»   » ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಪ್ರತಿಭಟನೆ

ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಪ್ರತಿಭಟನೆ

Posted By:
Subscribe to Filmibeat Kannada
Producer Soorappa Babu
ಕನ್ನಡ ಚಿತ್ರರಂಗದ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಫಿಲಂ ಚೇಂಬರ್ ಮುಂದೆ ಶನಿವಾರ (ಜು.7) ಪ್ರತಿಭಟನೆ ಇಳಿದರು. ಮೀನಾ ತೂಗುದೀಪ ಅವರಲ್ಲಿ ಸೂರಪ್ಪ ಕ್ಷಮೆ ಕೋರಲು ಅವರೆಲ್ಲಾ ಆಗ್ರಹಿಸಿದರು.

ಸೂರಪ್ಪ ಬಾಬು ಅವರ ಪೋಸ್ಟರನ್ನು ಹರಿದು ಅದಕ್ಕೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ಬಳಿಕ ಪ್ರತಿಭಟನೆಕಾರರು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆವಿ ಚಂದ್ರಶೇಖರ್ ಹಾಗೂ ಕಾರ್ಯದರ್ಶಿ ಸಾ.ರಾ.ಗೋವಿಂದು ಅವರಿಗೆ ಮನವಿ ಪತ್ರವನ್ನು ದರ್ಶನ್ ಅಭಿಮಾನಿಗಳು ಸಲ್ಲಿಸಿದರು.

ಇದಕ್ಕೂ ಮುನ್ನ ಸೂರಪ್ಪ ಬಾಬು ಅವರು ನನ್ನಿಂದ ತಪ್ಪಾಗಿದೆ ಕ್ಷಮೆ ಕೋರುತ್ತಿದ್ದೇನೆ. ದರ್ಶನ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಅವರಲ್ಲೂ ಕ್ಷಮೆ ಕೋರುತ್ತೇನೆ ಎಂದರು. ಬಳಿಕ ಅವರು ಪ್ರತಿಕ್ರಿಯಿಸುತ್ತಾ ಇದು ನನ್ನ ವಿರುದ್ಧ ನಡೆದ ಪಿತೂರಿ. ಇದರಲ್ಲಿ ಮೂರನೇ ವ್ಯಕ್ತಿಯ ಕೈವಾಡವಿದೆ ಎಂದಿದ್ದಾರೆ.

ಈ ಘಟನೆ ನಡೆದದ್ದು ಮೂರು ವರ್ಷಗಳ ಹಿಂದೆ. ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ 'ಪೃಥ್ವಿ' ಚಿತ್ರೀಕರಣದ ವೇಳೆ ಈ ಘಟನೆ ನಡೆದದ್ದು. ಈ ಘಟನೆಯಲ್ಲಿ ನಿರ್ಮಾಪಕ ಹಾಗೂ ವಿತರಕ ಎನ್ ಕುಮಾರ್ ಅವರ ಕೈವಾಡವಿದೆ ಎಂದು ಅವರು ನೇರಾನೇರ ಆರೋಪಿಸಿದ್ದಾರೆ.

"ಇಷ್ಟು ದಿನ ಇಲ್ಲದ ಈ ವಿಡಿಯೋ ಈಗ ಏಕಾಏಕಿ ಹೊರಬರಲು ಏನು ಕಾರಣ. ಇದರ ಹಿಂದೆ ಮೂರನೇ ವ್ಯಕ್ತಿಯ ಕೈವಾಡವಿದೆ." ಎಂದಿದ್ದಾರೆ. ದರ್ಶನ್ ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಯೂಟ್ಯೂಬ್ ಸೇರುವ ಮೂಲಕ ಈ ವಿವಾದ ತಲೆಯೆತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ಮೂರು ವರ್ಷಗಳ ಹಿಂದಿನ ತಪ್ಪು. ಈಗ ಮತ್ತೆ ತರುತ್ತಿರುವುದು ಮತ್ತೊಂದು ದೊಡ್ಡ ತಪ್ಪು. ಇದು ಅಷ್ಟು ದೊಡ್ಡ ವಿಚಾರವೇನಲ್ಲ. ಇದನ್ನು ಬೆಳೆಸುವುದು ಅಷ್ಟು ಒಳ್ಳೆಯದಲ್ಲ. ಇದಕ್ಕೆ ತೆರೆ ಎಳೆಯುವುದೇ ಸೂಕ್ತ ಎಂದಿದ್ದಾರೆ.

ಬಾಬು ಅವರು ತಪ್ಪು ಮಾಡಿದ್ದಾರೆ. ಅವರನ್ನು ದರ್ಶನ್ ಮನೆಗೆ ಕರೆದುಕೊಂಡು ಹೋಗಿ ಅವರಲ್ಲಿ ಕ್ಷಮೆಯಾಚಿಸುತ್ತೇವೆ. ನಿರ್ಮಾಪಕರ ಸಂಘ ಈ ಕೆಲಸ ಮಾಡುತ್ತದೆ. ಅದು ಬಿಟ್ಟು ಬಾಬು ಅವರನ್ನು ಗಲ್ಲಿಗೆ ಹಾಕಿ ಎಂದು ಹೇಳಲು ಆಗುತ್ತದೆಯೇ? ಎಂದಿದ್ದಾರೆ ಮುನಿರತ್ನ. (ಏಜೆನ್ಸೀಸ್)

English summary
Challenging Star Darshan fans protest against Kannada film producer Soorappa Babu in front of KFCC office on 7th July Saturday in Bangalore. The producer has reportedly been scolding a Darshan's father Toogudeepa Srinivas, who was a great actor of Kannada films.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada