»   » ಚಾಲೆಂಜಿಂಗ್ ಸ್ಟಾರ್ ಹೊಸ ಚಿತ್ರದ ಹೆಸರು ಅಂಬರೀಶ್

ಚಾಲೆಂಜಿಂಗ್ ಸ್ಟಾರ್ ಹೊಸ ಚಿತ್ರದ ಹೆಸರು ಅಂಬರೀಶ್

Posted By:
Subscribe to Filmibeat Kannada

ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವೆ ಒಳ್ಳೆಯ ಸ್ನೇಹಸಂಬಂಧವಿದೆ. ಈಗ ಇವರಿಬ್ಬರ ಗೆಳೆತನವನ್ನು ತೆರೆಗೆ ತರುವ ಪ್ರಯತ್ನವನ್ನು ಮಾಡುತ್ತಿದ್ದಾರೆ ನಿರ್ದೆಶಕ ಮಹೇಶ್ ಸುಖಧರೆ. ದರ್ಶನ್ ಹೊಸ ಚಿತ್ರಕ್ಕೆ 'ಅಂಬರೀಶ್' ಎಂದು ಹೆಸರಿಡಲಾಗಿದೆ.

ಬಹುಶಃ ಈ ಚಿತ್ರ 2013ರ ಜನವರಿಯಲ್ಲಿ ಸೆಟ್ಟೇರುವ ಸಾಧ್ಯತೆಗಳಿವೆ. ಈ ಚಿತ್ರಕ್ಕೆ 'ಭೈರವ ಮತ್ತು ಗುರು' ಎಂದು ಹೆಸರಿಡಲು ಚಿಂತಿಸಿದ್ದರಂತೆ. ಆದರೆ ಟೈಟಲ್ ಅಷ್ಟು ಸರಿ ಹೊಂದಲ್ಲ ಎಂದು 'ಅಂಬರೀಶ್' ಹೆಸರನ್ನೇ ಅಂತಿಮಗೊಳಿಸಿದ್ದಾರೆ ನಿರ್ದೇಶಕರು.

ಈ ಚಿತ್ರದ ಬಗ್ಗೆ ಅಂಬರೀಶ್ ಅವರನ್ನೂ ಭೇಟಿ ಮಾಡಿ ಸೂಚನೆ ಸಲಹೆಗಳನ್ನು ತೆಗೆದುಕೊಂಡಿದ್ದಾರೆ. ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು ಚಿತ್ರದಲ್ಲಿ ಅತಿಥಿ ಪಾತ್ರವನ್ನು ಪೋಷಿಸುವುದಾಗಿ ಭರವಸೆ ನೀಡಿದ್ದಾರೆ. 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ ಬಳಿಕ 'ಅಂಬರೀಶ್' ಚಿತ್ರವು ದರ್ಶನ್ ವೃತ್ತಿಜೀವನದಲ್ಲಿ ಮತ್ತೊಂದು ಮೈಲುಗಲ್ಲಾಗಿ ನಿಲ್ಲಲಿದೆ ಎನ್ನುತ್ತಾರೆ ಸುಖಧರೆ.

ಈಗಾಗಲೆ ಅಂಬರೀಶ್ ಹಾಗೂ ದರ್ಶನ್ ಇಬ್ಬರೂ 'ಬುಲ್ ಬುಲ್' ಚಿತ್ರದಲ್ಲಿ ಅಭಿನಯಿಸಿದ್ದಾರೆ. ಎಂ.ಡಿ.ಶ್ರೀಧರ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ತೆಲುಗಿನ ಯಶಸ್ವಿ ಚಿತ್ರ 'ಡಾರ್ಲಿಂಗ್' ರೀಮೇಕ್. ಈಗ ಇವರಿಬ್ಬರ ರಿಯಲ್ ಲೈಫ್ ಸ್ಟೋರಿ ರೀಲ್ ಗೆ ಬರುತ್ತಿದೆ. (ಏಜೆನ್ಸೀಸ್)

English summary
Challenging Star Darshan's forthcoming film titled as Ambarish directed by Mahesh Sukhadhare. The bond between two friends in the movie is similar to the real-life friendship shared by Ambareesh and Darshan in Kannada cinema.
Please Wait while comments are loading...