Don't Miss!
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕ್ರಾಂತಿ' ಟ್ರೈಲರ್ ಟಾರ್ಗೆಟ್: ತಾಕತ್ತು ತೋರಿಸೋಕೆ ಡಿಬಾಸ್ ಫ್ಯಾನ್ಸ್ ಮಾಸ್ಟರ್ ಪ್ಲ್ಯಾನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಅದಕ್ಕೂ ಮುನ್ನ ಟ್ರೈಲರ್ 'ಕ್ರಾಂತಿ'ಗೆ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. ಅದಕ್ಕಾಗಿ ಈಗಾಗಲೇ ತಮ್ಮ ಬಳಗವನ್ನು ಅಲರ್ಟ್ ಮಾಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾ ಬಂದ್ಮೇಲೆ ಸ್ಟಾರ್‌ಗಳ ಫ್ಯಾನ್ಸ್ ವಾರ್ ಮತ್ತಷ್ಟು ಜೋರಾಗಿದೆ. ಟ್ರೆಂಡ್‌ಗಳನ್ನು ನಡೆಸೋದು ಯಾವುದಾದರೂ ಸಿನಿಮಾ ಟ್ರೈಲರ್ ಅಥವಾ ಸಾಂಗ್ ಬಂದರೆ ಅದನ್ನು ದೊಡ್ಡಮಟ್ಟದಲ್ಲಿ ನೋಡಿ ಹಿಟ್ ಮಾಡುವುದು ಕಾಮನ್ ಆಗಿಬಿಟ್ಟಿದೆ. ಹಳೇ ದಾಖಲೆಗಳನ್ನು ಮುರಿದು ಹೊಸ ದಾಖಲೆಗಳನ್ನು ಬರೆದು ಕಾಲರ್ ಎಗರಿಸಿಕೊಂಡು ಓಡಾಡುತ್ತಾರೆ. ಕನ್ನಡದಲ್ಲಿ ಈಗ ಒಂದಕ್ಕಿಂತ ಒಂದು ದೊಡ್ಡ ಸಿನಿಮಾ ಬರ್ತಿದೆ. ಅದಕ್ಕೆ ತಕ್ಕಂತೆ ಅಭಿಮಾನಿಗಳ ಅಭಿಮಾನ ಪರಾಕಾಷ್ಠೆಗೆ ತಲುಪುತಿದೆ. 'ಕ್ರಾಂತಿ' ಸಿನಿಮಾ ಟ್ರೈಲರ್ ಹಿಟ್ ಮಾಡೋಕೆ ಡಿ ಬಾಸ್ ಡೈ ಹಾರ್ಡ್ ಫ್ಯಾನ್ಸ್ ಸಜ್ಜಾಗಿದ್ದಾರೆ.
"ಬಿರಿಯಾನಿ
ನಮ್ದು..
ಕ್ರಾಂತಿ
ನಿಮ್ದು"
:
ಒಂದಕ್ಕೊಂದು
ಬಿರಿಯಾನಿ
ಕೊಟ್ಟು
ದರ್ಶನ್
ಫ್ಯಾನ್ಸ್
ಸಂಭ್ರಮ!
ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಸೇರಿಸಿ ವಿ. ಹರಿಕೃಷ್ಣ 'ಕ್ರಾಂತಿ' ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಇದೇ ಶನಿವಾರ ಚಿತ್ರದ ಹೈವೋಲ್ಟೇಜ್ ಟ್ರೈಲರ್ ರಿಲೀಸ್ ಆಗಲಿದೆ. ಬೆಂಗಳೂರಿನಲ್ಲೇ ಟ್ರೈಲರ್ ಲಾಂಚ್ ಈವೆಂಟ್ ಕಳೆ ಕಟ್ಟಲಿದೆ.

ಟ್ರೈಲರ್ 24 ಗಂಟೆ ಟಾರ್ಗೆಟ್?
ನಟ ದರ್ಶನ್‌ಗೆ ಬಹಳ ದೊಡ್ಡ ಅಭಿಮಾನಿ ಬಳಗ ಇದೆ. ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿದ್ದಾರೆ. ಡಿ ಬಾಸ್ ನಟನೆಯ ಯಾವುದೇ ಸಿನಿಮಾ ಟ್ರೈಲರ್, ಸಾಂಗ್ ರಿಲೀಸ್ ಆದರೂ ದೊಡ್ಡಮಟ್ಟದಲ್ಲಿ ವೈರಲ್ ಆಗುತ್ತದೆ. ಅಭಿಮಾನಿಗಳು ಮುಗಿಬಿದ್ದು ನೋಡುತ್ತಾರೆ. ಅದನ್ನು ದೊಡ್ಡಮಟ್ಟದಲ್ಲಿ ಗೆಲ್ಲಿಸಲು ಪ್ರಯತ್ನಿಸುತ್ತಾರೆ. 'ಕ್ರಾಂತಿ' ಟ್ರೈಲರ್ ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದ್ದಂತೆ ಸಣ್ಣ ಕ್ರಾಂತಿಗೆ ಸಿದ್ಧವಾಗಿದ್ದಾರೆ. 24 ಗಂಟೆಗಳಲ್ಲಿ 5 ಲಕ್ಷಕ್ಕೂ ಲೈಕ್ಸ್, 1 ಕೋಟಿಗೂ ಅಧಿಕ ವೀವ್ಸ್ ಸಾಧಿಸುವಂತೆ ಮಾಡಬೇಕು ಎಂದು ಪಣ ತೊಟ್ಟಿದ್ದಾರೆ.

'ರಾಬರ್ಟ್' ಮೀರಿಸುತ್ತಾ 'ಕ್ರಾಂತಿ'?
24 ಗಂಟೆಗಳಲ್ಲಿ ದರ್ಶನ್ ನಟನೆಯ 'ರಾಬರ್ಟ್' ಸಿನಿಮಾ ಟ್ರೈಲರ್ ಮೂರುವರೆ ಲಕ್ಷ ಲೈಕ್ಸ್, 80 ಲಕ್ಷಕ್ಕೂ ಅಧಿಕ ವೀವ್ಸ್ ಗಳಿಸಿತ್ತು. ಅದನ್ನು ಮೀರಿಸಿ ಈ ಬಾರಿ ಹೊಸ ದಾಖಲೆ ಬರೆಯಲು ಫ್ಯಾನ್ಸ್ ಅಣಿಯಾಗಿದ್ಧಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಾ ಫ್ಯಾನ್ಸ್‌ಗೂ ಮಾಹಿತಿ ರವಾನಿಸುತ್ತಿದ್ದಾರೆ. ತರುಣ್ ಸುಧೀರ್ ನಿರ್ದೇಶನದ 'ರಾಬರ್ಟ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಅಭಿಮಾನಿಗಳ ಮನ ಗೆದ್ದಿತ್ತು.

'ರೋಣ'ನ ದಾಖಲೆ ಅಳಿಸಿ 'ಕ್ರಾಂತಿ'?
ಇತ್ತೀಚೆಗೆ ಕನ್ನಡ ಸಿನಿಮಾಗಳನ್ನು ಪರಭಾಷಿಕರು ಮೆಚ್ಚಿಕೊಳ್ಳುತ್ತಿದ್ದಾರೆ. ಭಾರೀ ನಿರೀಕ್ಷೆ ಮೂಡಿಸಿದ ಸಿನಿಮಾ ಟ್ರೈಲರ್‌ಗಳನ್ನು ಪರಭಾಷಿರಕರು ಮುಗಿಬಿದ್ದು ನೋಡುತ್ತಾರೆ. 24 ಗಂಟೆಗಳಲ್ಲಿ ಅತಿ ಹೆಚ್ಚು ಲೈಕ್ಸ್ ಗಿಟ್ಟಿಸಿದ ಕನ್ನಡ ಸಿನಿಮಾ ಟ್ರೈಲರ್‌ಗಳ ಲಿಸ್ಟ್‌ನಲ್ಲಿ KGF-2 ಟ್ರೈಲರ್ ಮೊದಲ ಸ್ಥಾನದಲ್ಲಿದೆ. 7 ಲಕ್ಷ 78 ಸಾವಿರಕ್ಕೂ ಅಧಿಕ ಲೈಕ್ಸ್ ಗಿಟ್ಟಿಸಿದ KGF-2 ಟ್ರೈಲರ್ ಮೊದಲ ಸ್ಥಾನದಲ್ಲಿದ್ದರೆ, 3 ಲಕ್ಷದ 83 ಸಾವಿರ ಲೈಕ್ಸ್ ಗಿಟ್ಟಿಸಿ 'ವಿಕ್ರಾಂತ್ ರೋಣ' 2ನೇ ಸ್ಥಾನದಲ್ಲಿದೆ. 777 ಚಾರ್ಲಿ 3 ಲಕ್ಷದ 54 ಸಾವಿರ ಲೈಕ್ಸ್ ಗಿಟ್ಟಿಸಿತ್ತು. 4ನೇ ಸ್ಥಾನದಲ್ಲಿರುವ 'ರಾಬರ್ಟ್'ಗೆ ಸಿಕ್ಕಿದ್ದು 3ಲಕ್ಷದ 52 ಸಾವಿರ ಲೈಕ್ಸ್. ಈಗ 'ಕ್ರಾಂತಿ' ಮೂಲಕ ಕೊನೆಪಕ್ಷ 'ರೋಣ'ನ ದಾಖಲೆ ಮುರಿಯುವ ಲೆಕ್ಕಾಚಾರ ನಡೀತಿದೆ.

ಜ. 26ಕ್ಕೆ ದರ್ಶನ್ ಕ್ರಾಂತಿ
'ಕ್ರಾಂತಿ' ಚಿತ್ರಕ್ಕಾಗಿ ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಪ್ರಚಾರ ಮಾಡುತ್ತಾ ಬಂದಿದ್ದಾರೆ. ಮೈಸೂರು, ಹೊಸಪೇಟೆ, ಹುಬ್ಬಳ್ಳಿಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ 3 ಹಾಡುಗಳನ್ನು ರಿಲೀಸ್ ಮಾಡಲಾಗಿತ್ತು. ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಟ್ರೈಲರ್ ರಿಲೀಸ್ ಮಾಡುವ ಸಾಧ್ಯತೆಯಿದೆ. ಕನ್ನಡ ಮಾತ್ರವಲ್ಲದೇ 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಕ್ರಾಂತಿ' ಸಿನಿಮಾ ತೆರೆಗೆ ಬರ್ತಿದೆ. ರಚಿತಾರಾಮ್, ರವಿಚಂದ್ರನ್, ಉಮಾಶ್ರೀ, ಸುಮಲತಾ ಅಂಬರೀಶ್ ಸೇರಿದಂತೆ ದೊಡ್ಡ ತಾರಾಗಣದಲ್ಲಿ ಚಿತ್ರದಲ್ಲಿದೆ. ಜನವರಿ 26ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ.