Don't Miss!
- Technology
ಒನ್ಪ್ಲಸ್ ನಾರ್ಡ್ ಸ್ಮಾರ್ಟ್ವಾಚ್ ಬೆಲೆ ಇಳಿಕೆ; ಅಗ್ಗದ ದರದಲ್ಲಿ ನಿಮ್ಮ 'ಕೈ'ಗೆ!
- Lifestyle
Shani Asta 2023 : ಶನಿ ಅಸ್ತ 2023: ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ಹಾಗೂ ಪರಿಹಾರ
- News
₹50 ಲಕ್ಷ ವೆಚ್ಚದಲ್ಲಿ ರಸ್ತೆ ದುರಸ್ತಿ: ಮೂರೇ ದಿನಕ್ಕೆ ಕಳಪೆ ಕಾಮಗಾರಿ ಬಯಲು
- Sports
Axar Patel Marriage: ಚಿತ್ರಗಳು: ಮೇಹಾ ಪಟೇಲ್ ಕೈಹಿಡಿದ ಭಾರತೀಯ ಕ್ರಿಕೆಟಿಗ ಅಕ್ಷರ್ ಪಟೇಲ್
- Finance
ಹಿಂಡೆನ್ಬರ್ಗ್ ವರದಿ ಎಫೆಕ್ಟ್: ಅದಾನಿ ಸ್ಟಾಕ್ ಶೇ.20ರಷ್ಟು ಕುಸಿತ!
- Automobiles
ಭಾರತದಲ್ಲಿ ಮತ್ತೆ ಪ್ರಾಬಲ್ಯ ಸಾಧಿಸಲು ಹೊಸ ರೂಪದಲ್ಲಿ ಬಿಡುಗಡೆಯಾಗಲಿದೆ ರೆನಾಲ್ಟ್ ಡಸ್ಟರ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೇ ಬಾಸ್ ಕೇಡಿ ಬಾಸ್ ಎಂದು ಲೈವ್‌ಗೆ ಬಂದ ಅಹೋರಾತ್ರಿ ವಿರುದ್ಧ ತಿರುಗಿಬಿದ್ದ ಡಿ ಬಾಸ್ ಫ್ಯಾನ್ಸ್!
ಸ್ಯಾಂಡಲ್‌ವುಡ್ ನಟರಿಗೆ ಅಹೋರಾತ್ರ ದುಸ್ವಪ್ನದಂತೆ ಕಾಡುತ್ತಿದ್ದಾರೆ. ಇಷ್ಟು ದಿನ ಕಿಚ್ಚ ಸುದೀಪ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ತಿರುಗಿಬೀಳುತ್ತಿದ್ದರು. ಈಗ ಅದು ದರ್ಶನ್ ಕಡೆ ವಾಲಿದೆ.
ಇದೇ ಮೂರು ದಿನಗಳ ಹಿಂದೆ ಅಹೋರಾತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿಕೆ ವಿರುದ್ಧ ತಿರುಗಿಬಿದ್ದರು. ಅದೃಷ್ಟ ದೇವತೆ ಬಗ್ಗೆ ದರ್ಶನ್ ಆಡಿದ ಮಾತಿಗೆ ಕಿಡಿ ಕಾರಿದ್ದ ಅಹೋರಾತ್ರ ವಿಡಿಯೋ ಮಾಡಿ ಬಿಟ್ಟಿದ್ದರು. ಇದು ದರ್ಶನ್ ಅಭಿಮಾನಿಗಳ ನಿದ್ದೆ ಕೆಡಿಸಿತ್ತು.
ಇದೇ ವಿಚಾರವಾಗಿ ಮತ್ತೆ ಲೈವ್‌ಗೆ ಬಂದಿದ್ದ ಅಹೋರಾತ್ರಗೆ ದರ್ಶನ್ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಫೋನ್ ಕರೆಗಳನ್ನು ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಅದರೂ ಅಹೋರಾತ್ರ ನಟ ದರ್ಶನ್ ವಿರುದ್ಧ ಆರೋಪಗಳನ್ನು ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ. ಅಷ್ಟಕ್ಕೂ ಅಹೋರಾತ್ರ ಲೈವ್‌ಗೆ ಬಂದಾಗ ಏನಾಯ್ತು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಅಹೋರಾತ್ರ ದರ್ಶನ ಹಿಂದೆ ಬಿದ್ದಿದ್ಯಾಕೆ?
