»   » ಬಾಹುಬಲಿ 'ಕಾಲಕೇಯ'ನ ಜೊತೆ ದರ್ಶನ್ ಕಾಳಗ

ಬಾಹುಬಲಿ 'ಕಾಲಕೇಯ'ನ ಜೊತೆ ದರ್ಶನ್ ಕಾಳಗ

Written By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್, 'ಬಾಹುಬಲಿ' ಚಿತ್ರದಲ್ಲಿ 'ಕಾಲಕೇಯ'ನ ಪಾತ್ರ ಮಾಡಿದ್ದ ಪ್ರಭಾಕರ್ ಜೊತೆ ದೊಡ್ಡ ಕಾಳಗಕ್ಕೆ ಸಜ್ಜಾಗಿದ್ದಾರೆ.

ತರುಣ್ ಸುದೀರ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ 'ಚೌಕ' ಚಿತ್ರದಲ್ಲಿ ದರ್ಶನ್ ಹಾಗೂ ಪ್ರಭಾಕರ್ ಮುಖಾಮುಖಿಯಾಗುತ್ತಿದ್ದಾರೆ.[ದ್ವಾರಕೀಶ್ 'ಚೌಕ'ದ ಪ್ರತಿಭೆಗಳತ್ತ ಒಂದು ಇಣುಕು ನೋಟ]

Darshan Fight with Kalakeya fame Prabhakar in Chowka Movie

ಹೌದು, 'ಚೌಕ' ಚಿತ್ರದಲ್ಲಿ ನಟ ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರಿಗಾಗಿ ಒಂದು ಸ್ಪೆಷಲ್ ಫೈಟ್ ದೃಶ್ಯವನ್ನ ಮಾಡಲಾಗಿದೆ. ಈ ಫೈಟ್ ನಲ್ಲಿ ದರ್ಶನ್ ಹಾಗೂ ಪ್ರಭಾಕರ್ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ದರ್ಶನ್ ಹಾಗೂ ಪ್ರಭಾಕರ್ ನಡುವಿನ ಫೈಟಿಂಗ್ ದೃಶ್ಯವನ್ನ ಚಿತ್ರೀಕರಿಸಿಲಾಗುತ್ತಿದ್ದು, 2 ಸೀನ್ ಗಳ ಶೂಟಿಂಗ್ ಮುಗಿದಿದೆ.

Darshan Fight with Kalakeya fame Prabhakar in Chowka Movie

ಸ್ಯಾಂಡಲ್ ವುಡ್ ನಲ್ಲಿ ಮೊದಲ ಬಾರಿಗೆ ಇಂತಹದೊಂದು ಫೈಟ್ ಸೀನ್ ಮಾಡುತ್ತಿದ್ದು, ಇದು ಕನ್ನಡ ಚಿತ್ರರಂಗದಲ್ಲೇ ದೊಡ್ಡ ಆಕ್ಷನ್ ದೃಶ್ಯವಾಗಲಿದೆಯಂತೆ. ಈ ದೃಶ್ಯಕ್ಕಾಗಿ ಬರೋಬ್ಬರಿ 50 ಕ್ಯಾಮೆರಾಗಳನ್ನ ಬಳಸಲಾಗುತ್ತಿದ್ದು, ಸುಮಾರು 25 ನುರಿತ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರಂತೆ.

