Just In
Don't Miss!
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Automobiles
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜಗ್ಗೇಶ್ ಆಡಿಯೋ ಕ್ಲಿಪ್ ವಿವಾದ: ನವರಸನಾಯಕನ ವಿರುದ್ಧ ಮುಗಿಬಿದ್ದ ದರ್ಶನ್ ಅಭಿಮಾನಿಗಳು
ನವರಸನಾಯಕ ಜಗ್ಗೇಶ್, ದರ್ಶನ್ ಹುಡುಗರ ಕುರಿತು ಮಾತನಾಡಿದ್ದಾರೆ ಎನ್ನುವ ಆಡಿಯೋ ಕ್ಲಿಪ್ ವಿವಾದ ಇನ್ನು ತಣ್ಣಗಾಗಿಲ್ಲ. ಡಿ ಬಾಸ್ ಅಭಿಮಾನಿಗಳನ್ನು ಕೆರಳಿಸಿದ ಈ ಆಡಿಯೋ ಕ್ಲಿಪ್ ವಿವಾದ ಮತ್ತೊಂದು ಹಂತಕ್ಕೆ ಹೋಗಿದೆ. ತೋತಾಪುರಿ ಚಿತ್ರೀಕರಣಕ್ಕೆಂದು ಸದ್ಯ ಮೈಸೂರಿನಲ್ಲಿ ಬೀಡುಬಿಟ್ಟಿರುವ ಜಗ್ಗೇಶ್ ವಿರುದ್ಧ ಡಿ ಬಾಸ್ ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಇಂದು (ಫೆಬ್ರವರಿ 22) ಬೆಳಗ್ಗೆ ಚಿತ್ರೀಕರಣ ಸೆಟ್ ಗೆ ಹೋಗಿದ್ದ ಜಗ್ಗೇಶ್ ದೊಡ್ಡ ಶಾಕ್ ಎದುರಾಗಿದೆ. ಮೇಕಪ್ ಹಾಕಿ ಶೂಟ್ ಗೆ ರೆಡಿಯಾಗಿ ಕುಳಿತಿದ್ದ ಜಗ್ಗೇಶ್ ಅವರನ್ನು ಡಿ ಬಾಸ್ ಅಭಿಮಾನಿಗಳು ಏಕಾಏಕಿ ಮುತ್ತಿಗೆ ಹಾಕಿ ತರಾಟೆ ತೆಗೆದುಕೊಂಡಿದ್ದಾರೆ. ಬಾಸ್ ಅಭಿಮಾನಿಗಳ ಬಗ್ಗೆ ಯಾಕೆ ಹೀಗೆಲ್ಲ ಮಾತನಾಡಿದ್ದೀರಿ, ಮೊದಲು ಕ್ಷಮೆ ಕೇಳಿ ಎಂದು ಪಟ್ಟುಹಿಡಿದ್ದಾರೆ. ಮುಂದೆ ಓದಿ..

ಜಗ್ಗೇಶ್ ವಿರುದ್ಧ ಮುಗಿ ಬಿದ್ದ ಅಭಿಮಾನಿಗಳು
ಶೂಟಿಂಗ್ ಸೆಟ್ ನಲ್ಲಿ ನೆಲದ ಮೇಲೆ ಕುಳಿತಿದ್ದ ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಿದ್ದ ಅಭಿಮಾನಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಗ್ಗೇಶ್ ಅವರಿಗೆ ಮಾತನಾಡಲು ಅವಕಾಶ ಕೊಡದೆ ಎಗರಾಡಿದ್ದಾರೆ. ಅದೇ ಗ್ಯಾಪ್ ನಲ್ಲಿ ಜಗ್ಗೇಶ್ ಮೊಬೈಲ್ ತೆಗೆದು ದರ್ಶನ್ ಗೆ ಕರೆ ಮಾಡಿದರು. ಆದರೆ ಎಷ್ಟೇ ಕಾಲ್ ಮಾಡಿದ್ರು ದರ್ಶನ್ ಕಡೆಯಿಂದ ಪ್ರತಿಕ್ರಿಯೆ ಸಿಗಲಿಲ್ಲ. ಗಾಬರಿಯಾದ ಜಗ್ಗೇಶ್ ಅಭಿಮಾನಿಗಳನ್ನು ಸಮಾಧಾನ ಮಾಡಲು ಮುಂದಾದರೂ ಜಗ್ಗೇಶ್ ಮಾತನ್ನು ಕೇಳಿಸಿಕೊಳ್ಳುವ ವ್ಯವದಾನ ಡಿ ಬಾಸ್ ಅಭಿಮಾನಿಗಳಿಗೆ ಇರಲಿಲ್ಲ.

ಆಡಿಯೋದಲ್ಲಿ ಇರುವ ಧ್ವನಿ ನನ್ನದಲ್ಲ ಎಂದ ಜಗ್ಗೇಶ್
ದರ್ಶನ್ ಮತ್ತು ತನ್ನ ವಿರುದ್ಧ ತಂದಿಡಲು ಹೀಗೆ ಮಾಡಿದ್ದಾರೆ ಎಂದು ಜಗ್ಗೇಶ್ ಕುಳಿತಲ್ಲೇ ಸಮರ್ಥನೆ ನೀಡುವ ಪ್ರಯತ್ನ ಮಾಡಿದರೂ ಸಮಾಧಾನ ಆಗದ ಅಭಿಮಾನಿಗಳು ಜಗ್ಗೇಶ್ ವಿರುದ್ಧ ದಿಕ್ಕಾರ ಕೂಗಿದ್ದಾರೆ. ಆಡಿಯೋದಲ್ಲಿ ಇರುವ ಧ್ವನಿ ತನ್ನದಲ್ಲ ಎಂದು ಜಗ್ಗೇಶ್ ಪರಿ ಪರಿಯಾಗಿ ಕೇಳಿಕೊಂಡರು, ಡಿ ಬಾಸ್ ಅಭಿಮಾನಿಗಳು ಕೋಪ ಕಮ್ಮಿಯಾಗಿಲ್ಲ.

ಒಬ್ಬ ಹಿರಿಯ ನಟನಿಗೆ ಮರ್ಯಾದೆ ಕೊಡೊದು ಹೀಗೇನಾ?
'ಜಗ್ಗೇಶ್ ಅಂದರೆ ನೀವೇ ತಾನೆ.. ಮತ್ತೊಬ್ಬ ಜಗ್ಗೇಶ್ ಇದ್ದಾರಾ..' ಎಂದು ಅಭಿಮಾನಿಗಳು ಒಮ್ಮೆಗೆ ಜಗ್ಗೇಶ್ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ. 'ಒಬ್ಬ ಹಿರಿಯನಿಗೆ ಹೀಗೆನಾ ಮರ್ಯಾದೆ ಕೊಡೊದು...' ಎಂದು ಜಗ್ಗೇಶ್ ಕೇಳಿಕೊಂಡರು ಅಭಿಮಾನಿಗಳ ಕೋಪ ತಣ್ಣಗಾಗಿರಲಿಲ್ಲ. ಕೊನೆಗೆ ದರ್ಶನ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿ, ದರ್ಶನ್ ಜೊತೆ ಚೆನ್ನಾಗೇ ಇದ್ದೀನಿ, ಇಬ್ಬರು ಮಾತನಾಡುತ್ತಿದೀವಿ ಎಂದು ಜಗ್ಗೇಶ್ ಕೇಳಿಕೊಂಡರು. ಬಳಿಕ ಡಿ ಬಾಸ್ ಅಭಿಮಾನಿಗಳು ಅಲ್ಲಿಂದ ಹೊರಟಿದ್ದಾರೆ.

ತಲೆಮಾಂಸ ಎಂದಿದ್ದ ಜಗ್ಗೇಶ್
'ನಮ್ಮ ಹತ್ರ ಇರೋರೆಲ್ಲ ಅಂಥವರೆನೇ. ಬಟ್... ದರ್ಶನ್ ಥರ ಅವರ ಥರ ಇದ್ದಾರಲ್ಲಾ? ಅವರ**** ತಲೆ ಮಾಂಸ ಕಳಿಸಿ ಅಣ್ಣಾ.. ನೂರ್ ಕುರಿ ಕಳಿಸಿ ಅಂತಣ್ಣಾ ಅನ್ನೋರು ಯಾರು ಇಲ್ಲ ನನ್ನ ಹತ್ರ...' ಜಗ್ಗೇಶ್ ಇನ್ಸ್ ಪೆಕ್ಟರ್ ವಿಕ್ರಂ ಸಿನಿಮಾದ ನಿರ್ಮಾಪಕ ವಿಖ್ಯಾತ್ ಜೊತೆ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಆಡಿಯೋ ದರ್ಶನ್ ಅಭಿಮಾನಿಗಳನ್ನು ಕೆರಳಿಸಿದೆ.