Don't Miss!
- Finance
ಗಮನಿಸಿ: ಆಧಾರ್ ವೆರಿಫಿಕೇಶನ್ಗೆ ಯುಐಡಿಎಐ ಹೊಸ ಮಾರ್ಗಸೂಚಿ
- News
ಕರ್ನಾಟಕ ಹೈಕೋರ್ಟ್ನ ಇಬ್ಬರು ನ್ಯಾಯಮೂರ್ತಿಗಳ ಪ್ರಮಾಣವಚನ
- Technology
ರೆಡ್ಮಿ ಮೊಬೈಲ್ ಖರೀದಿಸುವ ಗ್ರಾಹಕರೇ, ಅವಸರ ಬೇಡಾ!..ಇಲ್ಲಿ ಗಮನಿಸಿ!
- Sports
SA 20: ಎಸ್ಎ 20 ಲೀಗ್ನ ಮೊದಲ ಶತಕ ಗಳಿಸಿದ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್
- Lifestyle
Horoscope Today 25 Jan 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಈ ವರ್ಷವೇ ಖರೀದಿಗೆ ಸಿಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಹಾರಾಷ್ಟ್ರ ದರ್ಶನ್ ಅಭಿಮಾನಿಗಳಿಗೆ ನಿರಾಸೆ ಮಾಡಿದ ಮುನಿರತ್ನ
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರ 25 ಪೂರೈಸಿ 50ನೇ ದಿನದತ್ತ ಹೆಜ್ಜೆ ಹಾಕುತ್ತಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆಕಂಡಿದ್ದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡಿದ್ದು, ನೂರು ಕೋಟಿ ಕ್ಲಬ್ ಸೇರಿದೆ ಎನ್ನಲಾಗುತ್ತಿದೆ.
ಕುರುಕ್ಷೇತ್ರ ನೋಡಿದ ದಕ್ಷಿಣ ಭಾರತದ ಪ್ರೇಕ್ಷಕರು ಸಿನಿಮಾ ಮೆಚ್ಚಿಕೊಂಡಿದ್ದಾರೆ. ಆದರೆ, ಮುಂಬೈ ಪ್ರೇಕ್ಷಕರು ನಿರಾಸೆಯಾಗಿದ್ದಾರೆ. ಯಾಕಂದ್ರೆ, ಹಿಂದಿಯಲ್ಲಿ ಕುರುಕ್ಷೇತ್ರ ಬಿಡುಗಡೆಯಾಗುತ್ತೆ ಎಂದು ಹೇಳಿ, ಇನ್ನೂ ರಿಲೀಸ್ ಮಾಡಿಲ್ಲ. ಹಿಂದಿಯಲ್ಲಿ ಕುರುಕ್ಷೇತ್ರ ಯಾವಾಗ ರಿಲೀಸ್ ಮಾಡ್ತೀರಾ ಎಂದು ಕೇಳುತ್ತಿದ್ದಾರೆ.
ಸಾಹೋ
ಚಿತ್ರವನ್ನ
ಹಿಂದಿಕ್ಕಿದ
ದರ್ಶನ್
ಕುರುಕ್ಷೇತ್ರ
ಈ ಬಗ್ಗೆ ಪುಣೆ ಮೂಲದ ವ್ಯಕ್ತಿಯೊಬ್ಬ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಮನವಿ ಮಾಡಿಕೊಂಡಿದ್ದಾನೆ. ಇದಕ್ಕೆ ದರ್ಶನ್ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ಹಿಂದಿ ವರ್ಷನ್ ಬಗ್ಗೆ ಅನುಮಾನ ಮೂಡುತ್ತಿದೆ. ಅಷ್ಟಕ್ಕೂ, ಹಿಂದಿ ಕುರುಕ್ಷೇತ್ರ ಯಾವಾಗ ರಿಲೀಸ್? ಮುಂದೆ ಓದಿ....

ಕುರುಕ್ಷೇತ್ರ ಹಿಂದಿಯಲ್ಲಿ ಬರುತ್ತಾ, ಇಲ್ವಾ?
''ಕುರುಕ್ಷೇತ್ರ ಚಿತ್ರವನ್ನ ಹಿಂದಿಯಲ್ಲಿ ರಿಲೀಸ್ ಮಾಡಿ. ನಾನು ಕಾಯುತ್ತಿರುವೆ. ನೀವು ಹಿಂದಿಯಲ್ಲಿ ರಿಲೀಸ್ ಮಾಡುತ್ತೀರಾ ಅಥವಾ ಇಲ್ವಾ? ನೀವು ಹಿಂದಿಯಲ್ಲಿ ರಿಲೀಸ್ ಮಾಡಲ್ಲ ಅಂದ್ರೆ ಕನ್ನಡದಲ್ಲಾದರೂ ಬಿಡುಗಡೆ ಮಾಡಿ. ನಾನು ದರ್ಶನ್ ಅವರ ದೊಡ್ಡ ಅಭಿಮಾನಿ. ದಯವಿಟ್ಟು ಮುನಿರತ್ನ, ದರ್ಶನ್ ಅವರೇ ಪ್ರತಿಕ್ರಿಯಿಸಿ'' ಎಂದು ಮನವಿ ಮಾಡಿದ್ದಾನೆ.