Darshan Fight with Kalakeya fame Prabhakar in Chowka Movie

ಈ ಹಿಂದೆ ತಮಿಳಿನ 'ಅನ್ನಿಯನ್' ಚಿತ್ರದ ಹಾಡೊಂದರಲ್ಲಿ ನಿರ್ದೇಶಕ ಶಂಕರ್, ಈ ರೀತಿಯ ಟೆಕ್ನಾಲಜಿಯನ್ನ ಬಳಿಸಿಕೊಂಡಿದ್ದರು. ಈಗ ಅದೇ ಟೆಕ್ನಾಲಜಿ ಬಳಿಸಿಕೊಂಡು 'ಚೌಕ' ಚಿತ್ರದಲ್ಲಿ ಈ ಫೈಟ್ ಶೂಟ್ ಮಾಡಲಾಗುತ್ತಿದೆ ಎನ್ನುತ್ತಿದ್ದಾರೆ ನಿರ್ದೇಶಕ ತರುಣ್ ಸುದೀರ್.['ಚೌಕ'ದ ಮೊಹಮ್ಮದ್ ಅನ್ವರ್ ಗೆ 'ಬೇಗಂ' ಆಗ್ತಾರಾ ದೀಪಾ ಸನ್ನಿಧಿ?]

Darshan Fight with Kalakeya fame Prabhakar in Chowka Movie

ಪ್ರಭಾಕರ್ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಅಭಿನಯಿಸುತ್ತಿದ್ದು, 6.4 ಅಡಿ ಎತ್ತರವಿದ್ದಾರೆ. ಈಗಾಗಲೇ ಸಾಕಷ್ಟು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದ ಪ್ರಭಾಕರ್, 'ಬಾಹುಬಲಿ' ಚಿತ್ರದ ನಂತರ 'ಜಿಬ್ರಷ್' ಭಾಷೆಯ ಮೂಲಕ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದರು.

Darshan Fight with Kalakeya fame Prabhakar in Chowka Movie

ಅಂದ್ಹಾಗೆ, 'ಚೌಕ' ದ್ವಾರಕೀಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ 50ನೇ ಚಿತ್ರ. ಇದೇ ಮೊದಲ ಭಾರಿಗೆ ಒಂದೇ ಚಿತ್ರಕ್ಕೆ ಐವರು ಛಾಯಾಗ್ರಾಹಕರು, ಐವರು ಸಂಭಾಷಣೆಕಾರರು, ಐವರು ಸಂಗೀತ ನಿರ್ದೇಶಕರು, ಐವರು ಕಲಾ ನಿರ್ದೇಶಕರು ಸೇರಿದಂತೆ ಒಟ್ಟು 25 ಜನ ತಂತ್ರಜ್ಞರು ಈ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ.

Darshan Fight with Kalakeya fame Prabhakar in Chowka Movie

ಪ್ರಜ್ವಲ್ ದೇವರಾಜ್, ಲವ್ಲಿ ಸ್ಟಾರ್ ಪ್ರೇಮ್, ದೂದ್ ಪೇಡಾ ದಿಗಂತ್, ವಿಜಯ ರಾಘವೇಂದ್ರ, ಚಿತ್ರದ ನಾಯಕರಾಗಿದ್ದು, ನಟಿ ಭಾವನ, ಪ್ರಿಯಾಮಣಿ, ದೀಪಾ ಸನ್ನಿಧಿ, ಮತ್ತು ಐಂದ್ರಿತಾ ರೇ ಇವರಿಗೆ ನಾಯಕಿಯರಾಗಿ ಜೊತೆಯಾಗಿದ್ದಾರೆ. ಸದ್ಯ, ಬಹುತೇಕ ಶೂಟಿಂಗ್ ಕಂಪ್ಲೀಟ್ ಮಾಡಿರುವ 'ಚೌಕ' ಟ್ರೈಲರ್ ಹಾಗೂ ಹಾಡುಗಳನ್ನ ಬಿಡುಗಡೆ ಮಾಡುವ ತಯಾರಿಲ್ಲಿದೆ.[50ನೇ ಚಿತ್ರದಲ್ಲಿ ಸಿನಿರಸಿಕರಿಗೆ ಮೋಡಿ ಮಾಡಲಿದ್ದಾರೆ ದ್ವಾರಕೀಶ್]

English summary
Baahubali fame Prabhakar, Popularly known as Kalakeya, it will be his first foray into Sandalwood. challenging star darshan face with prabhakar in major fight sequence in 'Chowka' Movie. darshan was playing special role in chowka. the movie directed by tharun sudheer and produce under the dwarakish Production.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada