For Quick Alerts
  ALLOW NOTIFICATIONS  
  For Daily Alerts

  ಕೊಟ್ಟಿದ್ದು ಒಂದು ಸಂಭಾವನೆ, ಮಾಡಿಸಿದ್ದು ಎರಡು ಚಿತ್ರದ ಕೆಲಸ: ದರ್ಶನ್

  |
  Kurukshetra Kannada Movie: ಕುರುಕ್ಷೇತ್ರ ವಿಚಾರವಾಗಿ ಮಾತನಾಡಿದ ದಾಸ | FILMIBEAT KANNADA

  ಒಂದು ಸಿನಿಮಾ ರಿಲೀಸ್ ಆಗುವರೆಗೂ ಇನ್ನೊಂದು ಚಿತ್ರದ ಬಗ್ಗೆ ಮಾತಾಡಲ್ಲ ನಟ ದರ್ಶನ್. ಇನ್ನು ತನ್ನ ಸಿನಿಮಾಗಳು ಅಂದ್ರೆ ಅಷ್ಟೇ ಕಮಿಟ್ ಮೆಂಟ್. ಶೂಟಿಂಗ್, ಡಬ್ಬಿಂಗ್ ಹೇಳಿದ ಸಮಯಕ್ಕೆ ಮುಗಿಸಿ ಕೊಡುವ ದಾಸ ರಿಲೀಸ್ ವಿಚಾರವನ್ನ ನಿರ್ಮಾಪಕರಿಗೆ ಬಿಟ್ಟುಬಿಡುತ್ತಾರೆ.

  ಹಾಗಾಗಿ, ಕುರುಕ್ಷೇತ್ರ ಸಿನಿಮಾ ಚಿತ್ರೀಕರಣ ಹಾಗೂ ಡಬ್ಬಿಂಗ್ ಮುಗಿಸಿ ಬಹಳ ದಿನವಾದರೂ ಬಿಡುಗಡೆಯಾಗಿಲ್ಲ. ಯಾಕಂದ್ರೆ, ಮುನಿರತ್ನ ಅವರಿಗೆ ಇಷ್ಟ ಆಗುವರೆಗೂ ಜನರಿಗೆ ಕುರುಕ್ಷೇತ್ರ ತೋರಿಸಲ್ಲ ಎಂದಿದ್ದರು. ಅದರಂತೆ ಎಲ್ಲವನ್ನ ರೆಡಿ ಮಾಡಿ ಈಗ ತೆರಮೇಲೆ ತರುತ್ತಿದ್ದಾರೆ.

  ಕನ್ನಡದ‌ ಬಳಿಕ ಇತರ ಭಾಷೆಗಳಲ್ಲಿ ಬರ್ತಿದೆ 'ಕುರುಕ್ಷೇತ್ರ' ಟ್ರೇಲರ್

  ಈ ಮಧ್ಯೆ ನಟ ದರ್ಶನ್ ಅವರು ಮುನಿರತ್ನ ಮೇಲೆ ಒಂದು ಆರೋಪ ವರಿಸಿದ್ದಾರೆ. ''ಕುರುಕ್ಷೇತ್ರ ಕಲಾವಿದರಿಗೆ ಒಂದು ಸಿನಿಮಾದ ಸಂಭಾವನೆ ಕೊಟ್ಟು, ಎರಡು ಚಿತ್ರದ ಕೆಲಸ ಮಾಡಿಸಿದ್ದಾರೆ'' ಎಂದು ನಿರ್ಮಾಪಕರ ಕಾಲೆಳೆದರು.

  ಅಂದ್ರೆ ಕುರುಕ್ಷೇತ್ರ ಸಿನಿಮಾ 2ಡಿ ಹಾಗೂ 3ಡಿ ಯಲ್ಲಿ ತಯಾರು ಮಾಡಿದ್ದು, ಶೂಟಿಂಗ್ ಸಮಯದಲ್ಲೇ ಎಲ್ಲ ಕಲಾವಿದರು ಎರಡು ಸಲ ಅಭಿನಯಿಸಬೇಕಿತ್ತಂತೆ. ಹಾಗೆ ಡಬ್ಬಿಂಗ್ ಮಾಡಿದಾಗಲು ಎರಡೂ ಸಲ ಅಂದ್ರೆ 2ಡಿಗೆ ಒಂದು ಸಲ, 3ಡಿ ಒಂದು ಸಲ ಡಬ್ ಮಾಡಿದ್ರಂತೆ.

  ದರ್ಶನ್ ಕುರುಕ್ಷೇತ್ರದಿಂದ ಮತ್ತೊಂದು ಸರ್ಪ್ರೈಸ್ ಸುದ್ದಿ

  ಅಂದ್ಹಾಗೆ, ಈ ಮಾತನ್ನ ದರ್ಶನ್ ಗಂಭೀರವಾಗಿ ಹೇಳಿಲ್ಲ. ಸಾಮಾನ್ಯವಾಗಿ ಮಾತನಾಡುವಾಗ ನಿರ್ಮಾಪಕ ಮುನಿರತ್ನ ಅವರ ಕಾಲೆಳೆದರು. ಮುನಿರತ್ನ ಕುರುಕ್ಷೇತ್ರ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ತೆರೆಕಾಣುತ್ತಿದೆ.

  ಇನ್ನುಳಿದಂತೆ ನಾಗಣ್ಣ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಮುನಿರತ್ನ ನಿರ್ಮಿಸಿದ್ದಾರೆ. ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಮಾಡಿದ್ದು, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ದರ್ಶನ್, ಅರ್ಜುನ್ ಸರ್ಜಾ, ರವಿಚಂದ್ರನ್, ಸೋನು ಸೂದ್, ಶಶಿ ಕುಮಾರ್, ನಿಖಿಲ್ ಕುಮಾರ್, ಸ್ನೇಹಾ, ಮೇಘನಾ ರಾಜ್, ಶ್ರೀನಿವಾಸ ಮೂರ್ತಿ, ಅಂಬರೀಶ್, ಶ್ರೀನಾಥ್ ಸೇರಿದಂತೆ ಹಲವರು ನಟಿಸಿದ್ದಾರೆ.

  English summary
  Challenging star darshan funny talk on kurukshetra movie producer munirathna in kurukshetra audio release event.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X