twitter
    For Quick Alerts
    ALLOW NOTIFICATIONS  
    For Daily Alerts

    'ಕುರುಕ್ಷೇತ್ರ' ಸ್ವಾಗತಕ್ಕೆ 50 ಜೋಡೆತ್ತು, 50 ಸಾವಿರ ಲಡ್ಡು, 50 ಅಡಿ ಕಟೌಟ್

    |

    ಬಹುನಿರೀಕ್ಷೆಯ ಕುರುಕ್ಷೇತ್ರ ಸಿನಿಮಾ ರಿಲೀಸ್ ಗೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ನಾಳೆ ದೇಶದಾದ್ಯಂತ ಚಿತ್ರರಸಿಕರಿಗೆ ಹಸ್ತಿನಾಪುರದ ದರ್ಶನ ಆಗಲಿದೆ. ಸ್ಯಾಂಡಲ್ ವುಡ್ ನ ಅದ್ದೂರಿ ಪೌರಾಣಿಕ ಸಿನಿಮಾ ಎನ್ನುವ ಕುತೂಹಲ ಒಂದೆಡೆ ಆದ್ರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಎನ್ನುವುದು ಮತ್ತೊಂದು ವಿಶೇಷ..

    ಈಗಾಗಲೆ ಕುರುಕ್ಷೇತ್ರ ಸ್ವಾಗತಕ್ಕೆ ಚಿತ್ರಮಂದಿರಗಳು ಸಜ್ಜಾಗಿವೆ. ಕುರುಕ್ಷೇತ್ರ ಚಿತ್ರವನ್ನು ಬರಮಾಡಿಕೊಳ್ಳಲು ಕಟೌಟ್, ಬ್ಯಾನರ್, ಹೂಮಾಲೆಗಳಿಂದ ಅಲಂಕಾರಗೊಂಡಿವೆ ಚಿತ್ರಮಂದಿಗಳು. ರಾಜ್ಯದ ನಾನಾಭಾಗಗಳಲ್ಲಿ ಅಭಿಮಾನಿಗಳು ಹಬ್ಬದ ರೀತಿಯಲ್ಲಿ ಆಚರಣೆ ಮಾಡುತ್ತಿದ್ದಾರೆ.

    ಅಮೆರಿಕಾದ ಎಷ್ಟು ಚಿತ್ರಮಂದಿರಗಳಲ್ಲಿ 'ಕುರುಕ್ಷೇತ್ರ' ಪ್ರದರ್ಶನ ಆಗುತ್ತಿದೆ ಅಮೆರಿಕಾದ ಎಷ್ಟು ಚಿತ್ರಮಂದಿರಗಳಲ್ಲಿ 'ಕುರುಕ್ಷೇತ್ರ' ಪ್ರದರ್ಶನ ಆಗುತ್ತಿದೆ

    ಅದರಲ್ಲೂ ಮಂಡ್ಯದಲ್ಲಂತೂ ಡಿ ಬಾಸ್ ಚಿತ್ರವನ್ನು ಇನ್ನೂ ಅದ್ದೂರಿಯಾಗಿ ಸ್ವಾಗತಿಸುತ್ತಿದ್ದಾರೆ. ಇಂಡುವಾಳು ಸಚ್ಚಿದಾನಂದ ಹಿತೈಶಿಗಳ ಬಳಗದಿಂದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸುಮಲತಾ ಪರ ಚುನಾವಣೆ ಪ್ರಚಾರ ಮಾಡಿದ ನಂತರ ಯಶ್ ಮತ್ತು ದರ್ಶನ್ ಇಬ್ಬರು ಜೋಡೆತ್ತುಗಳು ಅಂತಾನೆ ಖ್ಯಾತಿಗಳಿಸಿದ್ದಾರೆ. ಅದೇ ಜೋಡೆತ್ತುಗಳಿಂದ ನಾಳೆ ಕುರುಕ್ಷೇತ್ರ ಚಿತ್ರಕ್ಕೆ ಅದ್ದೂರಿ ಸ್ವಾಗತ ಕೋರುತ್ತಿದ್ದಾರೆ.

    Darshan Fans All Set To Grand Welcome Darshan 50th Film Kurukshetra

    ಹೌದು ಮಂಡ್ಯದಲ್ಲಿ ಈಗಾಗಲೆ 50 ಅಡಿ ಎತ್ತರದ ಕಟೌಟ್ ನಿಲ್ಲಿಸಿರುವ ಅಭಿಮಾನಿಗಳು, 50 ಜೋಡೆತ್ತುಗಳು, 50 ಆಟೋ, 50 ಬೈಕ್ ರ್ಯಾಲಿ ಜೊತೆಗೆ 50 ಬಗೆಯ ಜಾನಪದ ಕಲಾವಿದರ ತಂಡದಿಂದ ಮೆರವಣಿಗೆ ಮಾಡುತ್ತಿದ್ದಾರೆ. ದರ್ಶನ್ ಅವರ 50ನೇ ಸಿನಿಮಾ ಎನ್ನುವ ಕಾರಣಕ್ಕೆ 50 ಸಂಖ್ಯೆಯನ್ನು ಬಳಕೆ ಮಾಡುತ್ತಿದ್ದಾರೆ.

    ಇನ್ನು ವಿಶೇಷ ಅಂದ್ರೆ ಚಿತ್ರ ನೋಡಲು ಬರುವ ಅಭಿಮಾನಿಗಳಿಗಾಗಿ 50 ಸಾವಿರ ಲಡ್ಡು ತಯಾರಾಗುತ್ತಿದೆಯಂತೆ. ಈಗಾಗಲೆ ಅಭಿಮಾನಿಗಳಿಗಾಗಿ ಲಡ್ಡು ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೆ ಸಾವಿರಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ಕುರುಕ್ಷೇತ್ರ ತೆರೆಗೆ ಬರುತ್ತಿದೆ. ಮಧ್ಯ ರಾತ್ರಿಯಿಂದನೆ ಚಿತ್ರ ಪ್ರದರ್ಶನವಾಗುತ್ತಿದೆ.

    English summary
    Darshan fans all set to grand welcome darshan's 50th film kurukshetra in Mandya
    Thursday, August 8, 2019, 18:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X