಲಿದ್ದಾರೆ?

ಎಲ್ಲರಿಂದ ಕೊಂಚ ದೂರ ಇರಲು ಬಯಸಿದ ದರ್ಶನ್ ಮನಃಶಾಂತಿಗಾಗಿ ಮೈಸೂರಿಗೆ ತೆರಳಿದ್ದರು. ಗುರುವಾರವೇ ಮೈಸೂರಿಗೆ ತೆರಳಿದ್ದ ದರ್ಶನ್, ತಮ್ಮ ತೋಟದ ಮನೆಯಲ್ಲಿ ಉಳಿದುಕೊಂಡಿದ್ದರು.

ನಿನ್ನೆ ಹೋಟೆಲ್ ನಲ್ಲಿ!

ಶುಕ್ರವಾರ ಬೆಳಗ್ಗೆ ನಿರ್ಮಾಪಕ ಹಾಗೂ ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಸಂದೇಶ್ ನಾಗರಾಜ್ ಮನೆಗೆ ಹೋಗಿ, ಅಲ್ಲೇ ಉಪಹಾರ ಮುಗಿಸಿ, ನಂತರ 'ಸಂದೇಶ್ ಪ್ರಿನ್ಸ್' ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು.

ವಿಜಯಲಕ್ಷ್ಮಿ ಮನೆಗೆ ದರ್ಶನ್ ಆಪ್ತರು?

ಮೂಲಗಳ ಪ್ರಕಾರ, ಅಂಬರೀಶ್ ಮಧ್ಯಸ್ಥಿಕೆಯಲ್ಲಿ ನಡೆಯುವ ರಾಜಿ ಸಂಧಾನಕ್ಕೆ ಪೂರ್ವ ವೇದಿಕೆ ಕಲ್ಪಿಸಲು, ದರ್ಶನ್ ಆಪ್ತ ಗೆಳೆಯರು ವಿಜಯಲಕ್ಷ್ಮಿ ಮನೆಗೆ ಭೇಟಿ ಕೊಟ್ಟು ಮಾತುಕತೆ ನಡೆಸಿದ್ದಾರೆ.

English summary
Kannada Actor, Karnataka Housing Minister Ambareesh has intervened to ease marital discord between Kannada Actor Darshan and his wife Vijayalakshmi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada