For Quick Alerts
  ALLOW NOTIFICATIONS  
  For Daily Alerts

  ಕ್ರಾಂತಿಗೆ ವಾಂತಿ ಮಾಡಿಸಿದವರಿಗೆ ಧನ್ಯವಾದ ಎಂದವನ ಮನೆಗೆ ದರ್ಶನ್ ಅಭಿಮಾನಿಗಳ ಮುತ್ತಿಗೆ

  By ಫಿಲ್ಮಿಬೀಟ್ ಡೆಸ್ಕ್
  |

  ಕ್ರಾಂತಿ ಚಿತ್ರತಂಡ ಚಿತ್ರದ ಎರಡನೇ ಹಾಡು ಬಿಡುಗಡೆ ಮಾಡಲು ಹೊಸಪೇಟೆಗೆ ಹೋದಾಗ ನಟ ದರ್ಶನ್ ಮೇಲೆ ಚಪ್ಪಲಿ ಎಸೆದದ್ದು ಸದ್ಯ ದರ್ಶನ್ ಅಭಿಮಾನಿಗಳನ್ನು ದೊಡ್ಡ ಮಟ್ಟಕ್ಕೆ ಕೆರಳಿಸಿದೆ.

  ಹೌದು, ಹೊಸಪೇಟೆಯಲ್ಲಿ ಹಾಡು ಬಿಡುಗಡೆ ಕಾರ್ಯಕ್ರಮದ ವೇದಿಕೆ ಮೇಲಿದ್ದ ದರ್ಶನ್ ಅವರಿಗೆ ಕಿಡಿಗೇಡಿಯೊಬ್ಬ ದೂರದಿಂದಲೇ ಚಪ್ಪಲಿ ಎಸೆದಿದ್ದಾನೆ. ನಟ ದರ್ಶನ್ ಮೇಲೆ ದರ್ಶನ್ ಅಭಿಮಾನಿಗಳ‌ ನಡುವೆಯೇ ಚಪ್ಪಲಿ ಎಸೆದಿರುವ ಆತ ಯಾರೆಂಬುದು ಮಾತ್ರ ಯಾರಿಗೂ ತಿಳಿಯಲೇ ಇಲ್ಲ. ಅತ್ತ ಚಪ್ಪಲಿ ಬಿದ್ದ ತಕ್ಷಣ ಕೋಪ ಮಾಡಿಕೊಳ್ಳದ ದರ್ಶನ್ 'ಇರಲಿ ಚಿನ್ನ ಪರವಾಗಿಲ್ಲ, ತಪ್ಪೇನಿಲ್ಲ' ಎಂದು ಹೇಳಿ ದೊಡ್ಡತನ ಮೆರೆದರು.

  ಆದರೆ ದರ್ಶನ್ ಅಭಿಮಾನುಗಳು‌ ಮಾತ್ರ ಸುಮ್ಮನಾಗಲಿಲ್ಲ. ತಮ್ಮ ನೆಚ್ಚಿನ ನಟನಿಗೆ ಚಪ್ಪಲಿ ಎಸೆದದ್ದು ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಯೇ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿ, ನಿಂದಿಸಿ ಆಕ್ರೋಶ ಹೊರಹಾಕಿದರು. ಚಿತ್ರರಂಗದ ಹಲವಾರು ನಟ ಹಾಗೂ ನಟಿಯರು ದರ್ಶನ್ ಬೆಂಬಲಕ್ಕೆ ನಿಂತು ಚಪ್ಪಲಿ ಎಸೆದ ಕಿಡಿಗೇಡಿ ವಿರುದ್ಧ ಕಿಡಿಕಾರಿದರು. ಅಷ್ಟೇ ಅಲ್ಲದೇ ದರ್ಶನ್ ಅವರಿಗೆ ಚಪ್ಪಲಿ ಎಸೆದದ್ದು ಸರಿ ಎಂದೂ ಸಹ ಕೆಲ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಈ ರೀತಿ ಪೋಸ್ಟ್ ಮಾಡಿದವರ ವಿರುದ್ಧ ಸದ್ಯ ದರ್ಶನ್ ಫ್ಯಾನ್ಸ್ ತಿರುಗಿ ಬಿದ್ದಿದ್ದು ಕ್ರಾಂತಿ ವಿವಾದದ ಬಗ್ಗೆ ಸಂಭ್ರಮದ ಪೋಸ್ಟ್ ಹಾಕಿದ್ದವರ ಮನೆಗೆ ಮುತ್ತಿಗೆ ಹಾಕಿದ್ದಾರೆ.