ಕಿಚ್ಚ ಸುದೀಪ್ ರಮ್ಮಿ ಜಾಹೀರಾತಿನ ಬಗ್ಗೆ ಕಿಡಿಕಾರಿ ಅವರ ಅಭಿಮಾನಿಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಈಗ ಅಹೋರಾತ್ರ ದರ್ಶನ್ ಫ್ಯಾನ್ಸ್ ಅನ್ನು ಎದುರು ಹಾಕಿಕೊಂಡಿದ್ದಾರೆ. ದರ್ಶನ್ ಸಂದರ್ಶನವೊಂದರಲ್ಲಿ ಅದೃಷ್ಟ ಲಕ್ಷ್ಮಿಯನ್ನು ಬೆತ್ತಲೆ ಮಾಡಿ ಮನೆಯಲ್ಲೇ ಇಟ್ಟುಕೊಳ್ಳುವ ಬಗ್ಗೆ ಮಾತಾಡಿದ್ದರು. ಆ ವಿಚಾರವಾಗಿ ಅಹೋರಾತ್ರ ಕಮೆಂಟ್‌ಗಳನ್ನು ಮಾಡಿದ್ದರು. ಈ ವೇಳೆ ಅವರ ಅಭಿಮಾನಿಗಳಿಗೂ ಬೈದಿದ್ದರು. ಅಲ್ಲಿಂದ ಶುರುವಾಗಿದ್ದು, ಇಂದಿಗೂ ನಡೆಯುತ್ತಲೇ ಇದೆ. ಇದೇ ವಿಚಾರವಾಗಿ ಲೈವ್‌ಗೆ ಬಂದಿದ್ದ ಅಹೋರಾತ್ರ ನಟ ದರ್ಶನ್ ಅಭಿಮಾನಿಗಳ ಬ್ಯಾಕ್ ಟು ಬ್ಯಾಕ್ ಕರೆಗೆ ಸುಸ್ತಾಗಿ ಹೋಗಿದ್ದಾರೆ.

ಇವರೆಲ್ಲ ನೆಗೆಟಿವ್ ಪ್ರಾಡಕ್ಟ್‌ಗಳು
ದರ್ಶನ್ ಅಭಿಮಾನಿಗಳು ಎದುರು ಹಾಕಿಕೊಂಡಲ್ಲಿಂದ ಅಹೋರಾತ್ರಗೆ ಬ್ಯಾಕ್ ಟು ಬ್ಯಾಕ್ ಕರೆಗಳು ಬರುತ್ತಿವೆ. ಫೋನ್‌ನಲ್ಲಿ ಬೇರೆ ಆಕ್ಟಿವಿಟಿ ಮಾಡೋಕೆ ಸಾಧ್ಯವಾಗದಷ್ಟು ಕರೆಗಳು ಬರುತ್ತಿವೆ. ಇದನ್ನು ಲೈವ್‌ಗೆ ಬಂದು ತೋರಿಸಿದ್ದಾರೆ. ಈ ವಿಡಿಯೋ ಕೂಡ ಈಗ ವೈರಲ್ ಆಗುತ್ತಿದ್ದು, ಆ ವಿಡಿಯೋದಲ್ಲಿ ಹೀಗೆ ಹೇಳಿದ್ದಾರೆ. " ಬ್ಯಾಕ್ ಟು ಬ್ಯಾಕ್ ಫೋನ್‌ಗಳು ಬರುತ್ತಿವೆ. ನಾನು ಫೋಸ್ ರಿಸೀವ್ ಮಾಡದ ಈ ನಂಬರ್‌ಗಳೆಲ್ಲಾ ಸಮಾಜದಲ್ಲಿ ಇವರು ರೆಡಿ ಮಾಡಿರುವ ನೆಗೆಟಿವ್ ಪ್ರಾಡಕ್ಟ್‌ಗಳು. ಇವರೆಲ್ಲ ಹೆಣ್ಣು ನಿಂದಕರು. ಬಾಯಿ ಬಿಟ್ಟರೆ ಅಮ್ಮ ಅಕ್ಕ ಅಂತ ಮಾತಾಡುತ್ತಾರೆ." ಅಂತ ಅಹೋರಾತ್ರ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

'ಬಾಲಕಿಯ ಅತ್ಯಾಚಾರ ತಡೆಯೋಕೆ ಆಗಲಿಲ್ಲ'
" ಇಷ್ಟೆಲ್ಲಾ ಮಾತಾಡುತ್ತಾನೆ ದರ್ಶನ್. ಊರೆಲ್ಲಾ ಜನರನ್ನು ಇಟ್ಕೊಂಡಿದ್ದಾನೆ. ಅವರೋ ಕೊಲೆಗಳನ್ನು ಮಾಡಿಸುವ ಪ್ರಯತ್ನವನ್ನೆಲ್ಲಾ ಮಾಡಿಸುತ್ತಿದ್ದಾರೆ . 100 ಹೆಜ್ಜೆ ಇಟ್ಟರೆ ಮುಗಿಯುವಂತಹ ಫಾರ್ಮ್ ಹೌಸ್‌ನಲ್ಲಿ ನಡೆದ 10 ವರ್ಷದ ಬಾಲಕಿಯ ಅತ್ಯಾಚಾರವನ್ನು ತಡೆಯೋಕೆ ಆಗಲಿಲ್ಲ. ಮಾತೆತ್ತಿದರೆ ಕೋರ್ಟ್‌ಗೆ ಕೇಸ್ ಹಾಕಿಸಿದ್ದೀನಿ. 43 ವರ್ಷ ಜೈಲು ಹಾಕಿಸಿದ್ದೀನಿ ಅಂತಾನೇ ವಿನ: ಆಗದ ಹಾಗೆ ನೋಡಿಕೊಳ್ಳುವುದಕ್ಕೆ ಆಗಲಿಲ್ಲ. ಇವರೆ ದೊಡ್ಡವರೆಲ್ಲಾ ಕುಡಿದು ಅವ್ಯವಹಾರಗಳನ್ನು ಮಾಡುತ್ತಿದ್ದರೆ, ಅಲ್ಲಿ ಇರೋರಿಗೆ ಪ್ರಚೋದನೆಗಳಾಗುತ್ತೆ. ತಡೆಯೋಕೆ ಆಗದೆ ಇರೋದಕ್ಕೆ ಪಶ್ಚಾತಾಪ ಪಡೆಬೇಕು. ತಲೆ ತಗ್ಗಿಸಬೇಕು. ಅವರ ಅಭಿಮಾನಿಗಳು ಮಾಡುತ್ತಿರುವುದು ಇವರ ಅಪ್ಪ. ಅವರ ಆಡೋ ಮಾತುಗಳು ಹೆಣ್ಣು ನಿಂದನೆಗಳು, ಇವರ ಬಾಸ್ ಹೆಸರು ಹೇಳಿಕೊಂಡು ಇವರು ಮಾಡುತ್ತಿರುವ ವಿಕೃತ ಕಮೆಂಟ್ಸ್, ಪ್ರತಿಯೊಂದು ಸಾಂವಿದಾನಿಕವಾಗಿ ಶಿಕ್ಷಾರ್ಹವಾಗಿದೆ." ಎಂದು ಲೈವ್‌ನಲ್ಲಿ ಅಹೋರಾತ್ರ ಹೇಳಿದ್ದಾರೆ.

'ಕೋರ್ಟ್‌ಗೆ ಅಲೆಸುತ್ತೇನೆ'
" ಅವತ್ತು ಕಿಚ್ಚ ಸುದೀಪ್ ಅಭಿಮಾನಿಗಳು ಮಾಡಿದ್ದಕ್ಕಿಂತ ಮೀರಿ ಇವರು ಮಾಡುತ್ತಿದ್ದಾರೆ. ಹೆಣ್ಣು ನಿಂದನೆ ಎಷ್ಟು ವಿಕೃತ ಅಂದರೆ, ಅಹೋರಾತ್ರ ಮನಸ್ಸು ಮಾಡಿದರೆ, ಅನಿಯಮಿತವಾಗಿ ಕೋರ್ಟ್ ಅಲೆದು ಜೈಲು ಸೇರಬೇಕಾಗುತ್ತೆ. ಕಾನೂನು ಇದ್ದರೂ ಇವರ ಮಾತುಗಳಲ್ಲೇ ಅತ್ಯಾಚಾರ ಮಾಡುತ್ತಿದ್ದಾರೆ." ಎಂದು ಆಹೋರಾತ್ರ ಎಚ್ಚರಿಕೆ ನೀಡಿದ್ದಾರೆ.