ಮೊದಲ ದಿನ ದರ್ಶನ್ ಸಿನಿಮಾ ನೋಡಿಲ್ಲ
''ನಾನು ದರ್ಶನ್ ಅವರ ದೊಡ್ಡ ಅಭಿಮಾನಿ. ನಾನು ಪುಣೆಯಲ್ಲಿದ್ದೇನೆ. ಕುರುಕ್ಷೇತ್ರ ಚಿತ್ರಕ್ಕಾಗಿ ಕಾಯುತ್ತಿದ್ದೇನೆ. ಇದೇ ಮೊದಲ ಸಲ ನಾನು ದರ್ಶನ್ ಚಿತ್ರವನ್ನ ಮೊದಲ ಶೋ ನೋಡದೆ ಇರುವುದು. ದಯವಿಟ್ಟು ಮಹಾರಾಷ್ಟ್ರದಲ್ಲಿ ಬೇಗ ಕುರುಕ್ಷೇತ್ರ ಚಿತ್ರವನ್ನ ಬಿಡುಗಡೆ ಮಾಡಿ'' ಎಂದು ಮತ್ತೊಬ್ಬ ಅಭಿಮಾನಿ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.
ಮುನಿರತ್ನ
ಹೀಗೆ
ಮಾಡಿದ್ರೆ
'ಕುರುಕ್ಷೇತ್ರ'
ಇನ್ನೂ
ಎತ್ತರಕ್ಕೆ
ಹೋಗ್ತಿತ್ತು.!

ಸೆಪ್ಟೆಂಬರ್ 12ಕ್ಕೆ ಸರ್ಪ್ರೈಸ್ ಕೊಡ್ತಾರಾ?
ಈ ಬಗ್ಗೆ ಅಭಿಮಾನಿಗಳಿಗೆ ಒಂದು ಕುತೂಹಲ ಇದೆ. ಬಹುಶಃ ಸೆಪ್ಟೆಂಬರ್ 12 ರಂದು ಕುರುಕ್ಷೇತ್ರ ಹಿಂದಿ ರಿಲೀಸ್ ಮಾಡಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ. ಮತ್ತೆ ಕೆಲವರು ಮೂರನೇ ವಾರ ಬರಬಹುದು ಎಂದು ಗೆಸ್ ಮಾಡುತ್ತಿದ್ದಾರೆ. ಆದರೆ, ಅಧಿಕೃತ ಮಾಹಿತಿ ಘೋಷಣೆಯಾಗಿಲ್ಲ. ಸೆಪ್ಟೆಂಬರ್ 12 ರಂದು ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಐದು ಭಾಷೆಯಲ್ಲಿ ತೆರೆಕಾಣುತ್ತಿದೆ.
ದರ್ಶನ್
ಪ್ರಕಾರ
70-80ರಲ್ಲಿ
'ಕುರುಕ್ಷೇತ್ರ'
ಬಂದಿದ್ರೆ
'ದುರ್ಯೋಧನ'
ಇವರಾಗ್ಬೇಕಿತ್ತಂತೆ

ಮುಂದಿನ ತಿಂಗಳು ಹಿಂದಿ ಕುರುಕ್ಷೇತ್ರ
ಕುರುಕ್ಷೇತ್ರ ಚಿತ್ರತಂಡದ ಮೂಲಗಳ ಪ್ರಕಾರ, ಈ ತಿಂಗಳ ಅಂತ್ಯಕ್ಕೆ ಅಥವಾ ಮುಂದಿನ ತಿಂಗಳ ಆರಂಭಕ್ಕೆ ಕುರುಕ್ಷೇತ್ರ ಸಿನಿಮಾ ಹಿಂದಿಯಲ್ಲಿ ಬರಬಹುದು ಎನ್ನುತ್ತಿದ್ದಾರೆ. ದರ್ಶನ್ ಅಭಿನಯದ ಒಡೆಯ ಸಿನಿಮಾವೂ ಬಿಡುಗಡೆಗೆ ಸಜ್ಜಾಗುತ್ತಿದೆ. ಆ ಚಿತ್ರಕ್ಕೆ ಮುನ್ನವೇ ಕುರುಕ್ಷೇತ್ರ ಬರಬೇಕಾದ ಅನಿವಾರ್ಯತೆ ಇದೆ.