  ಮಧುಗಿರಿ ಮೋದಿ ಮನೆಗೆ ಮುತ್ತಿಗೆ

  ಮಧುಗಿರಿ ಮೋದಿ ಮನೆಗೆ ಮುತ್ತಿಗೆ

  ಬಿಜೆಪಿ ಹಾಗೂ ನರೇಂದ್ರ ಮೋದಿ ಅನುಯಾಯಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸದಾ ಬಿಜೆಪಿ ಪರ ಹಾಗೂ ಹಿಂದೂ ಧರ್ಮದ ಪರ ಮಾತನಾಡುವ ಮಧುಗಿರಿ ಮೋದಿ ಕ್ರಾಂತಿ ಚಿತ್ರದ ವಿರುದ್ಧವಾಗಿ ಸಾಲು ಸಾಲು ನೆಗೆಟಿವ್ ಪೋಸ್ಟ್ ಹಾಕಿದ್ದಾರೆ. ಅದರಲ್ಲೂ ಹೊಸಪೇಟೆ ವಿವಾದವಾದ ಬಳಿಕ ಅದನ್ನು ಸಂಭ್ರಮಿಸಿ ಹಾಕಿದ್ದರು. ಇದನ್ನು ಕಂಡು ಕೆರಳಿದ ದರ್ಶನ್ ಅಭಿಮಾನಿಗಳ ತಂಡ ದರ್ಶನ್ ಧ್ವಜ ಹಿಡಿದು ಮಧುಗಿರಿ ಮೋದಿ ಮನೆಗೆ ಮುತ್ತಿಗೆ ಹಾಕಿದ್ದಾರೆ ಹಾಗೂ ಆ ರೀತಿ ಪೋಸ್ಟ್ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ‌.

  ಆತ ಪೋಸ್ಟ್ ಮಾಡಿದ್ದೇನು?

  ಆತ ಪೋಸ್ಟ್ ಮಾಡಿದ್ದೇನು?

  ಕ್ರಾಂತಿ ಹೊಸಪೇಟೆ ವಿವಾದದ ಬಳಿಕ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಮಧುಗಿರಿ ಮೋದಿ "ಹೊಸಪೇಟೆಯಲ್ಲಿ ಕ್ರಾಂತಿಗೆ ವಾಂತಿ ಮಾಡಿಸಿದ ಅಪ್ಪು ಅಭಿಮಾನಿಗಳಿಗೆ ಧನ್ಯವಾದಗಳು. ಬಾಯ್ ಕಾಟ್ ಕ್ರಾಂತಿ ಯಶಸ್ವಿಯಾಗಿದೆ" ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕ್ರಾಂತಿ ಚಿತ್ರವನ್ನು ನೋಡಬಾರದು ಎಂದೂ ಸಹ ಹತ್ತಾರು ಪೋಸ್ಟ್ ಗಳನ್ನು ಈತ ಹಂಚಿಕೊಂಡಿದ್ದಾನೆ.

  ಇಬ್ಬರಿಂದಲೂ ಕ್ಷಮೆಗೆ ಒತ್ತಾಯ

  ಇಬ್ಬರಿಂದಲೂ ಕ್ಷಮೆಗೆ ಒತ್ತಾಯ

  ಇನ್ನು ಆತನ ಮನೆಗೆ ಮುತ್ತಿಗೆ ಹಾಕಿದ ದರ್ಶನ್ ಅಭಿಮಾನಿಗಳು ಈ ರೀತಿ ಯಾಕೆ ಪೋಸ್ಟ್ ಹಾಕಿದ್ದೀರ, ಅದು ತಪ್ಪು ದರ್ಶನ್ ಅವರನ್ನು ಕ್ಷಮೆ ಕೇಳಿ ಎಂದು ಆಗ್ರಹಿಸಿದ್ದರೆ, ಇದಕ್ಕೆ ಬಗ್ಗದ ಮಧುಗಿರಿ ಮೋದಿ ಅದೃಷ್ಟ ದೇವತೆ ಬಗ್ಗೆ ಕೆಟ್ಟದಾಗಿ ಮಾತನಾಡಿದ ನಿಮ್ಮ ನಟನಿಗೆ ಮೊದಲು ಕ್ಷಮೆ ಯಾಚಿಸಲು ಹೇಳಿ ಎಂದು ಪ್ರತ್ಯುತ್ತರ ನೀಡಿದ್ದಾರೆ.

  ಗೂಂಡಾಗಳಿಂದ ಮುತ್ತಿಗೆ ಎಂದು ಪೋಸ್ಟ್

  ಗೂಂಡಾಗಳಿಂದ ಮುತ್ತಿಗೆ ಎಂದು ಪೋಸ್ಟ್

  ಇನ್ನು ಮನೆಗೆ ಮುತ್ತಿಗೆ ಹಾಕಿದ ನಂತರವೂ ಮಧುಗಿರಿ ಮೋದಿ ಕ್ರಾಂತಿ ವಿರುದ್ಧ ತನ್ನ ಹೋರಾಟ ನಿಲ್ಲಿಸಿಲ್ಲ. ತನ್ನ ಮನೆಗೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿ ವಾಗ್ದಾಳಿ‌ ನಡೆಸಿದ ವಿಡಿಯೋವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ದರ್ಶನ್ ಅಭಿಮಾನಿಗಳು ಗೂಂಡಾಗಳು, ಅವರು ನೈತಿಕ ಪೊಲೀಸ್‌ಗಿರಿ ತೋರಿದ್ದಾರೆ ಎಂದು ಬರೆದುಕೊಂಡಿದ್ದಾರೆ. ‌

  English summary
  Darshan fans attacks BJP activist Madhugiri Modi as he posted against Kranti movie
  Wednesday, December 21, 2022, 9:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X